ಮಣಿಪಾಲ: MSDC ಓರೆನ್ ಇಂಟರ್ನ್ಯಾಷನಲ್’ನಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭ

ಮಣಿಪಾಲ: (MSDC)ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ.(ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ಓರೆನ್ ಇಂಟರ್ನ್ಯಾಷನಲ್’ನಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಯುವತಿಯರಿಗೆ ಇದೊಂದು ಅದ್ಬುತ ಅವಕಾಶವಾಗಿದೆ.ಕೋರ್ಸ್ ಗಳು:✳️ಬ್ಯೂಟಿಷಿಯನ್ ಕೋರ್ಸ್‌ಗಳು✳️ಮೇಕಪ್ ಕೋರ್ಸ್‌ಗಳು✳️ನೇಲ್ ಆರ್ಟ್ ಮತ್ತು ಎಕ್ಸ್ಟೆಂಶನ್✳️ಕಾಸ್ಮೆಟಾಲಜಿ ಕೋರ್ಸ್‌ಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಸ್ಥಳ: MSDC, ಓರೇನ್ ಇಂಟರ್ನ್ಯಾಷನಲ್, 3ನೇ ಮಹಡಿ, ಈಶ್ವರನಗರ, ಮಣಿಪಾಲ. 📞 8123165068, 📞 8123163935

ಪುತ್ತೂರು: ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತ್ಯು.

ಪುತ್ತೂರು: ಕಬಕ ಸಮೀಪದ ಕೂವೆತ್ತಿಲದಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾಗಿ ವರದಿಯಾಗಿದೆ‌.ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ, ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಂಜುಶ್ರೀ (20) ಮೃತ ಯುವತಿ. ಕೆಲ ಸಮಯಗಳ ಹಿಂದೆ ಕಬಕ ಸಮೀಪದ ಕೂವೆತ್ತಿಲದಲ್ಲಿ ಆಲ್ಟೋ ಕಾರು ಹಾಗೂ ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಮಂಜುಶ್ರೀ ಗಂಭೀರ ಗಾಯಗೊಂಡಿದ್ದರು.‌ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಮೇ.‌24ರ ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮನೆಯವರು […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ವಿನೂತನ ಮಾದರಿಯ ‘ಅಕ್ಕಿ ಗಿರಣಿಯ ಆವಿಷ್ಕಾರ’.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಂಶುಮಾನ್, ಕೆ. ಎನ್. ಶ್ರೀಶ ಆಚಾರ್, ರೋಹನ್ ಯು ಪಾಲನ್ ಮತ್ತು ವಿಕ್ರಮ್ ಇವರುಗಳು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಅನಂತ್ ಮೋಹನ್ ಮಲ್ಯ ಇವರ ಮಾರ್ಗದರ್ಶನದಲ್ಲಿ “ಡೊಮೆಸ್ಟಿಕ್ ರೈಸ್ ಮಿಲ್ ವಿತ್ ಡಿಸ್ಟೋನರ್” (ವಿನೂತನ ಮಾದರಿಯ ಅಕ್ಕಿ ಗಿರಣಿ) ಅನ್ನು ಅಭಿವೃದ್ಧಿ ಪಡಿಸಿರುತ್ತಾರೆ. ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಭತ್ತವನ್ನು ಬೆಳೆಯುವ ರೈತರು ತಾವು ಬೆಳೆದ ಭತ್ತವನ್ನು ಅಕ್ಕಿ […]

ಉಡುಪಿ: ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ – ಜೂನ್ 30ರ ವರೆಗೆ ಅವಕಾಶ.

ಉಡುಪಿ, ಮೇ 24: ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ, ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡ ಬಳಕೆ ಆಗಬೇಕೆನ್ನುವ ಹಿತದೃಷ್ಟಿಯಿಂದ ಹಾಗೂ ರಾಜ್ಯ ಭಾಷೆ ಕನ್ನಡದ ಉಳಿವಿಗಾಗಿ ಮತ್ತು ಸಂಸ್ಕೃತಿ ತಿಳಿದುಕೊಳ್ಳುವ ಉದ್ದೇಶದಿಂದ ಎಲ್ಲಾ ಅಂಗಡಿ, ಮುಂಗ್ಗಟ್ಟು, ಹೊಟೇಲ್ ಹಾಗೂ ಕಂಪೆನಿಗಳು ಕನ್ನಡದಲ್ಲಿ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಹಾಗೂ ಇತರೆ ಭಾಷೆಯ ನಾಮಫಲಕಕ್ಕಿಂತ ಕನ್ನಡದ ನಾಮಫಲಕವನ್ನು ದೊಡ್ಡದಾಗಿ ಅಳವಡಿಸಲು ಜೂನ್ 30ರ ವರೆಗೆ ಅವಕಾಶ ನೀಡಲಾಗಿದ್ದು, ನಂತರದ ಅವಧಿಯಲ್ಲಿ ರೂ.5000, ಮತ್ತು 10,000 ದಂಡ ವಿಧಿಸಲಾಗುವುದು ಹಾಗೂ ಕನ್ನಡ […]

ಕಾರ್ಕಳ: ವ್ಯಕ್ತಿ ನೇಣಿಗೆ ಶರಣು.

ಕಾರ್ಕಳ: ತಾಲೂಕಿನ ಬೆಳ್ಮಣ್‌ ಗ್ರಾಮದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೇರಲ್ ಪಾದೆಯ ಇಮ್ಯಾನುವಲ್ ವಿಲ್ಲಾ ಎಂಬಲ್ಲಿ ನೊಯಲ್ ಮಾರ್ಟಿಸ್ (46) ವಾಸವಾಗಿದ್ದು, ಅವರು ಕಳೆದ 2 ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಮನನೊಂದು ಮೇ 02 ರಿಂದ ಮೇ 24ರ ನಡುವಿನ ಅವಧಿಯಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನೋಯಲ್‌ ಅವರ ಅಣ್ಣ ರಾಜೇಶ್ ಮಾರ್ಟಿಸ್ ನೀಡಿದ ಮಾಹಿತಿಯಂತೆ […]