ಜ್ಞಾನಸುಧಾ – ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಲಾಂಗ್ ಟರ್ಮ್ ತರಬೇತಿ
ಉಡುಪಿ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನೀಟ್, ಜೆ.ಇ.ಇ, ಕೆ.ಸಿ.ಇ.ಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಮೋಘ ಸಾಧನೆ ಮಾಡಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ, ಇದೀಗ ನೀಟ್ 2024ರ ಪರೀಕ್ಷೆ ಬರೆದು, ಎಂ.ಬಿ.ಬಿ.ಎಸ್ ಸೀಟು ಪಡೆಯುವಲ್ಲಿ ವಿಫಲರಾದ ಆಯ್ದ ಅರ್ಹ ವಿದ್ಯಾರ್ಥಿಗಳಿಗೆ ಒಂದು ವರ್ಷದ ಸಂಪೂರ್ಣ ಉಚಿತ ಅಥವಾ ಶೇ.50 ಶುಲ್ಕ ವಿನಾಯಿತಿಯೊಂದಿಗೆ ನೀಟ್ ಲಾಂಗ್ ಟರ್ಮ್ ತರಬೇತಿಯನ್ನು ನೀಡುವುದಾಗಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೀಟ್ 2022ರಲ್ಲಿ 107 ವಿದ್ಯಾರ್ಥಿಗಳು ಹಾಗೂ […]
ಉಡುಪಿ: ರಾಮ್ ಅಡ್ವಟೈಸರ್ಸ್ ಮಾಲಕ ರಾಮಚಂದ್ರ ಆಚಾರ್ಯ ನಿಧನ.
ಉಡುಪಿ: ನಗರದ ರಾಮ್ ಅಡ್ವರ್ಟೈಸರ್ಸ್ ಮಾಲಕ ರಾಮಚಂದ್ರ ಆಚಾರ್ಯ (66) ಮೇ.22ರಂದು ನಿಧನರಾದರು. ಮೃತರು ಪತ್ನಿ ಪುತ್ರಿಯನ್ನು ಅಗಲಿದ್ದಾರೆ. 25 ವರ್ಷಗಳಿಂದ ಜಾಹೀರಾತು ಏಜೆನ್ಸಿ ನಡೆಸಿಕೊಂಡು ಬಂದಿದ್ದ ಅವರು ಉಡುಪಿಯ ರೈಲ್ವೇ ಯಾತ್ರಿ ಸಂಘದ ಖಜಾಂಚಿಯಾಗಿ ಕೆಲಸ ನಿರ್ವಹಿಸಿ, ಉಡುಪಿಗೆ ಹೆಚ್ಚಿನ ರೈಲ್ವೇ ಸೌಕರ್ಯಕ್ಕಾಗಿ ಹೋರಾಟ ನಡೆಸಿದ್ದರು. ಕಿನ್ನಿಮೂಲ್ಕಿ ವೀರಭದ್ರ ದೇವಾಲಯದ ಸಹಾಯಕ ಅರ್ಚಕರಾಗಿಯೂ ಕೆಲಸ ನಿರ್ವಹಿಸಿದ್ದರು. ಉಡುಪಿ ಜನಸಂಘದ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಕಿನ್ನಿಮೂಲ್ಕಿ ವಾರ್ಡ್ನ ಬೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಜೆನೆಟಿಕ್ಸ್ ವಿಭಾಗದಿಂದ ಮೇ 25ರಂದು ‘ಓಪನ್ ಡೇ’ ಕಾರ್ಯಕ್ರಮ
ಮಣಿಪಾಲ: ಅಪರೂಪದ ಅನುವಂಶಿಕ ಅಸ್ವಸ್ಥತೆಗಳಲ್ಲಿ ವಿಶೇಷ ಸೇವೆಗಳಿಗೆ ಹೆಸರುವಾಸಿಯಾದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಜೆನೆಟಿಕ್ಸ್ (ತಳಿಶಾಸ್ತ್ರ)ವಿಭಾಗವು ಮೇ 25, 2024 ರ ಶನಿವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ‘ಓಪನ್ ಡೇ’ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ಕಾರ್ಯಕ್ರಮವು ಮಣಿಪಾಲದ ಬೇಸಿಕ್ ಲೈಫ್ ಸೈನ್ಸ್ ಕಟ್ಟಡದ 3ನೇ ಮಹಡಿಯಲ್ಲಿರುವ ವೈದ್ಯಕೀಯ ತಳಿಶಾಸ್ತ್ರ ವಿಭಾಗದಲ್ಲಿ ನಡೆಯಲಿದೆ. ತಳಿಶಾಸ್ತ್ರ ಸಂಬಂಧಿತ ಆರೋಗ್ಯ ಮತ್ತು ರೋಗದ ಕುರಿತು ಎಲ್ಲರಿಗೂ ಪರಿಚಯಿಸಲು ಮೂಲಭೂತ ಪರಿಕಲ್ಪನೆಗಳೊಂದಿಗೆ ಈ […]
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಗಳ ಆಶೀರ್ವಾದ ಪಡೆದ ಡಾ.ಧನಂಜಯ ಸರ್ಜಿ.
ಉಡುಪಿ: ನೈರುತ್ಯ ಪಧವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಉಡುಪಿಯ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಎಸ್. ದತ್ತಾತ್ರಿ , ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಗಳೂರು: ’ಗ್ರಾಮಲೋಕ’ ಸಾಹಿತ್ಯ ಕಾರ್ಯಕ್ರಮ
ಮಂಗಳೂರು: ಸಾಹಿತ್ಯ ಅಕಾಡೆಮಿ, ನವದೆಹಲಿ ಹಾಗೂ ಕೊಂಕಣಿ ಬರಹಗಾರ ಹಾಗೂ ಕಲಾವಿದರ ಒಕ್ಕೂಟ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಬದಿಯಡ್ಕ ಪಂಚಾಯತಿನ ಬೇಳ ಗ್ರಾಮದಲ್ಲಿ ’ಗ್ರಾಮಲೋಕ’ ವಿಭಿನ್ನ ಸಾಹಿತ್ಯ ಕಾರ್ಯಕ್ರಮ ನಡೆಯಿತು. ಯುವ ಬರಹಗಾರರು ಹಾಗೂ, ನಾಟಕ, ಟಿವಿ ಧಾರವಾಹಿ ನಿರ್ದೇಶಕರಾದ ಸ್ಟ್ಯಾನಿ ಬೇಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗದ ಸಂಯೋಜಕರಾದ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿಯ ಇತಿಹಾಸ ಹಾಗೂ ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು. ಯುವಸಾಹಿತಿಗಳಾದ ರಾಜು ಉಕ್ಕಿನಡ್ಕ, ರವಿ ಕುಮಾರ್ ಕ್ರಾಸ್ತ, […]