ಕಾಮೆಡ್-ಕೆ ಫಲಿತಾಂಶ ಜ್ಞಾನಸುಧಾಕ್ಕೆ ಸಾವಿರದೊಳಗೆ 15 ರ್ಯಾಂಕುಗಳು

ಪ್ರಿಯಾಂಶ್‍ಗೆ 11ನೇ ರ್ಯಾಂಕ್ ಹಾಗೂ ಬಿಪಿನ್ ಜೈನ್ 42ನೇರ್ಯಾಂಕ್ ಉಡುಪಿ: ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ)ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೇಜ್ ನೊಂದಿಗೆ ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಪ್ರಿಯಾಂಶ್.ಎಸ್.ಯು 99.9913580 ಪರ್ಸಂಟೇಜ್ ನೊಂದಿಗೆ 11ನೇ ರ್ಯಾಂಕ್, ಬಿಪಿನ್ ಜೈನ್ ಬಿ.ಎಂ. 99.9625511 ಪರ್ಸಂಟೇಜ್ ನೊಂದಿಗೆ 42ನೇ ರ್ಯಾಂಕ್ ಪಡೆಯುವುದರ ಜೊತೆಗೆ, […]

ಉಡುಪಿ: ಮೇ.29, 30ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ.

ಉಡುಪಿ: ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಇಂದ್ರಾಳಿ, ಫೀಡ‌ರ್ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಮೇ.29ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಹಮ್ಮಿಕೊಳ್ಳಲಾಗಿದೆ. ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಮೇ.30ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪ್ರಗತಿನಗರ ಫೀಡರ್ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು ಪ್ರದೇಶಗಳಲ್ಲಿ ವಿದ್ಯುತ್ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

ಕುಂದಾಪುರ: ವ್ಯಕ್ತಿ ಮೃತ್ಯು.

ಕುಂದಾಪುರ: ಕುಂದಾಪುರ ಲಾಡ್ಜ್ ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಹುಬ್ಬಳ್ಳಿಯ ರೇಣುಕಾ ನಗರ ನಿವಾಸಿ ಗುರಯ್ಯ (47) ಅವರು ಮದ್ಯದ ಚಟ ಹೊಂದಿದ್ದು, ಮೇ.19ರಂದು ಮನೆಬಿಟ್ಟು ಹೋಗಿದ್ದರು. ಕುಂದಾಪುರದ ಲಾಡ್ಜ್‌ನಲ್ಲಿ ಬಾಡಿಗೆಯಲ್ಲಿ ಇದ್ದವರು ಕಳೆದ 2 ದಿನಗಳಿಂದ ಬಾಗಿಲು ತೆರೆಯಲಿಲ್ಲ ಎಂಬ ಮಾಹಿತಿಯನ್ನು ಅವರ ಪತ್ನಿಗೆ ನೀಡಲಾಗಿತ್ತು. ಅವರು ಅನಾ ರೋಗ್ಯದಿಂದ ಅಥವಾ ವಿಪರೀತ ಶರಾಬು ಸೇವನೆಯಿಂದ ಮೃತ ಪಟ್ಟಿರಬಹುದು ಎಂದು ಪ್ರಕರಣ ದಾಖಲಾಗಿದೆ.

ಫ್ರೈಡ್ ರೈಸ್ ತಿಂದು ಏಳು ವರ್ಷದ ಬಾಲಕಿ ಮೃತ್ಯು.

ರಾತ್ರಿ ಊಟ ಮಾಡಿದ ನಂತರ ಏಳು ವರ್ಷದ ಬಾಲಕಿಯೊಬ್ಬಳಿಗೆ ಮೂಗಿನಿಂದ ರಕ್ತಸ್ರಾವವಾಗಿದ್ದು ಮೃತಪಟ್ಟಿರುವ ಘಟನೆ ಸೇಲಂನ ಫೇರ್‌ಲ್ಯಾಂಡ್ಸ್‌ನಲ್ಲಿ ನಡೆದಿದೆ.ಬಾಲಕಿಯನ್ನು ಎಸ್ ಲಕ್ಷ್ಮಿಕುಮಾರಿ ಎಂದು ಗುರುತಿಸಲಾಗಿದ್ದು, ಆಕೆ ಫ್ರೈಡ್ ರೈಸ್ ಅನ್ನು ಇಷ್ಟಪಡುತ್ತಿದ್ದಳು. ಆಕೆ ಅದನ್ನು ನಿಯಮಿತವಾಗಿ ತಿನ್ನುತ್ತಿದ್ದಳು. ಶುಕ್ರವಾರ ರಾತ್ರಿ ಫ್ರೈಡ್ ರೈಸ್, ಚಪಾತಿ ಮತ್ತು ಬದನೆಕಾಯಿ ಕರಿಯನ್ನು ತಿಂದ ಬಳಿಕ ರಾತ್ರಿ 10 ಗಂಟೆಯ ಸುಮಾರಿಗೆ ಮೂಗಿನಲ್ಲಿ ರಕ್ತಸ್ರಾವ ಆರಂಭವಾಯಿತು ಎಂದು ಆಕೆಯ ತಾಯಿ ಎಸ್ ಪೂಜಾಕುಮಾರಿ ಟಿಎನ್ಐಇಗೆ ತಿಳಿಸಿದ್ದಾರೆ.ಪೋಷಕರು ಆಕೆಯನ್ನು ಕೂಡಲೇ ಸೇಲಂ ಸರ್ಕಾರಿ […]

ಮಲ್ಪೆ: ವ್ಯಕ್ತಿ ಮೂರ್ಛೆರೋಗದಿಂದ ಮೃತ್ಯು.

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರಿಕಾ ಕೆಲಸವನ್ನು ಮಾಡುತ್ತಿದ್ದ ದಾವಣಗೆರೆ ಚೆನ್ನಗಿರಿಯ ಹನುಮಂತ (56) ಅವರಿಗೆ ಮೇ 25ರಂದು ಮೂರ್ಛೆ ರೋಗ ಬಂದು ಸಾವನ್ನಪ್ಪಿದ್ದಾರೆ. ಅವರು ಕಳೆದ 20 ವರ್ಷದಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಅವರಿಗೆ ವಿಪರೀತ ಮಧ್ಯಪಾನ ಮಾಡುವ ಚಟವಿತ್ತು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.