ನಾಳೆ ಮಣಿಪಾಲದಲ್ಲಿ MSDC ವತಿಯಿಂದ ಕೇವಲ 499 ರೂ.ಗೆ “ಸ್ಪೆಷಲ್ ಎಫೆಕ್ಟ್ ಮೇಕಪ್” ಕಾರ್ಯಾಗಾರ
ಮಣಿಪಾಲ: ಮಣಿಪಾಲ ಟಿಎಂಎ ಪೈ ಫೌಂಡೇಶನ್ ನ ಸಂಸ್ಥೆಯಾದ ‘ಮಣಿಪಾಲ್ ಸ್ಕಿಲ್ ಡೆವೆಲಪ್ ಮೆಂಟ್ ಸೆಂಟರ್’ ವತಿಯಿಂದ ಸ್ಪೆಷಲ್ ಎಫೆಕ್ಟ್ ಮೇಕಪ್ ಕಾರ್ಯಾಗಾರ ಮೇ.10 ರಂದು ಬೆಳಗ್ಗೆ11 ರಿಂದ ಸಾಯಂಕಾಲ 5 ಗಂಟೆಯವರೆಗೆ MSDC ಓರಣೆ ಇಂಟರ್ ನ್ಯಾಷನಲ್ ಈಶ್ವರನಗರ ಇಲ್ಲಿ ನಡೆಯಲಿದೆ. ಭಾಗವಹಿಸಲು ₹499 ಪ್ರವೇಶ ಶುಲ್ಕವಿದ್ದು ಮೇಕಪ್ ಕ್ಷೇತ್ರದಲ್ಲಿ ಪರಿಣಿತರಾಗಲು ಒಂದು ಉತ್ತಮ ಅವಕಾಶವಾಗಿದೆ.
ಮೇ.9 ರಿಂದ 14: ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವ.
ಬ್ರಹ್ಮಾವರ: ತಾಲೂಕಿನ ಬ್ರಹ್ಮಾವರ ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೇ.9 ರಿಂದ 14ರ ವರೆಗೆ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮಗಳು ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಮೇ.9 ಗುರುವಾರ ವಿಶ್ಲೇಶ್ವರ ಪ್ರಾರ್ಥನಾ, ಮುಹೂರ್ತ ಬಲಿ, ಅಂಕುರ ಸ್ಥಾಪನಾದಿಗಳು, ಮಧ್ಯಾಹ್ನ ಸಂತರ್ಪಣೆ ಮತ್ತು ರಾತ್ರಿ ಸಣ್ಣ ರಂಗಪೂಜೆ. ಮೇ.10 ಶುಕ್ರವಾರ ಧ್ವಜಾರೋಹಣ, ನಿತ್ಯಬಲಿ, ಸಂತರ್ಪಣೆ, ಸಾಯಂಕಾಲ ಸವಾರಿಬಲಿ, ಭೇರಿತಾಡನ, ಗಜವಾಹನೋತ್ಸವ, ರಾತ್ರಿ ಸಣ್ಣ ರಂಗಪೂಜೆ. ಮೇ.11 ಶನಿವಾರ ದೊಡ್ಡರಂಗಪೂಜೆ, ನಿತ್ಯಬಲಿ, ಸಂತರ್ಪಣೆ, ಸಾಯಂಕಾಲ ಸವಾರಿ ಬಲಿ, ಉತ್ಸವ ಬಲಿ, 2 […]
ಸಂತ್ರಸ್ತೆಯ ಅಪಹರಣ ಪ್ರಕರಣ: ಮಾಜಿ ಸಚಿವ ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ.
ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲುಪಾಲಾಗಿದ್ದಾರೆ. ಕೆಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಪ್ರಕಟಿಸಿದೆ.ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ರೇವಣ್ಣರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣರನ್ನು ಅಧಿಕಾರಿಗಳು ಎಸ್ಐಟಿ ಕಚೇರಿಯಿಂದ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಿದ್ದಾರೆ. ಕೆ.ಆರ್.ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಪ್ರಕಟಿಸಿದೆ.
ಮೇ 10 ರಂದು ‘ಉಡುಪಿ ಸ್ಟೋರ್ಸ್’ ಸಾಂಪ್ರದಾಯಿಕ ತಿಂಡಿ-ತಿನಿಸು ಹಾಗೂ ಕರಕುಶಲ ವಸ್ತುಗಳ ಮಳಿಗೆ ಉದ್ಘಾಟನೆ
ಉಡುಪಿ: ಇಲ್ಲಿನ ಬನ್ನಂಜೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ನೆಲಮಹಡಿಯಲ್ಲಿ ‘ಉಡುಪಿ ಸ್ಟೋರ್ಸ್’ (Udupi Stores) ಸಾಂಪ್ರದಾಯಿಕ ತಿಂಡಿ-ತಿನಿಸು ಹಾಗೂ ಕರಕುಶಲ ವಸ್ತುಗಳ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವು ಮೇ.10 ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ. ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ರಾಜೇಶ್ ಶೆಟ್ಟಿ, ನಗರಸಭೆ ಪೌರಾಯುಕ್ತ ರಾಯಪ್ಪ, ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ ಡಿಟಿಓ ಕಮಲ್ ಕುಮಾರ್, ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ “ಸಾವಿಷ್ಕಾರ” ದಲ್ಲಿ ಬಹುಮಾನ.
ಮೂಡಲ್ ಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ದಿನಾಂಕ 1 ಮತ್ತು 2 ಮೇ 2024 ರಂದು ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬ “ಸಾವಿಷ್ಕರ್”ದಲ್ಲಿ ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅಭಿಷೇಕ್ ಕಿಣಿ, ಪ್ರಖ್ಯಾತ್ ಪಿ ಶೆಟ್ಟಿ ಮತ್ತು ಶಶಾಂಕ್ ಇವರು ಎಲೆಕ್ಟ್ರಾನಿಕ್ ಕ್ವಿಜ್‍ನಲ್ಲಿ ಪ್ರಥಮ ಸ್ಥಾನ, ಅಭಿಷೇಕ್ ಕಿಣಿ ಮತ್ತು ಆಶಿಶ್ ಪ್ರಸಾದ್ ಇವರು Conceptify ನಲ್ಲಿ ದ್ವಿತೀಯ ಸ್ಥಾನ, ರಾಮಚಂದ್ರ ಉಡುಪ ಮತ್ತು ಪ್ರಥಮ್ ಎಲ್ ಕಾಮತ್ ಕೋಡ್ ಕ್ರೇಜ್‍ನಲ್ಲಿ ದ್ವಿತೀಯ […]