ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ: 3 ನಾಮಪತ್ರ ತಿರಸ್ಕೃತ
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ನಾಮಪತ್ರಗಳ ಪರಿಶೀಲನೆಯು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ನಡೆಯಿತು. 13 ಅಭ್ಯರ್ಥಿಗಳು ಒಟ್ಟು 19 ನಾಮಪತ್ರಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡು, 10 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಘೋಷಿಸಿದರು. ಪಕ್ಷೇತರ ಅಭ್ಯರ್ಥಿಗಳಾದ ಕೆ.ಆರ್ ಕುಸುಮ, ರಾಜ್ ಬಲ್ಲಾಳ್ ಹಾಗೂ ಹೆಚ್ ಸುರೇಶ್ ಪೂಜಾರಿ ಅವರ ನಾಮಪತ್ರಗಳು ತಿರಸ್ಕಾರಗೊಂಡಿವೆ.ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ […]
ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಅಹ್ವಾನ – ಅರ್ಜಿ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನ.
ಗಣಿತನಗರ: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮದ ಒಂದು ಭಾಗವಾಗಿ ಹಲವಾರು ವರ್ಷಗಳಿಂದ 5 ರಿಂದ 10ನೇ ತರಗತಿಯವರೆಗೆ ಪ್ರತೀ ತರಗತಿಗೆ 5 ವಿದ್ಯಾರ್ಥಿಗಳಂತೆ ಉಚಿತ ಶಿಕ್ಷಣವನ್ನು ಕಾರ್ಕಳ ತಾಲೂಕಿನ ಬಡ ಅರ್ಹ ಮಕ್ಕಳಿಗೆ ನೀಡಲಾಗುತ್ತಿದ್ದು, ಕಳೆದ ಶೈಕ್ಷಣಿಕ ವರ್ಷದಿಂದ ಈ ಉಚಿತ ಶಿಕ್ಷಣವನ್ನು ಕಾಲೇಜು ವಿಭಾಗದಲ್ಲಿ ವಾಣಿಜ್ಯ ವಿಭಾಗಕ್ಕೂ ವಿಸ್ತರಿಸಲಾಗಿದೆ. ಪ್ರಸ್ತುತ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಇಕೋನಾಮಿಕ್ಸ್, ಬಿಸಿನೆಸ್ ಸ್ಟಡಿಸ್, […]
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನ.
ಮಣಿಪಾಲ: ಮತದಾರರ ಜಾಗೃತಿ ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಂಘಟಿತ ಪ್ರಯತ್ನದಲ್ಲಿ, ಭಾರತ ಚುನಾವಣಾ ಆಯೋಗವು ಉಡುಪಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉಡುಪಿ ಜಿಲ್ಲೆ, ಆಸರೆ ವಿಶೇಷ ಶಾಲೆ, ಮಣಿಪಾಲವು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಪ್ರತೀಕ್ ಬಾಯಲ್ ಅವರು ಮಾತನಾಡಿ, ಮತದಾನ ಕೇವಲ ಹಕ್ಕು ಅಲ್ಲ ಎಲ್ಲರ […]
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ “ನ್ಯಾಯ ಪತ್ರ” ಬಿಡುಗಡೆ : ಐದು ಅಂಶಗಳ ಪ್ರಣಾಳಿಕೆ; ಕೆಲಸ, ಸಂಪತ್ತು, ಕಲ್ಯಾಣಕ್ಕೆ ಒತ್ತು
ನವದೆಹಲಿ: 2024 ರ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ (Congress) ಪಕ್ಷವು ಶುಕ್ರವಾರ “ನ್ಯಾಯ ಪತ್ರ” ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಪ್ರಣಾಳಿಕೆಯ ಮುಖ್ಯ ವಿಷಯವೆಂದರೆ “ನ್ಯಾಯ” ಎಂದರು. ಕಳೆದ 10 ವರ್ಷಗಳಲ್ಲಿ, ವಿಶೇಷವಾಗಿ ಕಳೆದ ಐದು ವರ್ಷಗಳಲ್ಲಿ ನ್ಯಾಯದ ಪ್ರತಿಯೊಂದು ಅಂಶವು ಬೆದರಿಕೆಗೆ ಒಳಗಾಗಿದೆ ಮತ್ತು ದುರ್ಬಲಗೊಂಡಿದೆ ಎಂದು ಅವರು ಹೇಳಿದರು. “ನ್ಯಾಯ ಪತ್ರ” ಪ್ರಣಾಳಿಕೆ ಮೂರು ಪ್ರಬಲ ಪದಗಳನ್ನು ಒಳಗೊಂಡಿದೆ – “ಕೆಲಸ” “ಸಂಪತ್ತು” ಮತ್ತು “ಕಲ್ಯಾಣ”. […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಹ್ಯಾಪಿ ಇಂಜಿನಿಯರಿಂಗ್’ ಕುರಿತು ಉಪನ್ಯಾಸ
ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯು ಜಂಟಿಯಾಗಿ “ಹ್ಯಾಪಿ ಇಂಜಿನಿಯರಿಂಗ್” ವಿಷಯದ ಕುರಿತು ಉಪನ್ಯಾಸವನ್ನು ಇತ್ತೀಚಿಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು. ಡಾ. ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ತಜ್ಞ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಎದುರಿಸುತ್ತಿರುವ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಯಶಸ್ಸನ್ನು […]