ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಯತ್ನ: ಡಾ|ಧನಂಜಯ ಸರ್ಜಿ

ಉಡುಪಿ: ಪ್ರತಿ ವರ್ಷ ರಾಜ್ಯದಲ್ಲಿ 2 ಲಕ್ಷ ಯುವತಿಯರು, 1.70 ಲಕ್ಷ ಯುವಕರು ಪದವಿ ಪಡೆಯುತ್ತಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೌಶಲ್ಯಕೇಂದ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಹೆಚ್ಚಿನ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳ ಅಗತ್ಯವಿದೆ. ಅನುದಾನಿತ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸಬೇಕು ಸರ್ಕಾರಿ ನೌಕರರಿಗೂ ಖಾಸಗಿ ಆಸ್ಪತ್ರೆಗಳಲ್ಲೂ ಉನ್ನತ ಚಿಕಿತ್ಸಾ ಸೌಲಭ್ಯಗಳು ಲಭಿಸಬೇಕು. ಇಎಸ್‌ಐ ಮಿತಿಯನ್ನು […]

ದ್ವಿತೀಯ ಪಿಯುಸಿ: ಶ್ರೀ ವೆಂಕಟರಮಣ ಕಾಲೇಜಿಗೆ ದ್ವಿತೀಯ ರ್ಯಾಂಕ್ ನೊಂದಿಗೆ ಶೇ 100 ಫಲಿತಾಂಶ, 16 ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್.

ಕುಂದಾಪುರ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಹೆಬ್ಬಾರ್ ದ್ವಿತೀಯ ಪಿಯುಸಿ 2 ನೇ ಹಂತದ ವಾರ್ಷಿಕ ಪರೀಕ್ಷೆ ಯಲ್ಲಿ 597 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಅನನ್ಯ ಸಾಧನೆಗೆ ಸಾಕ್ಷಿಯಾಗಿದ್ದಾಳೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜು ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, 16 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ಸ್ಥಾನ ಪಡೆಯುವುದರ […]

ಶಿರ್ವ: ಸಿಡಿಲು ಬಡಿದು ಯುವಕ ಮೃತ್ಯು.

ಉಡುಪಿ: ಸ್ನಾನ ಮಾಡಲೆಂದು ಬಚ್ಚಲು ಮನೆ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಶಿರ್ವ ಮಾಣಿಬೆಟ್ಟು ಬಳಿ ಗುರುವಾರ ರಾತ್ರಿ ನಡೆದಿದೆ. ಶಿರ್ವ ಎಂಎಸ್ಆರ್ ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ, ಶಿರ್ವ ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿಯವರ ಪುತ್ರ ರಕ್ಷಿತ್ ಪೂಜಾರಿ (20) ಮೃತ ದುರ್ದೈವಿ. ಇವರು ನಿನ್ನೆ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದ ಅವರನ್ನು ಮನೆ […]

ಕಾಪು: ಮೊಬೈಲ್‌ಗೆ ಬಂದ ಲಿಂಕ್‌ನ್ನು ಕ್ಲಿಕ್‌ ಮಾಡಿ ಸಾವಿರಾರು ರೂಪಾಯಿ ವಂಚನೆ – ಪ್ರಕರಣ ದಾಖಲು.

ಕಾಪು: ಕಾಪು ಸಮೀಪ ಐದು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಭಾಸ್ಕರ್‌ ಎಂಬುವವರು ತಮ್ಮ ಮೊಬೈಲ್‌ಗೆ ಬಂದ ಲಿಂಕ್‌ನ್ನು ಕ್ಲಿಕ್‌ ಮಾಡಿ 82,200 ರೂಪಾಯಿ ವಂಚನೆಗೊಳಗಾದ ಘಟನೆ ಕಾಪುವಿನಲ್ಲಿ ಸಂಭವಿಸಿದೆ. ಕೆನರಾ ಬ್ಯಾಂಕ್‌ ಹೆಸರಿನಲ್ಲಿ ಭಾಸ್ಕರ್‌ ಅವರ ಮೊಬೈಲ್‌ಗೆ ಮೇ.22ರಂದು ಬಂದಿದ್ದ ಲಿಂಕ್‌ನ್ನು ಕ್ಲಿಕ್‌ ಮಾಡಿದ ಪರಿಣಾಮ ಕೆನರಾ ಬ್ಯಾಂಕ್‌ನ 5 ಖಾತೆಗಳಲ್ಲಿದ್ದ 82,200 ರೂಪಾಯಿ ಕಡಿತವಾದ ಬಗ್ಗೆ ಮೆಸೇಜ್‌ ಬಂದಿತ್ತು. ಬಳಿಕ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಖಾತೆಯಲ್ಲಿ ಹಣ ಕಡಿತವಾಗಿರುವ ಬಗ್ಗೆ ಮಾಹಿತಿ ಖಚಿತವಾಗಿದ್ದು ಯಾರೋ ಸೈಬರ್‌ […]

HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರರಿಗೆ ಜೂನ್​ 12ರ ವರೆಗೆ ಕಾಲಾವಕಾಶ.

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರ್ಕಾರ‌ ನೀಡಿದ ಗಡುವು ಈ ತಿಂಗಳು ಅಂದರೆ ಮೇ 31ಕ್ಕೆ ಅಂತ್ಯವಾಗಲಿದೆ. ಆದರೂ ಸಹ ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸದವರ ವಿರುದ್ಧ ಜೂನ್ 12ರವರೆಗೆ ಯಾವುದೇ ಕ್ರಮವಿಲ್ಲ. ಈ ಬಗ್ಗೆ ಸ್ವತಃ ರಾಜ್ಯ ಸರ್ಕಾರವೇ ಹೈಕೋರ್ಟ್​ಗೆ ತಿಳಿಸಿದೆ. ಹೀಗಾಗಿ ಹೆಚ್​​ಎಸ್​ಆರ್​ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳದ […]