ಡಾ.ಧನಂಜಯ ಸರ್ಜಿ ಸಮರ್ಥ ಅಭ್ಯರ್ಥಿ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅಭಿಪ್ರಾಯ

ಆನವಟ್ಟಿ: ಡಾ.ಧನಂಜಯ ಸರ್ಜಿ ಅವರ ವೈದ್ಯ ವೃತ್ತಿಯ ಅನುಭವ ಹಾಗೂ ಪದವೀಧರರ ಸಂಪೂರ್ಣ ಸಮಸ್ಯೆಗಳ ಅರಿವು ಅವರಿಗಿರುವುದರಿಂದ ಪರಿಷತ್ ಗೆ ಆಯ್ಕೆ ಮಾಡಿದರೆ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ನೈರುತ್ಯ ಪದವೀದರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೊರಬ ಮಂಡಲ ಮತದಾರರ ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ […]
ಹಿರಿಯಡಕ: ಮೇ.26 ರಂದು ರಕ್ತದಾನ ಶಿಬಿರ

ಹಿರಿಯಡಕ: ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಿರಿಯಡಕ ವಲಯ, ಎಮ್.ಜೆ. ಫ್ರೆಂಡ್ಸ್ ಮುಂಡುಜೆ, ಸಹಾಯ ಹಸ್ತ ಮುಂಡುಜೆ ಹಿರಿಯಡಕ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ಮೇ.26 ರಂದು ಮುಂಡುಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಉಡುಪಿಯ ಜಾಹೀರಾತು ಕಂಪೆನಿಗೆ Digital Marketing Executive ಬೇಕಾಗಿದ್ದಾರೆ

ಉಡುಪಿಯ ಜಾಹೀರಾತು ಕಂಪೆನಿಗೆ Digital Marketing Executive ಬೇಕಾಗಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕನಿಷ್ಠ 1 ವರ್ಷ ಅನುಭವ ಇರುವವರಿಗೆ ಆದ್ಯತೆ. ಆಕರ್ಷಕ ವೇತನದೊಂದಿಗೆ ಇತರೆ ಸೌಲಭ್ಯಗಳು. ಆಸಕ್ತರು ತಕ್ಷಣ ಸಂಪರ್ಕಿಸಿ. 9448379989
ಬ್ರಹ್ಮಾವರ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತ್ಯು.

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾವಂಜೆ ಗ್ರಾಮದ ಪರಾರಿಮಠ ಬಳಿ ಬಾವಿಗೆ ಬಿದ್ದ ಚೆಂಡನ್ನು ತೆಗೆಯುವಾಗ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಮೃತಪಟ್ಟವರು ದೀಪಕ್ (58) ಎಂದು ತಿಳಿದು ಬಂದಿದೆ. ಅವರು ಮಕ್ಕಳೊಂದಿಗೆ ಕ್ರಿಕೆಟ್ ಆಡುವಾಗ ಚೆಂಡು ಸಮೀಪದ ಬಾವಿಗೆ ಬಿದ್ದಿತ್ತು. ಆಗ ಚೆಂಡನ್ನು ಬಾವಿಯಿಂದ ಹೊರಗೆ ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಹಿರಿಯಡಕ: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ.

ಹಿರಿಯಡಕ: ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡಿದ ಆರೋಪಿಗಳ ವಿರುದ್ಧ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಜರಗುತ್ತು ಅಂಜಾರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾದ ರೇವುನಾಥ ಪ್ರೇಮನಾಥ ಸಂದರ್ಶನಕ್ಕೆ ಮೇ 20ರಂದು ಆತನ ಸ್ನೇಹಿತರಾದ ಸುಧೀಶ ಮತ್ತು ವರುಣ ಅವರು ಹಣ್ಣು, ಬಿಸ್ಕೇಟ್‌ಗಳನ್ನು ತಂದಿದ್ದು, ಮುಖ್ಯದ್ವಾರದಲ್ಲಿ ದ್ವಾರ ಪಾಲಕನಾಗಿ ಕರ್ತವ್ಯಕ್ಕೆ ಇದ್ದ ಸಂತೋಷ ದಗಾಟೆ ಅವರಿಗೆ ನೀಡಿ ರೇವುನಾಥ ಅವರಿಗೆ ಕೊಡಲು ತಿಳಿಸಿದ್ದರು. ಅನಂತರ ಕೈದಿಯೊಂದಿಗೆ ಮಾತನಾಡಿ ಅವರು ತೆರಳಿದ್ದರು. ಅನಂತರ ಕಾರಾಗೃಹದ ಸಿಬ್ಬಂದಿ, ಸಹಾಯಕ ಜೈಲರ್ ಸೇರಿ […]