ಶಿಕ್ಷಣ, ಮದುವೆ, ಹಾಗೂ ವಸತಿಗೂ ಪಿಎಫ್ ಸೌಲಭ್ಯ ವಿಸ್ತರಣೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಚಂದಾದಾರರಿಗೆ ಮಹತ್ವದ ಶುಭ ಸುದ್ದಿಯೊಂದನ್ನು ನೀಡಿದೆ. ಆಟೋ ಕ್ಲೈಮ್ ಸೆಟಲ್‌ಮೆಂಟ್‌ ಸೌಲಭ್ಯವನ್ನು ಮತ್ತಷ್ಟು ಉದ್ದೇಶಗಳಿಗೆ ಸಂಸ್ಥೆ ವಿಸ್ತರಿಸಿದೆ. ಸದ್ಯ ಅನಾರೋಗ್ಯದ ಚಿಕಿತ್ಸೆ ವೆಚ್ಚಕ್ಕೆ ಮಾತ್ರ ಈ ಸೌಲಭ್ಯ ಇತ್ತು. ಇದನ್ನೀಗ ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗೂ ವಿಸ್ತರಿಸಿರುವುದಾಗಿ ಇಪಿಎಫ್‌ಒ ತಿಳಿಸಿದೆ. ಸುಮಾರು 6 ಕೋಟಿಗೂ ಹೆಚ್ಚಿನ ಚಂದಾದಾರರಿಗೆ ಈ ಹೊಸ ಸೌಲಭ್ಯ ಸಿಗಲಿದೆ. ಈ ನಿರ್ಧಾರದಿಂದ ಯಾವುದೇ ಮಾನವ ಹಸ್ತಕ್ಷೇಪ ಇಲ್ಲದೆ ಐಟಿ ವ್ಯವಸ್ಥೆಯ ಮೂಲಕವೇ ಇಂತಹ ಕ್ಲೈಮ್‌ಗಳು […]

ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ಎಂ.ಪಿ.ಎಂ ಕಾಲೇಜಿನಲ್ಲಿ ಮೇ.16 ರಂದು ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ. ಪಿ. ಎಂ. ನ ಹಳೆ ವಿದ್ಯಾರ್ಥಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸುರೇಶ್ ಅತ್ತೂರ್ ಇವರು ಮಾತನಾಡಿ , ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ಒಂದು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ […]

ಗುಡುಗು-ಸಿಡಿಲು ಅಪಾಯದಿಂದ ಸಾರ್ವಜನಿಕರು ರಕ್ಷಿಸಿಕೊಳ್ಳುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ..

ಉಡುಪಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಅಪಾಯಗಳಿಂದ ಸಾರ್ವಜನಿಕರು ರಕ್ಷಿಸಿಕೊಳ್ಳಲು ಈ ಕೆಳಗಿನಂತೆ ಸಲಹೆ, ಸೂಚನೆಗಳನ್ನು ನೀಡಿದೆ. ಸಾರ್ವಜನಿಕರು ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್ (ಸಿ.ಎ.ಪಿ) ಮೂಲಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಸಂದೇಶಗಳನ್ನು ಗಮನಿಸಿ, ನಂತರ ಹೊರಗಡೆ ತೆರಳಬೇಕು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು […]

ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್’ನಲ್ಲಿ ಮೇ.18,19 ರಂದು ಉಚಿತ ಶ್ರವಣ ಪರೀಕ್ಷಾ ಶಿಬಿರ.

ಉಡುಪಿ: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಮತ್ತು OTICON ಪ್ರಾಯೋಜಕತ್ವದಲ್ಲಿ ಮೇ18 ಮತ್ತು 19ರಂದು ಉಡುಪಿ ಕೋರ್ಟ್ ಬಳಿ, ದೇವರಾಜ್ ಟವರ್ಸ್, ಒಂದನೇ ಮಹಡಿಯಲ್ಲಿ ಬೆಳಿಗ್ಗೆ 10 ರಿಂದ 1.30 ರವರೆಗೆ ಸಾಯಂಕಾಲ 3 ರಿಂದ 6ರ ವರೆಗೆ ಉಚಿತ ಶ್ರವಣ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರದ ಮುಂದಾಳತ್ವವನ್ನು ನಿರ್ಮಲ ಪ್ರಭು, ಆಡಿಯಾಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಅವರು ವಹಿಸುವರು. ಮೇಲಿನ ಎಲ್ಲಾ ಸಮಸ್ಯೆಗಳಲ್ಲಿ ಯಾವುದಾದರೂ ಕೆಲವು ಲಕ್ಷಣಗಳು ನಿಮ್ಮಲಿ ಕಂಡುಬಂದಲ್ಲಿ ನಿಮ್ಮ […]

ಬೀದರ್: ಬಸ್‌’ನಲ್ಲಿ ಮಹಿಳೆಯರ ಚಪ್ಪಲಿಯಿಂದ ಹೊಡೆದಾಟ.

ಬೀದರ್: ಬೀದರ್ನಿಂದ ಕಲಬುರಗಿ ಬಸ್ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಬಸ್ ನಲ್ಲಿ ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ.ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್ ಬಿಡಲ್ಲ. ಏನ್ ಮಾಡ್ತಿ” ಎಂದು ಪ್ರಶ್ನಿಸಿದ್ದಾಳೆ.ಇಬ್ಬರು ಪರಸ್ಪರ ಮಾತಿನಲ್ಲಿ ಜಗಳ ಮಾಡುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು […]