ಇಸ್ರೋದಿಂದ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆ: ಸ್ವಾಯತ್ತ ಲ್ಯಾಂಡಿಂಗ್ ಯಶಸ್ವಿಯಾಗಿ ನಿರ್ವಹಿಸಿದ ಮರುಬಳಕೆ ವಾಹನ ‘ಪುಷ್ಪಕ್’
ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮಾದರಿ ‘ಪುಷ್ಪಕ್’,(Pushpak) ರೆಕ್ಕೆಯ ವಾಹನವು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ (RLV-TD) ಎಂದೂ ಕರೆಯಲ್ಪಡುವ ಪುಷ್ಪಕ್ ಒಂದು ನಿರ್ದಿಷ್ಟ ಎತ್ತರದಿಂದ ಹೆಲಿಕಾಪ್ಟರ್‌ನಿಂದ ಬಿಡುಗಡೆಯಾದ ನಂತರ ರನ್‌ವೇಯಲ್ಲಿ ಸ್ವಾಯತ್ತ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಕೈಗೊಂಡಿದೆ. ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ಮಾರ್ಚ್ 22, 2024 ರಂದು ಬೆಳಿಗ್ಗೆ 7:10 ಕ್ಕೆ ನಡೆಸಲಾದ ಪ್ರಯೋಗವು […]
ಮಾ. 23-26: ಪಡುಅಂಜಾರು ಧೂಮಾವತಿ ಮತ್ತು ಪರಿವಾರ ದೈವಸ್ಥಾನದ ಕಾಲಾವಧಿ ನೇಮೋತ್ಸವ
ಹಿರಿಯಡ್ಕ: ಪಡುಅಂಜಾರು ಧೂಮಾವತಿ ಮತ್ತು ಪರಿವಾರ ದೈವಸ್ಥಾನದ ಕಾಲಾವಧಿ ನೇಮೋತ್ಸವವು ಮಾ. 23 ರಿಂದ 26 ರವರೆಗೆ ನಡೆಯಲಿದೆ. ಮಾ.23 ರಂದು ರಾತ್ರಿ 9 ಗಂಟೆಗೆ ಬೊಬ್ಬರ್ಯ ನೀಚ ದೈವಗಳ ನೇಮಮಾ.24 ರಂದು ರಾತ್ರಿ 9 ಗಂಟೆಗೆ ಪೂಮಾಲೆ ನೀಚ ದೈವ ನೇಮಮಾ.25 ರಂದು ಸಂಜೆ 7 ಗಂಟೆಗೆ ಅನ್ನಸಂತರ್ಪಣೆ, 8.30 ಕ್ಕೆ ಮೈಸಂದಾಯ ದೈವದ ನೇಮ, ರಾತ್ರಿ 9.30 ಕ್ಕೆ ಪಂಜುರ್ಲಿ ದೈವದ ನೇಮ, ರಾತ್ರಿ 11 ಗಂಟೆಗೆ ಜುಮಾದಿ, ಜುಮಾದಿ ಬಂಟ ದೈವಗಳ ನೇಮ […]
ಬ್ಯಾಂಕ್ ಆಫ್ ಬರೋಡಾ ವತಿಯಿಂದ ಅಂತರ ಕಾಲೇಜು ಹಿಂದಿ ಸಂಗೋಷ್ಠಿ ಕಾರ್ಯಕ್ರಮ
ಮಂಗಳೂರು: ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಮತ್ತು ಬೆಸಂಟ್ ಮಹಿಳಾ ಕಾಲೇಜು ಕೊಡಿಯಾಲ್ ಬೈಲ್, ಮಂಗಳೂರು ವತಿಯಿಂದ ಜಂಟಿಯಾಗಿ ಅಂತರ ಕಾಲೇಜು ಹಿಂದಿ ಸಂಗೋಷ್ಠಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಂಗಳೂರಿನ ಸ್ಥಳೀಯ ಕಾಲೇಜು, ಉಡುಪಿ ಮತ್ತು ಸುಳ್ಯ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಗೋಷ್ಠಿ ಮತ್ತು ಪೇಪರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ವಿಮರ್ಶಿಸಿ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು. ಬೆಸೆಂಟ್ ಮಹಿಳಾ ಕಾಲೇಜ್ ಪ್ರಾಂಶುಪಾಲ ಡಾ. ಪ್ರವೀಣ ಕುಮಾರ್ ಕೆ […]
ಅಬಕಾರಿ ನೀತಿ ಹಗರಣ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಜಾರಿ ನಿರ್ದೇಶನಾಲಯ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಕಾರ್ಯ ನಿರ್ವಹಿಸುತ್ತಿರುವಾಲೇ ಬಂಧನಕ್ಕೊಳಗಾದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂಗೆ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಕಳೆದ ಕೆಲವು ದಿನಗಳಿಂದ ಜಾರಿನಿರ್ದೇಶನಾಲಯವು ಬರೋಬ್ಬರಿ 9 ಸಮನ್ಸ್ […]
‘ಲೋಕ’ ಅಖಾಡಕ್ಕಿಳಿದ ಅಣ್ಣಾಮಲೈ: ಕೊಯಮತ್ತೂರಿನಿಂದ ಸ್ಪರ್ಧಿಸಲಿರುವ ಕರುನಾಡ ಸಿಂಘಂ
ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ (K Annamalai) ಕರ್ನಾಟಕದಲ್ಲಿ ಚಿರಪರಿಚಿತ ಹೆಸರು. ಕರುನಾಡ ಸಿಂಘಂ ಎಂದೇ ಖ್ಯಾತಿವೆತ್ತ ಕೆ.ಅಣ್ಣಾಮಲೈ ತಮಿಳುನಾಡಿನ ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಹುಟ್ಟುಹಾಕಿದ್ದಾರೆ. ಇದೀಗ, ಪಕ್ಷವು ಅವರನ್ನು ಕೊಯಮತ್ತೂರು ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಣ್ಣಾಮಲೈ 2019 ರಲ್ಲಿ ಸೇವೆಗೆ ರಾಜೀನಾಮೆ ನೀಡಿ 2020 ರಲ್ಲಿ ಬಿಜೆಪಿ ಸೇರಿದರು. ಒಂದು ವರ್ಷದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು 37 ನೇ ವಯಸ್ಸಿನಲ್ಲಿ ಅತಿ ಕಿರಿಯ […]