ಆರ್ಚರಿ ವರ್ಲ್ಡ್‌ಕಪ್ ಹಂತ 1: ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದ ಭಾರತೀಯ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್

ಶಾಂಘೈನಲ್ಲಿ ಶನಿವಾರ ನಡೆದ ಆರ್ಚರಿ ವರ್ಲ್ಡ್‌ಕಪ್ ಹಂತ 1 ರಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಅವರು ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಅಗ್ರ ಶ್ರೇಯಾಂಕದ ಮೆಕ್ಸಿಕೋದ ಆಂಡ್ರಿಯಾ ಬೆಸೆರಾ ವಿರುದ್ಧ ತೀವ್ರ ಪೈಪೋಟಿ ನಡೆಸಿದ ಫೈನಲ್‌ನಲ್ಲಿ ವಿಶ್ವದ ನಂ. 3 ಬಿಲ್ಲುಗಾರ್ತಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಜಯಶಾಲಿಯಾಗಿದ್ದಾರೆ.

ಮಣಿಪಾಲ ಶ್ರೀ ಶಾರದ ಟೀಚರ್ ಟ್ರೈನಿಂಗ್ ನಲ್ಲಿ ವಾರ್ಷಿಕೋತ್ಸವ

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್‍ನ ವಾರ್ಷಿಕೋತ್ಸವವು ಎ. 27ರಂದು ಸಂಸ್ಥೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅದಮಾರ್ ಮಠ ಶಿಕ್ಷಣ ಸಂಸ್ಥೆಗಳ ಸಂಯೋಜಕರಾದ ಶ್ರೀ ಮಂಜುನಾಥ್ ಎ. ವಿ. ಅವರು ಮಾತನಾಡಿ ಶಿಕ್ಷಕಿಯರು ಮಗುವನ್ನು ತಾಯಿಯಂಂತೆ ಪ್ರೀತಿಸಬೇಕು ಹಾಗೂ ತಮ್ಮನ್ನು ಸಂಪೂರ್ಣ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಇಪ್ಪತ್ತು ಮಕ್ಕಳು ಒಂದು ತರಗತಿಯಲ್ಲಿದ್ದರೆ ನಲವತ್ತು ಕಣ್ಣುಗಳು ನಮ್ಮನ್ನು ವೀಕ್ಷಿಸುತ್ತವೆ ಮತ್ತು ಶಿಕ್ಷಕಿಯ ಪಾತ್ರವೇ ಅಂತಿಮ. ತರಗತಿಯ ಒಂದು ಘಟನೆಯನ್ನು ನೆನಪಿಸಿಕೊಂಡು ಅವರು, “ಒಮ್ಮೆ ತರಗತಿಯಲ್ಲಿ ಮಕ್ಕಳಿಗೆ ಚಿತ್ರಬಿಡಿಸಲು […]