ಜನರ ಜೊತೆ ಬೆರೆತು ಕೆಲಸ ಮಾಡಬೇಕು: ಕೆ.ಜಯಪ್ರಕಾಶ್ ಹೆಗ್ಡೆ
ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡದೇ ಇದ್ದ ಬರ ಪರಿಹಾರಕ್ಕೆ ಸುಪ್ರೀಂಕೋರ್ಟ್ ಅಸ್ತು ಹೇಳುವ ಮೂಲಕ ನ್ಯಾಯ ನೀಡಿದೆ. ಬರ ಪರಿಹಾರ ಸಿಗದಿದ್ದಾಗ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡಿತ್ತು. ರಾಜ್ಯ ಸರ್ಕಾರದ ಪರ ನ್ಯಾಯ ಇದ್ದ ಕಾರಣ ಈ ತೀರ್ಪು ಬಂದಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಅವರು ಮಂಗಳವಾರ, ಕಾಪು ಪೇಟೆಯಲ್ಲಿ ನಡೆದ ಬಹಿರಂಗ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜನರ ಪ್ರತಿನಿಧಿಯಾಗಿ ಆರಿಸಲ್ಪಟ್ಟವರಿಗೆ ಜನರ ಕೆಲಸ ಮಾಡುವ ರೀತಿ […]
ಮೀನುಗಾರಿಕೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು: ಜಯಪ್ರಕಾಶ್ ಹೆಗ್ಡೆ
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ಕಾಂಗ್ರೆಸ್ ಅಭ್ಯರ್ಥಿ ಹೊಂದಿರುವ ದೂರದೃಷ್ಟಿ, ಸಮಸ್ಯೆಗಳ ಪರಿಹಾರಕ್ಕೆ ಅವರಲ್ಲಿರುವ ಯೋಚನೆ, ಯೋಜನೆಗಳ ಬಗ್ಗೆ ಪತ್ರಕರ್ತರ ಜೊತೆಗೆ ಜಯಪ್ರಕಾಶ್ ಹೆಗ್ಡೆ ಮಾತನಾಡಿದ್ದಾರೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕರಾವಳಿ, ಮಲೆನಾಡು, ಬಯಲುಸೀಮೆ ಹೀಗೆ ಮೂರು ವಿಭಾಗ ಬರುತ್ತದೆ. ಕರಾವಳಿಯಲ್ಲಿ ಮೀನುಗಾರರ, ರೈತರ ಸಮಸ್ಯೆ ಆದ್ಯತೆ ನೀಡುವ ಜತೆಗೆ ಬಯಲುಸೀಮೆ ಮತ್ತು ಮಲೆನಾಡಿನಲ್ಲಿ ಕಾಪಿ, ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದು ಆಗಬೇಕು. ಕೃಷಿ ಭೂಮಿಗೆ ಉಪ್ಪುನೀರು ಹರಿಯುವುದನ್ನು ತಡೆ ಯಲು ಚೆಕ್ಡ್ಯಾಮ್ಗಳು […]
ಕುಂದಾಪುರ ನಗರದಲ್ಲಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ.
ಕುಂದಾಪುರ: ಜನರಿಗೆ ನಾವು ಮಾಡಿದ ಕೆಲಸಗಳ ಲೆಕ್ಕ ಕೊಟ್ಟು ಅಭ್ಯರ್ಥಿ ಹೆಸರಲ್ಲೇ ಚುನಾವಣೆಯಲ್ಲಿ ಮತ ಕೇಳಬೇಕು. ಕೆಲಸ ಮಾಡಿದ ಆತ್ಮತೃಪ್ತಿ ಜನಪ್ರತಿನಿಧಿಗೆ ಇರಬೇಕು. ನಾವು ಜನಕ್ಕೆ ಮಾಡುವುದು ಸೇವೆಯಲ್ಲ, ಬದಲಾಗಿ ಅದು ಕರ್ತವ್ಯ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ಕುಂದಾಪುರ ಪೇಟೆಯಲ್ಲಿ ಹಮ್ಮಿಕೊಳ್ಳಲಾದ ಪಾದಯಾತ್ರೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿಶನ್ ಡಾಕ್ಯುಮೆಂಟ್ ಮಾಡಿದ್ದು ಉಡುಪಿ […]
ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರ ಬೃಹತ್ ವಾಹನ ಜಾಥಾ.
ಕಾಪು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರ ಮಂಗಳವಾರ ಪಡುಬಿದ್ರಿಯಿಂದ ಕಾಪು ವರೆಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಬೈಕ್ ಗಳ ಬೃಹತ್ ವಾಹನ ಜಾಥಾದ ಮುಖಂತರ ಕಾಪು ಪೇಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು ವಿಯಕುಮಾರ್ ಸೊರಕೆ ಸಭೆಯನ್ನು ಉದ್ದೇಶಿಸಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ವಾಗ್ದಾಳಿ ನಡೆಸಿದರು. ಗಣ ರಾಜ್ಯೋತ್ಸವದ ಪೆರೇಡ್ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ರದ್ದಾದಾಗ ಶ್ರೀನಿವಾಸ ಪೂಜಾರಿಯವರ ಇವರ ಜಾತಿ ಸಮೀಕರಣ ಎಲ್ಲಿಗೆ […]
ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಶ್ರೀಮನ್ಮಹಾರಥೋತ್ಸವ.
ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಗುರುವಾರ ಶ್ರೀ ಮನ್ಮಹಾರಥೋತ್ಸವ ನಡೆಯಿತು . ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ಸಂಜೆ ಸ್ಯಾಕ್ಸೋಫೋನ್ ಕಛೇರಿ, ರಾತ್ರಿ ಶ್ರೀ ಮನ್ಮಹಾರಥೋತ್ಸವ, ಉತ್ಸವ ಬಲಿ, ಮಹಾರಂಗ ಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಿತು. ಪರ್ಯಾಯ ತಂತ್ರಿ ವೇ.ಮೂ. ಬೆಟ್ಟಿಗೆ ವೆಂಕಟರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ಸರದಿ ಅರ್ಚಕರಾದ ವೇ.ಮೂ ಗುರುರಾಜಭಟ್ ಅರ್ಚಕತ್ವದಲ್ಲಿ, […]