ಏ.1 ರಿಂದ 30 ರವರೆಗೆ Kidzee ಸಮ್ಮರ್ ಕ್ಯಾಂಪ್-2024
ಮಣಿಪಾಲ: 2 ರಿಂದ 8 ವರ್ಷದ ಒಳಗಿನ ಮಕ್ಕಳಿಗಾಗಿ ಅನಂತನಗರದಲ್ಲಿರುವ Kidzee ಸ್ಕೂಲ್ ನಲ್ಲಿ ಏ.1 ರಿಂದ 30 ರವರೆಗೆ ಸಮ್ಮರ್ ಕ್ಯಾಂಪ್ ಆಯೋಜಿಸಲಾಗಿದೆ. ಸಮ್ಮರ್ ಕ್ಯಾಂಪ್ ನಲ್ಲಿ ಮಕ್ಕಳಿಗಾಗಿ ಆರ್ಟ್ಸ್ ಎಂಡ್ ಕ್ರಾಫ್ಟ್ಸ್, ಯೋಗ, ಝುಂಬಾ, ಪೈಟಿಂಗ್, ಔಟ್ ಡೋರ್ ಗೇಮ್ಸ್, ಫನ್ ಲರ್ನಿಂಗ್ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುವುದು. ಮಾಹಿತಿಗಾಗಿ ಸಂಪರ್ಕಿಸಿ: 9591982777
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್.ಐ.ಎ
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತಿಬ್ಬರನ್ನು ಬಂಧಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿರುವ ಎನ್‌ಐಎ, ಶೋಧವನ್ನು ಮುಂದುವರೆಸಿದೆ. ಸದ್ಯ ಬಂಧನದಲ್ಲಿರುವ ಇವರಿಬ್ಬರು ನಿಷೇಧಿತ ಅಲ್ ಹಿಂದ್ ಟ್ರಸ್ಟ್ ಜೊತೆ ನಂಟು ಹೊಂದಿದ್ದರು ಎಂದು ತಿಳಿದು ಬಂದಿದೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಹಿಂದಿನ ಕೆಲವು ಸ್ಫೋಟಗಳಿಗೂ ಸಾಮ್ಯತೆ ಇರುವುದರಿಂದ ಈ ಹಿಂದಿನ ಸ್ಫೋಟಗಳಲ್ಲಿ ಭಾಗಿಯಾಗಿರುವ ಹಲವರ ಮೇಲೆ ಎನ್‌ಐ ಕಣ್ಣಿಟ್ಟಿದೆ. ಶಂಕಿತರಿಗೆ […]
ಗ್ರಾಹಕರ ಕಣ್ಣು ಕತ್ತಲೆ ಬರಿಸುತ್ತಿದೆ ಗೃಹಜ್ಯೋತಿ: ವಿದ್ಯುತ್ ಬಳಕೆ ಹೆಚ್ಚಳದಿಂದ ಬಿಲ್ ನಲ್ಲಿ ಏರಿಕೆ ಕಂಡು ಜನ ಶಾಕ್
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ನಿರಂತರವಾಗಿ ಏರುತ್ತಿದ್ದು, ಕಳೆದ ವರ್ಷದ ಫೆಬ್ರುವರಿ–ಮಾರ್ಚ್‌ಗಿಂತ ಈ ಬಾರಿ ಗೃಹ ವಿದ್ಯುತ್ ಬಳಕೆ ಶೇ 30ರಷ್ಟು ಹೆಚ್ಚಳವಾಗಿದೆ. ಇದೀಗ ಗೃಹ ಜ್ಯೋತಿ ಫಲಾನುಭವಿಗಳಿಗೆ ಇದರ ಬಿಸಿ ತಟ್ಟಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ನಿಯಮಗಳ ಪ್ರಕಾರ ಸೌಲಭ್ಯ ಪಡೆದಿರುವ ಕುಟುಂಬಗಳು ಹಿಂದಿನ ಒಂದು ವರ್ಷ ಬಳಸಿದ್ದ ಸರಾಸರಿ ಯೂನಿಟ್ ಹಾಗೂ ಅದರ ಮೇಲೆ 10 ಹೆಚ್ಚುವರಿ ಯೂನಿಟ್ ಮಾತ್ರ ಉಚಿತವಾಗಿ ಪಡೆಯಬಹುದಾಗಿದೆ. ಅದಕ್ಕಿಂತ ಎಷ್ಟು ಹೆಚ್ಚು ಬಳಕೆ ಮಾಡಲಾಗುತ್ತದೆಯೋ ಅಷ್ಟು […]
ದೊಡ್ಡಣ್ಣಗುಡ್ಡೆ: ವೇದ ಮಾತೆ ಗಾಯತ್ರಿ ದೇವಿಯ ನೂತನ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನಾ ಮಹೋತ್ಸವ
ಉಡುಪಿ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ ವೇದ ಮಾತೆ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನಾ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಮಾ.28 ರಂದು ನೆರವೇರಲಿದೆ. ಈ ಪ್ರಯುಕ್ತ ಕ್ಷೇತ್ರದಲ್ಲಿ ರುದ್ರಯಾಗವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ನಿಧಿ ಕುಂಭದಲ್ಲಿ ಭಕ್ತರು ತಮ್ಮ ಕೈಲಾದಷ್ಟು ಚಿನ್ನ ಬೆಳ್ಳಿ ನವರತ್ನಗಳನ್ನು ಸಮರ್ಪಿಸಲು ಅವಕಾಶವಿದೆ. ಭಕ್ತರು ನಗದು ರೂಪದಲ್ಲಿಯೂ ದೇಣಿಗೆಯನ್ನು ನೀಡಬಹುದು. ಈ ಮಹತ್ ಕಾರ್ಯದಲ್ಲಿ ಭಕ್ತರೆಲ್ಲ ಪಾಲ್ಗೊಂಡು ಗಾಯತ್ರಿ ದೇವಿಯ […]
ನಟ ವಸಿಷ್ಠ ಸಿಂಹ ವಡಭಾಂಡೇಶ್ವರದ ಭಕ್ತವೃಂದಕ್ಕೆ ಭೇಟಿ
ಉಡುಪಿ: ಕನ್ನಡ ಚಲನ ಚಿತ್ರರಂಗದ ಖ್ಯಾತ ನಟ ವಸಿಷ್ಠ ಸಿಂಹ ವಡಭಾಂಡೇಶ್ವರದ ಭಕ್ತವೃಂದಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಭಕ್ತವೃಂದದ ಅಧ್ಯಕ್ಷ ಹರೀಶ್ ಕಾಂಚನ್ ಸನ್ಮಾನಿಸಿದರು. ಭಕ್ತವೃಂದದ ಮಾಜಿ ಅಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸದಸ್ಯ ಭರತ್ ಬೈಲಕೆರೆ, ನಿದೀಶ್ ಶ್ರೀಯನ್, ಸುದರ್ಶನ್ ಬಂಗೇರ ಸ್ವಾಗತಿಸಿ ಬರಮಾಡಿಕೊಂಡರು.