ಮೇ.18,19: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ನಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರ.
ಉಡುಪಿ: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಮತ್ತು OTICON ಪ್ರಾಯೋಜಕತ್ವದಲ್ಲಿ ಮೇ18 ಮತ್ತು 19ರಂದು ಉಡುಪಿ ಕೋರ್ಟ್ ಬಳಿ, ದೇವರಾಜ್ ಟವರ್ಸ್, ಒಂದನೇ ಮಹಡಿಯಲ್ಲಿ ಬೆಳಿಗ್ಗೆ 10 ರಿಂದ 1.30 ರವರೆಗೆ ಸಾಯಂಕಾಲ 3 ರಿಂದ 6ರ ವರೆಗೆ ಉಚಿತ ಶ್ರವಣ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರದ ಮುಂದಾಳತ್ವವನ್ನು ನಿರ್ಮಲ ಪ್ರಭು, ಆಡಿಯಾಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಅವರು ವಹಿಸುವರು. ಆಕರ್ಷಣೆ: ಶ್ರವಣ ತಪಾಸಣೆ. ಉಚಿತ ಶ್ರವಣಸಾಧನ. (HearingAid) ಟ್ರಯಲ್. ಶ್ರವಣ ಸಾಧನಗಳ […]
ಮೇ15: ಉಡುಪಿಯಲ್ಲಿ ಖ್ಯಾತ ವಯೊಲಿನ್ ವಾದಕಿ ಗಂಗಾ ಶಶಿಧರನ್.
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆ ಮೂವತ್ತನೆ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ ಹಾಗೂ ಪಂಚಮಿ ಟ್ರಸ್ಟ್, ಪಂಚಲಹರಿ ಪೌ೦ಡೇಶನ್ ಪ್ರಾಯೋಜಕತ್ವದಲ್ಲಿ ಮೇ15ರಂದು ಖ್ಯಾತ ಬಾಲಕಿ ಗಂಗಾ ಶಶಿಧರನ್ ಗುರುವಾಯೂರು ಹಾಗೂ ಅವರ ಗುರು ಅನುರೂಪ್ ಗುರುವಾಯೂರು ಮತ್ತು ತಂಡದವರಿಂದ ವಯೊಲಿನ್ ವಾದನ ನಡೆಯಲಿದೆ. ತ್ರಿಶೂರ್ ನ ಹತ್ತು ವರ್ಷದ ಪುಟ್ಟ ಬಾಲಕಿ ಗಂಗಾ ಶಶಿಧರನ್ ವಯೊಲಿನ್ ವಾದನದ ಮೂಲಕ ನಾಡಿನ ಸಮಸ್ತರ ಗಮನ ಸೆಳೆದಿದ್ದಾಳೆ. ಸತತ ಪರಿಶ್ರಮದ ಮೂಲಕ […]
ರೊನಿ ಅರುಣ್ ಬರೆದ ‘ರಿಕ್ಷಾ ಡೈರಿ’ ಲೋಕಾರ್ಪಣೆ
ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ ಪಶ್ಚಿಮ್ ಟ್ರಸ್ಟ್ ಸಭಾಂಗಣದಲ್ಲಿ ಮೇ 09 ರಂದು ಲೋಕಾರ್ಪನೆಗೊಂಡಿತು. ಹಿರಿಯ ಲೇಖಕಿ ಮತ್ತು ಪ್ರಕಾಶಕಿ ಗ್ಲೇಡಿಸ್ ರೇಗೊ ಇವರು ಪುಸ್ತಕ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿ ಪಶ್ಚಿಮ್ ಟ್ರಸ್ಟ್ ಇದರ ನಿರ್ದೇಶಕ ರೋಹಿತ್ ಸಾಂಕ್ತುಸ್ ಶುಭ ಹಾರೈಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ತೆಲೊಕಾ ಸಂಸ್ಥೆಯ ನಿರ್ದೇಶಕಿ ಕ್ಲಾರಾ ಡಿಕುನ್ಹಾ ಉಪಸ್ಥಿತರಿದ್ದರು. […]