ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕಾರ್ಕಳದ ಪುಸ್ತಕ ಮನೆಯಲ್ಲಿ ಪುಸ್ತಕ ಸಂತೆ

ಕಾರ್ಕಳ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುತ್ತಿರುವ ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ ‘ಪುಸ್ತಕ ಮನೆ’ಯಲ್ಲಿ ಏಪ್ರಿಲ್ 23 ರಿಂದ ಏಪ್ರಿಲ್ 29 ರವರೆಗೆ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ‘ಪುಸ್ತಕ ಸಂತೆ’ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಲಾಗಿದೆ. ದಿನಾಂಕ 23ರ ಬೆಳಿಗ್ಗೆ 11 ಗಂಟೆಗೆ ಖ್ಯಾತ ವಾಗ್ಮಿ, ಸಾಹಿತಿ ಪ್ರಭಾಕರ ಕೊಂಡಳ್ಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಪುಸ್ತಕಗಳಿಗೂ 10 ರಿಂದ 50 ಶೇಕಡಾ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಜೊತೆಗೆ ಪ್ರತೀ ಖರೀದಿಯೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. […]

ಶಿರ್ಲಾಲು ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಗೆ ಭೇಟಿ ನೀಡಿದ ಪದ್ಮರಾಜ್

ಬೆಳ್ತಂಗಡಿ: ಇಲ್ಲಿನ ಶಿರ್ಲಾಲು ನೆಲ್ಲಿಗುಡ್ಡೆ ಶ್ರೀ ಕೊಡಮಣಿತ್ತಾಯ, ಸತ್ಯಸಾರಮುಪ್ಪಣ್ಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಆಡಳಿತ ಮಂಡಳಿ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್ ಪುದ್ದರಬೈಲು, ಉಪಾಧ್ಯಕ್ಷ ಕೃಷ್ಫಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ರಾಜ್ಯದ ಜನತೆ ರೋಸಿಹೋಗಿದ್ದಾರೆ: ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಅಭಿಮತ

ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಅತ್ಯಂತ ಮಹತ್ವಪೂರ್ಣವಾದದ್ದು, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಎಲ್ಲರ ಕಣ್ಮುಂದಿದ್ದು, ಮೋದಿಯವರ ಗುರಿ 400ರ ಗಡಿ ದಾಟಲಿದ್ದೇವೆ ಎಂದು ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಹೇಳಿದ್ದಾರೆ. ಮೋದಿಯವರು ಪ್ರಧಾನಿಯಾದ ನಂತರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಾಗಿದ್ದು, ವಿಶ್ವದ ಪ್ರಬಲ ರಾಷ್ಟ್ರಗಳು ಕೂಡ ಮೋದಿಯವರ ಹೇಳಿಕೆಗಳನ್ನು ಗಮನಿಸುತ್ತಿದ್ದಾರೆ. ಕೇಂದ್ರದ ಅಭಿವೃದ್ಧಿಯಿಂದಾಗಿ ಮೋದಿಯವರ ಅಲೆ ದೇಶದಲ್ಲಿ ಕಾಣುತ್ತಿದ್ದೇವೆ, ಆದರೆ ಪ್ರಧಾನಿ ಮೋದಿಯವರ ಬಗ್ಗೆ ವಿರೋಧ […]

ಹೂಡೆ: ಮೊಗವೀರ ಸಮಾಜದ ಬಂಗೇರ ಆದಿ ಮೂಲ ಸ್ಥಾನ ವಾರ್ಷಿಕ ಮಹೋತ್ಸವ

ಹೂಡೆ: ಮೊಗವೀರ ಸಮಾಜದ ಬಂಗೇರ ಆದಿ ಮೂಲ ಸ್ಥಾನ ಹೊಡೆ ಏ. 20 ಶನಿವಾರ ವಾರ್ಷಿಕ ಮಹೋತ್ಸವ ಅಂಗವಾಗಿ ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಪೂಜೆ, ಪಂಚಾಮೃತ ಅಭಿಷೇಕ, ಸಾವಿರಾರು ಬಂಡಾಭಿಷೇಕ, ಮಹಾ ನಾಗಾಭಿಷೇಕ ಹಾಗೂ ನಾಗದೇವರಿಗೆ ವಿಶೇಷ ಅಲಂಕಾರ, ದರ್ಶನ ಸೇವೆ, ತುಲಾಭಾರ ಸೇವೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಸುಮಾರು 45 ವರ್ಷಗಳಕಾಲ ಅರ್ಚಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕೃಷ್ಣ ಬಂಗೇರ ಬಡಾ ನಿಡಿಯೂರು ಇವರಿಗೆ ಬಂಗಾರದ ಖಡ್ಗವನ್ನು ತೊಡಿಸಿ ಶಾಲು ಹೊದಿಸಿ […]

ತ್ರಿಶಾ ಸಂಸ್ಥೆ: ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಶಿಕ್ಷಣದ ಗುರಿ; ದಾಖಲಾತಿ ಪ್ರಾರಂಭ

ಉಡುಪಿ/ ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಸಿಎ, ಸಿಎಸ್ , ಮುಂತಾದ ವೃತ್ತಿಪರ ಕೋರ್ಸುಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ತ್ರಿಶಾ ಸಂಸ್ಥೆಯು ಉಡುಪಿ , ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತಮ್ಮ ಅಂಗ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದೆ. ಈ ವಿದ್ಯಾ ಸಂಸ್ಥೆಯು ಪದವಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿದ್ದು, ಸುಮಾರು 75,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿದ್ದು , ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ವೃತ್ತಿಪರ ಜೀವನವನ್ನು ನಡೆಸುತ್ತಿದ್ದಾರೆ. ಪದವಿ ಕಾಲೇಜುಗಳು:ಬಿಕಾಂ ಪದವಿಯೊಂದಿಗೆ ಸಿಎ, […]