ಮಣಿಪಾಲ: ಗಾಂಜಾ ಸೇವನೆ – ಒಟ್ಟು 7 ಮಂದಿ ಪೊಲೀಸರ ವಶಕ್ಕೆ.
ಮಣಿಪಾಲ, ಮೇ 17: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ.14ರಂದು ಮಣಿಪಾಲ ವಿದ್ಯಾರತ್ನ ನಗರದ ಐರಿಶ್ ಫ್ಲಾಜಾದ ಬಳಿ ನಿಶಾಂತ್(22), ಅಮಿತ್(20), ಮೇ 12ರಂದು ಪ್ರಜ್ವಲ್(21), ಆರ್ಯನ್ (20), ಪ್ರಧುಮಾನ್, ಹೆಮಾನ್ಯ(20), ಸುಭಾಸ್(23) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಪರೀಕ್ಷಿಸಿದ ವೈದ್ಯರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮಣಿಪಾಲ ಪೊಲೀಸ್ […]
ಉಡುಪಿ ಶ್ರೀಕೃಷ್ಣಮಠ ರಾಜಾಂಗಣದಲ್ಲಿ ಪುಟ್ಟ ಕಲಾವಿದೆಯ ಕಲಾಸಿರಿಯ ಅನಾವರಣ.
ಉಡುಪಿ: ಖ್ಯಾತ ಪುಟ್ಟ ಪುಟಾಣಿ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ಇವಳಿಂದ ವಯಲಿನ್ ವಾದನ ಕಛೇರಿ ಕಾರ್ಯಕ್ರಮ ನಿನ್ನೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ನಡೆಯಿತು . ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ಬಾಲಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಹರಸಿದರು. ಗುರುಗಳಾದ ವಿದ್ವಾನ್ ಶ್ರೀ ಅನುರೂಪ್ ಅವರನ್ನೂ ಮತ್ತಿತರ ಸಹಕಲಾವಿದರನ್ನೂ ಪ್ರಸಾದ ನೀಡಿ ಹರಸಿದರು. ಕಿಕ್ಕಿರಿದ ರಾಜಾಂಗಣದಲ್ಲಿ ನಡೆದ ಈ ಸಂಗೀತ ಗಾನ […]
ಆರು ಮರಿಗಳಿಗೆ ಜನ್ಮ ನೀಡಿದ “777 ಚಾರ್ಲಿ”: ಇನ್ಸ್ಟಾಗ್ರಾಮ್ ಲೈವ್ನಲ್ಲಿ ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ.
ಚಾರ್ಲಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಟೈಮಲ್ಲಿ ತುಂಬಾ ಫೇಮಸ್ ಆದ ಮೂವಿ ಇದು. ಅದ್ರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಲೈವ್ ಬಂದು ಒಂದು ಸಂತಸದ ವಿಚಾರ ಹಂಚಿಕೊಂಡಿದ್ದಾರೆ. ಅದೇನು ಅಂತೀರಾ ಇಲ್ಲಿದೆ ನೋಡಿಹೌದು ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ ಚಾರ್ಲಿ ಈಗ ತಾಯಿ ಆಗಿದೆ. 6 ಮರಿಗಳಿಗೆ ಜನ್ಮ ನೀಡಿದೆ. ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ರಕ್ಷಿತ್ ಶೆಟ್ಟಿ ಅವರು ಮೈಸೂರಿಗೆ ತೆರಳಿದ್ದಾರೆ. ಅಲ್ಲಿಂದ ಅವರು ಬಹಳ ಖುಷಿಯಲ್ಲಿ ಲೈವ್ […]
ಡಿಪ್ಲೋಮಾ ಪ್ರವೇಶಾತಿ: ಅವಧಿ ವಿಸ್ತರಣೆ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಕಾಪುವಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 21 ರ ವರೆಗೆ ವಿಸ್ತರಿಸಲಾಗಿದೆ. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ. 35 ಅಂಕ ಪಡೆದಿರುವ ಅರ್ಹ ಅಭ್ಯರ್ಥಿಗಳು ಆಟೋಮೇಷನ್ ಅಂಡ್ ರೊಬೋಟಿಕ್ಸ್ ಮತ್ತು ಕ್ಲೌಡ್ ಕಂಪ್ಯೂಟಿoಗ್ ಅಂಡ್ ಬಿಗ್ ಡೇಟಾ ಎಂಬ ನೂತನ ಕೋರ್ಸುಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಸೂಕ್ತ ದಾಖಲೆಗಳೊಂದಿಗೆ ನೇರವಾಗಿ ಸಂಸ್ಥೆಯಲ್ಲಿ ಆಫ್‌ಲೈನ್ ಮೂಲಕ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ […]
ವಿಶೇಷಚೇತನರ ಬದುಕಿಗೆ ಪೂರಕವಾಗುವ ವ್ಯವಸ್ಥೆ ಕಲ್ಪಿಸಬೇಕು: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
ಉಡುಪಿ: ವಿಶೇಷಚೇತನರು ಅಂಗವೈಕಲ್ಯತೆಯನ್ನು ಮರೆತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿದ್ದು, ಅವರ ಬದುಕಿಗೆ ಪೂರಕವಾಗುವ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಇಡೀ ಸಮಾಜ ಅವರ ಜೊತೆಗೂಡಬೇಕು ಎಂದು ಜಿಲ್ಲಾಧಿಕಾರಿಡಾ. ಕೆ. ವಿದ್ಯಾಕುಮಾರಿ ಹೇಳಿದರು. ಅವರು ಇಂದು ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್‌ಸಂಸ್ಥೆ ಉಡುಪಿ ಜಿಲ್ಲೆ ಮತ್ತು ಎಪಿಡಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ […]