ಜೂ.4 ರಂದು ಉಡುಪಿ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯಲ್ಲಿ ಮತ ಎಣಿಕೆ – ನಿಷೇಧಾಜ್ಞೆ ಜಾರಿ
ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನದ ಮತ ಎಣಿಕೆ ಕಾರ್ಯವು ಜೂನ್ 4 ರಂದು ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯವನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಮತ್ತು ಮತ ಎಣಿಕೆಯ ನಂತರ ಫಲಿತಾಂಶ ಪ್ರಕಟಣೆಗೊಂಡು, ಫಲಿತಾಂಶದ ಪ್ರಭಾವದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳು ಮತ್ತು ಬೆಂಬಲಿಗರು, ಗುಂಪು ಗುಂಪಾಗಿ ಸೇರಿ ಮೆರವಣಿಗೆ/ ವಿಜಯೋತ್ಸವಗಳನ್ನು ಆಚರಿಸಲು ಅವಕಾಶ ನೀಡಿದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಗಳಿರುವ ಹಿನ್ನೆಲೆ, […]
ಪರ್ಯಾಯೋತ್ಸವ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ
ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಹಾಗೂ ಫೋಟೋ ಕಾಡ್ತಾ ಸಂಸ್ಥೆಯ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಇತ್ತೀಚೆಗೆ ಜಗನ್ನಾಥ ಸಭಾಭವನದಲ್ಲಿ ನಡೆಯಿತು. ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಸಹಾಯಕ ಮಹಾಪ್ರಬಂಧಕ ಪ್ರವೀಣ್ ಕೊರಂಗ್ರಪಾಡಿ ಬಹುಮಾನ ವಿತರಿಸಿ ಮಾತನಾಡುತ್ತಾ ಯಾವುದೇ ಕಾರಣವಿಲ್ಲದೆ ಮುಖದಲ್ಲಿ ನಗುವನ್ನು ತರಿಸಲು ಒಬ್ಬ ಛಾಯಾಗ್ರಹಕನಿಗೆ ಮಾತ್ರ ಸಾಧ್ಯ ಯಾವುದೇ ಸಮಾರಂಭಗಳಲ್ಲಿ ಛಾಯಾಗ್ರಹಕರು ನಮ್ಮ ಮುಖದಲ್ಲಿ ನಗುವನ್ನು ತರಿಸಿ ಛಾಯಾಚಿತ್ರವನ್ನು ಕ್ಲಿಕ್ಕಿಸುತ್ತಾರೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ […]
ಉಡುಪಿಯ ಜಾಹೀರಾತು ಕಂಪೆನಿಗೆ Digital Marketing Executive ಬೇಕಾಗಿದ್ದಾರೆ.
ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕನಿಷ್ಠ 1 ವರ್ಷ ಅನುಭವ ಇರುವವರಿಗೆ ಆದ್ಯತೆ. ಆಕರ್ಷಕ ವೇತನದೊಂದಿಗೆ ಇತರೆ ಸೌಲಭ್ಯಗಳು. ಆಸಕ್ತರು ತಕ್ಷಣ ಸಂಪರ್ಕಿಸಿ. 9448379989
ಮಣಿಪಾಲದ MSDCಯಲ್ಲಿ ಕೌಶಲ್ಯಾಧಾರಿತ ಕೋರ್ಸ್: ಯುವಕರಿಗೆ ಇದೊಂದು ಉತ್ತಮ ಅವಕಾಶ.
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ತನ್ನ (MSDC), ಮಹತ್ವಾಕಾಂಕ್ಷೆಯ ಕೌಶಲ್ಯ ಭಾರತ ಮಿಷನ್ ಸಾಕಾರಗೊಳಿಸುವ ನಿಟ್ಟಿನಲ್ಲಿ ಮತ್ತು ದೇಶದಲ್ಲಿ ಕೌಶಲ್ಯಪೂರ್ಣ ಮಾನವಶಕ್ತಿಯ ಬೇಡಿಕೆ ಮತ್ತು ಪೂರೈಕೆಯಲ್ಲಿನ ದೊಡ್ಡ ಅಂತರವನ್ನು ಕಡಿಮೆ ಮಾಡಲು ಹೊರಟಿದೆ. ಎಂಎಸ್‌ಡಿಸಿಯು ಮಣಿಪಾಲದ ಡಾ ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನಲ್ಲಿ 18 ಅತ್ಯಾಧುನಿಕ ಕೌಶಲ್ಯ ಶಾಲೆಗಳನ್ನು ಸ್ಥಾಪಿಸಿದೆ, ಗ್ರಾಮೀಣ ಪ್ರದೇಶದ ಯುವಕರಲ್ಲಿ ಕೌಶಲ್ಯಗಳನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ. ಕೌಶಲ್ಯ ಕೇಂದ್ರವು ಐಟಿಐ, ಡಿಪ್ಲೊಮಾ, ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಅವಧಿಯ […]
ಉಡುಪಿ: ಮತ ಎಣಿಕೆ ಕೇಂದ್ರಕ್ಕೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಭೇಟಿ.
ಉಡುಪಿ: ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಬುಧವಾರ ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ವಿದ್ಯಾಸಂಸ್ಥೆಯ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸೈಂಟ್ ಸಿಸಿಲೀಸ್ ವಿದ್ಯಾಸಂಸ್ಥೆಯಲ್ಲಿ ಮತಯಂತ್ರಗಳನ್ನು ಭದ್ರತೆಯಲ್ಲಿ ಇಟ್ಟಿರುವ ಸ್ಟ್ರಾಂಗ್ ರೂಂ, ಸಿ.ಸಿ.ಟಿ.ವಿ ಕ್ಯಾಮೆರಾಗಳ ವೀಕ್ಷಣಾ ಕೇಂದ್ರ, ವಿವಿಧ ಹಂತಗಳಲ್ಲಿ ಭದ್ರೆತಯನ್ನು ಒದಗಿಸಿರುವ ಪೋಲೀಸರ ಪಹರೆ ಸೇರಿದಂತೆ ಮತ್ತಿತರ ಭದ್ರತೆಯ ಬಗ್ಗೆ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮತ ಎಣಿಕೆಗೆ ನಡೆಸಿರುವ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ […]