ಏ.26 ರಂದು ಪ್ರತಿಯೊಬ್ಬ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ: ಲೋಕಸಭಾ ಚುನಾವಣೆ 2024 ರ ಚುನಾವಣೆಯು ಏಪ್ರಿಲ್ 26 ರಂದು ನಡೆಯಲಿದ್ದು, ಪ್ರತಿಯೊಬ್ಬ ಮತದಾರರು ಅಂದು ಮತದಾನ ಕೇಂದ್ರಕ್ಕೆ ತೆರಳಿ ತಪ್ಪದೇ ಮತದಾನ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ನ ಡಾ.ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕರಿಗೂ ಮತದಾನ ಮಾಡುವ ಮೂಲಕ ತಮ್ಮ ನಾಯಕನನ್ನು ಚುನಾಯಿಸಲು […]
ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಹತ್ಯಾ ದಾಳಿ: ಚೀನಾದ ಐವರು ಇಂಜಿನಿಯರ್ ಗಳ ಸಾವು
ಖೈಬರ್ ಪಖ್ತುಂಖ್ವಾ: ಖೈಬರ್ ಪಖ್ತುಂಖ್ವಾದ ಶಾಂಗ್ಲಾದ ಬೇಶಮ್ ನಗರದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಐವರು ಚೀನಾದ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ. ಆತ್ಮಹತ್ಯಾ ದಾಳಿಕೋರರು ತಮ್ಮ ಸ್ಫೋಟಕ ತುಂಬಿದ ಕಾರಿನಿಂದ ಚೀನಾದ ಪ್ರಜೆಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಮಲಕಾಂಡ್ನ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ ತಿಳಿಸಿದ್ದಾರೆ. ಚೀನಾದ ಪ್ರಜೆಗಳು ಇಸ್ಲಾಮಾಬಾದ್ನಿಂದ ದಾಸು ಶಿಬಿರಕ್ಕೆ ಹೋಗುತ್ತಿದ್ದ ಎಂಜಿನಿಯರ್ಗಳು ಎಂದು ವರದಿಯಾಗಿದೆ. ದಾಳಿಯಲ್ಲಿ ಕಾರಿನ ಚಾಲಕನಿಗೆ ಗಾಯಗಳಾಗಿದ್ದು, ಸ್ಥಳೀಯ […]
ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವ ಸಂಪನ್ನ
ಉಡುಪಿ: ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನ ಪರ್ಕಳ ಮಹಿಷಮರ್ದಿನಿ ಅಮ್ಮನವರ ಸನ್ನಿಧಿಯಲ್ಲಿ ವಾರ್ಷಿಕ ರಥೋತ್ಸವ ಮಾ.25 ರಂದು ಜರಗಿತು. ಅನ್ನ ಸಂತರ್ಪಣೆ, ಭಜನೆ, ಸ್ಯಾಕ್ಸೋಫೋನ್ ವಾದನ, ರಾತ್ರಿ ಶ್ರೀ ಮನ್ಮಹಾರಥೋತ್ಸವ, ಹಚ್ಚಡ ಸೇವೆ, ಚಂಡೆವಾದನ ನಡೆಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಿ. ರಾಮದಾಸ ಹೆಗ್ಡೆ ಸಂಚಾಲಕರಾದ ದಿಲೀಪ್ ರಾಜ್ ಹೆಗ್ಡೆ, ಮಹೇಶ ಠಾಕೂರ್, ಅಧ್ಯಕ್ಷ ಬಿ. ಜಯರಾಜ ಹೆಗ್ಡೆ, ಕಾರ್ಯಾಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಕೋಶಾಧಿಕಾರಿ ಸುಮಿತ್ರಾ ಆರ್. ನಾಯಕ್, […]
ಕಂಟೈನರ್ ಹಡಗು ಬಡಿದು ಅಮೇರಿಕಾದ ಪ್ರಮುಖ ಸೇತುವೆ ಕುಸಿತ: ಹಲವು ವಾಹನಗಳು ನೀರು ಪಾಲು
ವಾಷಿಂಗ್ಟನ್: ಕಂಟೈನರ್ ಹಡಗೊಂದು ಡಿಕ್ಕಿ ಹೊಡೆದದ್ದರಿಂದ ಅಮೆರಿಕದ ಬಾಲ್ಟಿಮೋರ್ ನಗರದ ಪ್ರಮುಖ ಸೇತುವೆ ಮಂಗಳವಾರ ಕುಸಿದು ಬಿದ್ದಿದೆ. ಈ ವೇಳೆ ಸೇತುವೆಯಲ್ಲಿದ್ದ ವಾಹನಗಳು ಕೂಡಾ ನೀರಿಗೆ ಬಿದ್ದಿವೆ. ನಾಟಕೀಯ ಸಿಸಿಟಿವಿ ದೃಶ್ಯಾವಳಿಯು ಕಂಟೇನರ್ ಹಡಗು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಬುಡಕ್ಕೆ ಬಡಿದು, ಸೇತುವೆಯು ಪಾಲಾಪ್ಸ್ಕೋ ನದಿಯ ಪಾಲಾಗುತ್ತಿರುವುದನ್ನು ತೋರಿಸುತ್ತಿದೆ. ಸೇತುವೆ ನದಿಗೆ ಕುಸಿದಿದ್ದು, ಸುಮಾರು 20 ಮಂದಿ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಕೆವಿನ್ ಕಾರ್ಟ್ರೈಟ್ ಪ್ರಕಾರ ಇಡೀ ಸೇತುವೆ ಕುಸಿದಿದೆ […]
ISRO ದಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಜಾಗೃತಿ ತರಬೇತಿ: ಏಪ್ರಿಲ್ 8 ರಿಂದ ನೋಂದಾವಣೆ
ಬೆಂಗಳೂರು: Space Science and Technology Awareness Training (START) – 2024(ಆನ್ ಲೈನ್ ಮಾದರಿ) ಅನ್ನು ಘೋಷಿಸಲಾಗಿದ್ದು, ವಿದ್ಯಾರ್ಥಿಗಳು https://jigyasa.iirs.gov.in/START ನಲ್ಲಿ ನೋಂದಾಯಿಸಿಕೊಳ್ಳಬಹುದು. ಏ. 15 ರಿಂದ ಮೇ.3 ರವರೆಗೆ ತರಬೇತಿ ನಡೆಯಲಿದೆ. ಥೀಮ್: ಸೌರ ಮಂಡಲದ ಪರಿಶೋಧನೆ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಆಸಕ್ತರಾಗಿರುವ ಶೈಕ್ಷಣಿಕ ಸಂಸ್ಥೆಗಳು ಏಪ್ರಿಲ್ 2, 2024 ರೊಳಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಏಪ್ರಿಲ್ 8, 2024 ರಿಂದ ನೋಂದಾಯಿಸಿಕೊಳ್ಳಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.