ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸೋಣ: ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಪ್ರತಾಪ್ ಸಿಂಹ ನಾಯಕ್ ಕರೆ
ಮಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿ ಮತದಾರರನ್ನು ನೇರವಾಗಿ ಸಂಪರ್ಕ ಮಾಡುವ ಮೂಲಕ ಶ್ರಮಿಸಬೇಕು, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಶಿಕ್ಷಕರ ಕ್ಷೇತ್ರದ ಸಂಚಾಲಕರು ಹಾಗೂ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಕರೆ ನೀಡಿದರು. ಇಲ್ಲಿನ ಅಸೈಗೋಳಿಯ ಬಂಟರ ಭವನದಲ್ಲಿ ಭಾನುವಾರ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಚುನಾವಣೆಗೂ ಅದರದ್ದೇ ಆದ ಮಹತ್ವವಿದೆ, ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಡಾ.ಧನಂಜಯ ಸರ್ಜಿ […]
ಕಾರ್ಕಳ: ಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ – ಇಬ್ಬರು ಕಾರ್ಮಿಕರು ಮೃತ್ಯು.
ಕಾರ್ಕಳ: ತಾಲೂಕಿನ ನಿಟ್ಟೆ ಭ್ರಾಮರಿ ಕ್ರಾಸ್ ನಲ್ಲಿ ಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ನಿಟ್ಟೆ ಗ್ರಾಮದ ದೂಪದಕಟ್ಟೆ ಮರಿಪರಪುವಿನಿಂದ ಕಲ್ಲು ಲೋಡ್ ಮಾಡಿ ಮಂಗಳೂರು ಹೊರಡುವಾಗ ಲಾರಿ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದೆ. ಈ ಪರಿಣಾಮ ಕೊಪ್ಪಳ ಜಿಲ್ಲೆ ಎಲಬುರ್ಗಿ ದೇವಾಳಪುರದ ಕರಿಯಪ್ಪ (22) ಮತ್ತು ನರಿಯಪ್ಪ (27) ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 20, 21ರಂದು ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಕಂಪನಿಯಿಂದ ಕ್ಯಾಂಪಸ್ ಸಂದರ್ಶನ.
ಬಾರ್ಕೂರು: ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಆಡಳಿತಕ್ಕೊಳಪಟ್ಟ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವನ್ನು ಕೊಡಿಸುವ ಬಗ್ಗೆ ಚಿಂತನೆ ನಡೆಸಿ ಪ್ರತಿ ವರ್ಷ ಹಲವು ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ ಮಾಡುತ್ತಾ ಬಂದಿರುತ್ತದೆ. ಮೇ 20 ಮತ್ತು 21 ರಂದು ಪ್ರತಿಷ್ಠಿತ ಕಂಪನಿಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಅವರಿಂದ ಕ್ಯಾಂಪಸ್ ಸಂದರ್ಶನ ಇರುತ್ತದೆ. ಅರ್ಹ ವಿದ್ಯಾರ್ಥಿಗಳು ಇದನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಾರಕೂರು ನ್ಯಾಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಣಿಪಾಲ ಡಾ.ಟಿಎಂಎ ಪೈ ಪಾಲಿಟೆಕ್ನಿಕ್: ಸರ್ವ ಸೌಲಭ್ಯವುಳ್ಳ ಸುಸಜ್ಜಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಸಾಲಿನ ದಾಖಲಾತಿ ಪ್ರಾರಂಭ.
ಮಣಿಪಾಲ: ಡಿಪ್ಲೊಮಾ ತಾಂತ್ರಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸಂಸ್ಥೆ ಎಂಬ ಹೆಗ್ಗಳಿಕೆಯ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಮಣಿಪಾಲ ಕೌಶಲ ಭರಿತ ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಸರ್ವ ಸೌಲಭ್ಯವುಳ್ಳ ಸುಸಜ್ಜಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಸರಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಹಾಗೂ ಮಣಿಪಾಲದ ಸಾಮಾನ್ಯ ಪ್ರವೇಶ ಪರೀಕ್ಷೆ ಎಂಐಟಿಯಲ್ಲಿ ಎಂಜಿನಿಯರಿಂಗ್ ಪದವಿಗೆ ಐಚ್ಛಿಕ ವಿಷಯದಲ್ಲಿ ಪ್ರವೇಶಾತಿ ದೊರಕದ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಎಂಜಿನಿಯರಿಂಗ್ ಪದವಿಯನ್ನು ಲ್ಯಾಟರಲ್ ಪ್ರವೇಶಾತಿ ಮೂಲಕ ದ್ವಿತೀಯ ವರ್ಷದ ಎಂಜಿನಿಯರಿಂಗ್ ಪದವಿ ಪ್ರವೇಶ […]
ಉಡುಪಿ: ‘ಗೀತಾಂಜಲಿ ಸಿಲ್ಕ್’ನ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ನಿಧನ
ಉಡುಪಿ: ಉಡುಪಿಯ ‘ಗೀತಾಂಜಲಿ ಸಿಲ್ಕ್’ ಮತ್ತು ಶಾಂತಿಸಾಗರ್ ಹೊಟೇಲ್ನ ಸಂಸ್ಥಾಪಕರಾದ ನೀರೆಬೈಲೂರು ಗೋವಿಂದ ನಾಯಕ್ (89) ಮೇ19 ರಂದು ಬೆಳಗ್ಗೆ 6.10ಕ್ಕೆ ಹೃದಯಾಘಾತದಿಂದ ನಿಧನರಾದರು. ಪುತ್ರರಾದ ಶ್ರೀರಾಮಕೃಷ್ಣ ನಾಯಕ್ (ಆರ್.ಕೆ), ಲಕ್ಷ್ಮಣ ನಾಯಕ್, ರಮೇಶ ನಾಯಕ್, ಹರೀಶ್ ನಾಯಕ್, ಸಂತೋಷ್ ವಾಗ್ಳೆ, ಸುನೀತ ಪ್ರಕಾಶ್ ಪ್ರಭು, ಸೊಸೆಯಂದಿರು, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.