ಭಾರತ-ಇರಾನ್ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ದ್ವಿಪಕ್ಷೀಯ ಸಹಕಾರಕ್ಕಾಗಿ ಎಂಒಯುಗೆ ಸಹಿ.

ಹವಾಮಾನ ಬದಲಾವಣೆ ಮತ್ತು ಆರೋಗ್ಯ ಸಂಶೋಧನಾ ಕೇಂದ್ರ, ಟೆಹ್ರಾನ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ(TUMS)ವು ಹವಾಮಾನ ಬದಲಾವಣೆ ಮತ್ತು ಮಾನವನ ಸಾರ್ವಜನಿಕ ಆರೋಗ್ಯದ ಪರಿಣಾಮಗಳ ಕೇಂದ್ರಿತ ಶೈಕ್ಷಣಿಕ ಮತ್ತು ನೀತಿ ಆಧಾರಿತ ಸಂಶೋಧನೆಗಳನ್ನು ಉತ್ತೇಜಿಸಲು, ಭಾರತದ ಮಂಗಳೂರಿನ ಎಡ್ವರ್ಡ್ ಮತ್ತು ಸಿಂಥಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ECIPH) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳು. ಶೈಕ್ಷಣಿಕ ಮತ್ತು ನೀತಿ-ಆಧಾರಿತ ಉಪಕ್ರಮಗಳನ್ನು ಅನುಸರಿಸುತ್ತವೆ, ಇದರಲ್ಲಿ ಈ ಪ್ರದೇಶದಲ್ಲಿ ಹವಾಮಾನ ಬದಲಾವಣೆಯ ಅಪಾಯಗಳಿಗೆ ಸಂಬಂಧಿಸಿದಂತೆ ಆರೋಗ್ಯ ವ್ಯವಸ್ಥೆಗಳ ಒಗ್ಗೂಡುವಿಕೆ […]

ರಾಷ್ಟ್ರೀಯ ಭೂ ದಿನ: ಮರವಂತೆ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ.

ಕುಂದಾಪುರ: ಏಪ್ರಿಲ್ 22 ರಾಷ್ಟ್ರೀಯ ಭೂ ದಿನದ ಅಂಗವಾಗಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು ಹಾಗೂ ಮಣಿಪಾಲದ ಮಾಹೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದೊಂದಿಗೆ ಮರವಂತೆ ಬೀಚ್ ಸ್ವಚ್ಚತಾ ಕಾರ್ಯವನ್ನು ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮರವಂತೆ ಕಡಲ ಕಿನಾರೆಯ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು. ಈ ಕಾರ್ಯದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವ್ರಂದದವರು ಉಪಸ್ಥಿತರಿದ್ದರು.

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮತ್ತು ಪವರ್ ಲಿಫ್ಟರ್ ಶ್ರೀ ವಿನೋದ್ ಕುಮಾರ್ ರವರು ಉದ್ಘಾಟಿಸಿದರು. ತದನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರೀಡೆಯ ಮಹತ್ವ ವನ್ನು ಸವಿಸ್ತಾರವಾಗಿ ವಿವರಿಸಿದರು, ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಮತ್ತು ಇಂದಿನ ಯುವಪೀಳಿಗೆಯು ಕ್ರೀಡೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ, ವಿದ್ಯಾರ್ಥಿಗಳಾದ ತಾವು ಕ್ರೀಡಾಕ್ಷೇತ್ರದಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು. ಕಾರ್ಯಕ್ರಮದ […]

ಕಾಂಗ್ರೆಸ್ಸಿನ ‘ಸಂಪತ್ತಿನ ಸಮಾನ ಹಂಚಿಕೆ’ ಬಳಿಕ ‘ಪಿತ್ರಾರ್ಜಿತ ತೆರಿಗೆ’ ಹೇಳಿಕೆ ವಿರುದ್ದ ಹರಿಹಾಯ್ದ ಪ್ರಧಾನಿ ಮೋದಿ

ನವದೆಹಲಿ: ಸುರ್ಗುಜಾ (ಛತ್ತೀಸ್‌ಗಢ): ಹಿರಿಯ ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ಅವರ ಮುಖ್ಯ ಸಲಹೆಗಾರ ಎಂದೇ ಬಿಂಬಿತವಾಗಿರುವ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಬಗ್ಗೆ ಬಿಜೆಪಿಯ ವಾಗ್ದಾಳಿಯನ್ನು ಮುನ್ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷವು ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ನ ಗ್ಯಾರಂಟಿಗಳನ್ನು ಪೂರೈಸಲು ಮಧ್ಯಮವರ್ಗದವರು ಹೆಚ್ಚಿನ ತೆರಿಗೆ ಪಾವತಿಸಲು ತಯಾರಾಗಿರಬೇಕು ಎನ್ನುವ ಹೇಳಿಕೆ ನೀಡಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ […]