ಕಾರ್ಕಳ: ಶಿರ್ಲಾಲು ಗ್ರಾಮದಲ್ಲಿ ಇಬ್ಬರು ನೀರುಪಾಲು.

ಕಾರ್ಕಳ: ತಾಲೂಕಿನ ಶಿರ್ಲಾಲು ಗ್ರಾಮದ ಮುಗೆರ್ಕಳ ಸಮೀಪದ ಉಬ್ಬರಬೈಲು ಎಂಬಲ್ಲಿ ಮೀನು ಹಿಡಿಯಲು‌‍ ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಮೇ.19 ರಂದು ಸಂಭವಿಸಿದೆ. ನಿವಾಸಿ ಹರೀಶ್ ಪೂಜಾರಿ (48) ಮತ್ತು ಅವರ ಅಕ್ಕನ ಮಗ ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜು ವಿದ್ಯಾರ್ಥಿ ಹೃತೇಶ್ ಪೂಜಾರಿ (18) ಉಬ್ಬರಬೈಲು ಗುಂಡಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಂದರ್ಭ ನೀರಿನ ಸುಳಿಗೆ ಸಿಕ್ಕಿ ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಅಜೆಕಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೆ.ಇ.ಇ ಮೈನ್-ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಅಂತಿಮ ಫಲಿತಾಂಶ ಪ್ರಕಟ.

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೇಜ್ ಗಳಿಸಿರುತ್ತಾರೆ. ವಿದ್ಯಾರ್ಥಿಗಳಾದ ಬಿಪಿನ್ ಜೈನ್.ಬಿ.ಎಂ. 99.9754815ಪರ್ಸಂಟೇಜ್ (ಗಣಿತ ಶಾಸ್ತ್ರ 100 ಪರ್ಸಂಟೇಜ್, ಆಲ್ ಇಂಡಿಯಾ ರ್ಯಾಂಕ್ 22), ಕೇದಾರ್ ರಮೇಶ್ ಕುಲಕರ್ಣಿ 99.9670351 ಪರ್ಸಂಟೇಜ್(ಆಲ್ ಇಂಡಿಯಾ ರ್ಯಾಂಕ್ 32), ಪ್ರಣವ್ ಕುಮಾರ್ ಭಂಡಿ 99.9069226 ಪರ್ಸಂಟೇಜ್ (ಆಲ್ ಇಂಡಿಯಾ ರ್ಯಾಂಕ್ 75), ಚೈತನ್ಯ […]

ಉಡುಪಿ: ಬ್ರಾಹ್ಮಣ ಮಹಾಸಭಾ ರಿ. ಪುತ್ತೂರು ವತಿಯಿಂದ 20ನೇ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಬ್ರಾಹ್ಮಣ ಮಹಾಸಭಾ ಪುತ್ತೂರು ವತಿಯಿಂದ ಸಂಭ್ರಮದ 20ನೇ ವಾರ್ಷಿಕೋತ್ಸವ ಸಮಾರಂಭವು ಪುತ್ತೂರಿನ ಶ್ರೀ ಭಗವತೀ ಸಭಾಗೃಹದಲ್ಲಿ ಜರುಗಿತು. ಭಾವಿಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಇಂದಿನ ಯುವ ಪೀಳಿಗೆ ಸಂಘಟನೆಯಿಂದ ವಿಮುಖರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಕೂಡ ಸೇರಿಸಿಕೊಂಡು ಮುಂದುವರಿದಲ್ಲಿ ವಿಪ್ರ ಸಂಘಟನೆಗಳು ಸದೃಢಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು. ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಹರಿಶ್ಚಂದ್ರ, ಉಡುಪಿ […]

ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ: ಶ್ರೀ ಎಲ್ಲೂರು ಲಕ್ಷ್ಮೀನಾರಾಯಣರಾವ್ ಜ್ಯೋತಿಷ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮೇ.19 ರವಿವಾರ ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರಗಿತು. ಹತ್ತನೆಯ ಹನ್ನೊಂದನೆಯ ಹಾಗೂ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಶ್ರೀ ಆದಿಶಂಕರಚಾರ್ಯರ ಸಂಕ್ಷಿಪ್ತ ಜೀವನ ಚರಿತ್ರೆ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ […]

ಮಣಿಪಾಲ: MSDC ಓರಣೆ ಇಂಟರ್ನ್ಯಾಷನಲ್ ವತಿಯಿಂದ ಮೇಕಪ್ ವಿಭಾಗದಲ್ಲಿ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನ.

ಮಣಿಪಾಲ: ಮಣಿಪಾಲ ಸ್ಕಿಲ್ ಡೆವೆಲವ್ಮೆಂಟ್ ಸೆಂಟರ್ (MSDC) ಓರಣೆ ಇಂಟರ್ನ್ಯಾಷನಲ್ ವತಿಯಿಂದ ಮೇಕಪ್ ವಿಭಾಗದಲ್ಲಿ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮೇಕಪ್ ಅನ್ನು ವೃತ್ತಿಯಾಗಿ ಮಾಡಬಯಸುವವರಿಗೆ ಇದೊಂದು ಒಳ್ಳೆಯ ಆಯ್ಕೆಯಾಗಿದೆ. ಉದ್ಘಾಟನಾ ಕೊಡುಗೆಯನ್ನು ಪಡೆಯಲು ಕರೆ ಮಾಡಿ: 8123165068, 8123163935