ಉಡುಪಿ: “ಮರೆಯಲಾರೆ ಆ ದಿನಗಳ” ಪುಸ್ತಕ ಬಿಡುಗಡೆ

ಉಡುಪಿ: ಉಡುಪಿ ಸಾಹಿತ್ಯ ಲೋಕದ ಹಿರಿಯರಾದ ಡಾ.ಶಿವರಾಮ ಕಾರಂತ್ ಒಡನಾಡಿ. ಉಡುಪಿ ಸುಹಾಸಂ ವೇದಿಕೆಯ ಮಾಜಿ ಅಧ್ಯಕ್ಷರಾದ ಹಿರಿಯ ಸಾಹಿತಿ ಕೆ. ವಿ. ಶ್ರೀನಿವಾಸ್ ರಾವ್ ಉಡುಪಿ ತಮ್ಮ 87ನೇ ವಯಸ್ಸಿನಲ್ಲಿ ತಾವು ರಚಿಸಿದ “ಮರೆಯಲಾರೆ ಆ ದಿನಗಳ” ಪುಸ್ತಕ ಬಿಡುಗಡೆ ಸಮಾರಂಭ ಮೇ.12 ಆದಿತ್ಯವಾರ ಉಡುಪಿಯ ಶ್ರೀ ಕೃಷ್ಣ ಪ್ರತಿಷ್ಠಾನ ಸಭಾಂಗಣ ಜರಗಿತು. ಸಮಾರಂಭಾದಲ್ಲಿ ಮುಖ್ಯ ಅತಿಥಿ ಯಾಗಿ ಪ್ರೋ. ವೈ. ಮೋಹನ್ ರಾವ್, ಡಾ.ಶಂಕರ್ ಮಂಗಳೂರು, ಪ್ರೋ.ರಮೇಶ್ ರಾವ್ ಕಿದಿಯೂರು ಜೊತೆಗೂಡಿ ಪುಸ್ತಕ ಬಿಡುಗಡೆ […]

ಕನ್ನಡ ಚಲನಚಿತ್ರ ಹಿರಿಯ ನಟ ದೊಡ್ಡಣ್ಣ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ

ಉಡುಪಿ: ಕನ್ನಡ ಚಲನಚಿತ್ರದ ಹಿರಿಯ ನಟ ಶ್ರೀ ದೊಡ್ಡಣ್ಣ ಅವರು ಮೇ.13 ರಂದು ಕುಟುಂಬಸಮೇತರಾಗಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ತೆರಳಿದರು.

ಸುಳ್ಯ: ವಿದ್ಯಾರ್ಥಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ: ಕಾಲೇಜು ವಿದ್ಯಾರ್ಥಿಯೊಬ್ಬ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಳ್ಳಾರೆ ಗ್ರಾಮದ ನೆಟ್ಟಾರಿನ ಕಿನ್ನಿಮಜಲು ಹುಕ್ರಪ್ಪ ಅವರ ಪುತ್ರ, ಸುಳ್ಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಚರಣ್‌ ಕುಮಾರ್‌ ಕೆ. ಮೃತರು ಎಂದು ತಿಳಿದು ಬಂದಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ(ಐಟಿಐ) 2024-25ನೇ ಸಾಲಿನ ಪ್ರವೇಶಾತಿ ಪ್ರಾರಂಭ.

ಬಾರ್ಕೂರು ವಿದ್ಯಾಭಿವರ್ದಿನಿ ಸಂಘದ ಆಡಳಿತಕ್ಕೊಳಪಟ್ಟ “ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ”ಯು ದಿನಾಂಕ 01-08-1984ರಂದು ಪ್ರಾರಂಭಗೊಂಡು ಉಡುಪಿ ಜಿಲ್ಲೆಯಲ್ಲೇ ಪ್ರಥಮ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಹೆಸರು ಪಡೆಯಿತು. ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (National Council for Vocational Training)ನೊಂದಿಗೆ ಸಂಯೋಜನೆ ಹೊಂದಿದ್ದು ರಾಜ್ಯ ಸರಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ತರಬೇತಿಯನ್ನು ನೀಡುತ್ತಿರುವ ಅನುದಾನಿತ ಸಂಸ್ಥೆಯಾಗಿರುತ್ತದೆ. ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ತರಬೇತಿ:40 ವರ್ಷಗಳ ಹಿಂದೆ ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ […]

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(MSDC)ದಲ್ಲಿ ಇಂಟರ್ ನೆಟ್ ತಂತ್ರಜ್ಞಾನದ ಕುರಿತು ಅತ್ಯುತ್ತಮ ಶಿಕ್ಷಣ

ಮಣಿಪಾಲ: ಮಣಿಪಾಲದ MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ವಾಗಿದ್ದು ಆಸಕ್ತರಿಂದ ಅಲ್ಪಾವಧಿಯ (ಒಂದು ತಿಂಗಳು) ಕೋರ್ಸ್ ಗಳನ್ನು ಆಹ್ವಾನಿಸಿದೆ.ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಇಂಟರ್ ನೆಟ್ ನ ಟೆಕ್ನಿಕ್ ಕುರಿತು, ತಂತ್ರಜ್ಞಾನದ ಕುರಿತು ಮಾಹಿತಿ ಇಲ್ಲಿ ನೀಡಲಾಗುತ್ತದೆ. ಅದ್ಬುತ ಅವಕಾಶವಿರುವ ಕ್ಷೇತ್ರ ಇದಾಗಿದೆ. Embedded Systems and loT: 🔹IoT Architecture and life cycle 🔹 Platforms for IoT 🔹 Real time use […]