ಉಡುಪಿಯ ಜಾಹಿರಾತು ಕಂಪೆನಿಗೆ ವೀಡಿಯೊ ಎಡಿಟರ್ – ರೀಲ್ ಎಡಿಟರ್ ಬೇಕಾಗಿದ್ದಾರೆ

ಉಡುಪಿಯ ಜಾಹಿರಾತು ಕಂಪೆನಿಗೆ ವೀಡಿಯೊ ಎಡಿಟರ್ – ರೀಲ್ ಎಡಿಟರ್ ಬೇಕಾಗಿದ್ದಾರೆ. ಪ್ರೀಮಿಯರ್ ಪ್ರೊ, ಆಫ್ಟರ್ ಎಫೆಕ್ಟ್ಸ್ ಅನುಭವ ಇರುವವರಿಗೆ ಆದ್ಯತೆ.

ಝಾರಾ ಹೋಟೆಲ್ ಅಕ್ರಮ ಕಟ್ಟಡ ವಾರದೊಳಗೆ ತೆರವಿಗೆ ಕ್ರಮ ಕೈಗೊಳ್ಳಿ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಹೋಟೆಲ್ ಝಾರಾ ಸಹಿತ ಹಲವಾರು ಅಕ್ರಮ ಕಟ್ಟಡಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ ನಿರ್ಮಾಣಗೊಂಡ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ನಗರಸಭೆ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮವಹಿಸಿ ವಾರದೊಳಗೆ ಕಟ್ಟಡಗಳ ತೆರವಿಗೆ ಮುಂದಾಗುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಬಳಿಯ ಅಂಜುಮಾನ್ ರಸ್ತೆಯ ಝಾರಾ ಹೋಟೆಲ್ 2 ವರ್ಷದ ಹಿಂದೆ ನಗರಸಭೆ ತೆರವುಗೊಳಿಸಿದ್ದ ಜಾಗದಲ್ಲಿಯೇ ಮತ್ತೆ ಅದೇ ಹೋಟೆಲ್ ಅಕ್ರಮವಾಗಿ ತಲೆ […]

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಕಾರ್ಯಕರ್ತರ ಸಭೆ.

ಮಂಗಳೂರು: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರ ಸಭೆಯು ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಕಾರ್ಕಳ, ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ […]

ತರೀಕೆರೆ: ಮೈತ್ರಿ ಅಭ್ಯರ್ಥಿಗಳ ಪರ ಮತಯಾಚನೆ, ಪೂರ್ವಭಾವಿ ಸಭೆ

ತರೀಕೆರೆ : ವಿಧಾನ ಪರಿಷತ್ ನೈರುತ್ಯ ಪದವಿಧರ ಮತ್ತು ನೈರುತ್ಯ ಶಿಕ್ಷಕರ ಚುನಾವಣೆಯ ಹಿನ್ನೆಲೆಯಲ್ಲಿ ತರೀಕೆರೆ ಮಂಡಲದ ವತಿಯಿಂದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಹಾಗೂ ಚುನಾವಣಾ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ತರೀಕೆರೆ ಮಂಡಲದ ಬಿಜೆಪಿ ವಾರ್ಡ್ ಅಧ್ಯಕ್ಷರು , ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ ಚುನಾವಣೆಯ ರೂಪುರೇಷೆಗಳನ್ನು ತಿಳಿಸಿದರು‌. ಈ ವೇಳೆ ತಮ್ಮ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳಲ್ಲಿ ಪದವೀಧರ ಮತದಾರರನ್ನು ಸಂಧಿಸಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ […]

ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ಅವಘಡ, 28 ಜನರು ಮೃತ್ಯು.

ಗುಜರಾತ್ ಸರ್ಕಾರ ಸೋಮವಾರ, 28 ಜೀವಗಳನ್ನು ಬಲಿ ಪಡೆದ ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಪಾಲಿಕೆ ಸಿಬ್ಬಂದಿ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯ:ಗೇಮ್ ಝೋನ್ ಕಾರ್ಯನಿರ್ವಹಿಸಲು ಅನುಮತಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ದುರ್ಘಟನೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.ಶನಿವಾರದಂದು ಬೆಂಕಿ ಸ್ಫೋಟಗೊಂಡ ಈ ಸ್ಥಳದಲ್ಲಿ ಅಗ್ನಿಶಾಮಕ ಎನ್ಒಸಿ (NOC certificate) ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಆಟದ ವಲಯವು ರಸ್ತೆಗಳು ಮತ್ತು ಕಟ್ಟಡಗಳ […]