ಕರಾವಳಿಯ ಹೆಸರಾಂತ ಶೈಕ್ಷಣಿಕ ಸಂಸ್ಥೆ ‘ತ್ರಿಶಾ’ ವಿದ್ಯಾಸಂಸ್ಥೆಯಲ್ಲಿ ಬಹು ಬೇಡಿಕೆಯ ಸಿ.ಎ-ಸಿ.ಎಸ್ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಾರಂಭ
ಬಿ.ಕಾಂ ಜೊತೆಗೆ ಸಿ.ಎ ಮತ್ತು ಸಿ.ಎಸ್ – ಬಹು ಬೇಡಿಕೆಯ ಕೋರ್ಸ್ ವಾಣಿಜ್ಯ ಕ್ಷೇತ್ರದಲ್ಲಿ, ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಮತ್ತು ಕಂಪನಿ ಸೆಕ್ರೆಟರಿ (ಸಿಎಸ್) ನಂತಹ ವೃತ್ತಿಪರ ಕೋರ್ಸ್ ಗಳು ಅತ್ಯಂತ ಪ್ರಭಾವಿ ಹಾಗೂ ಬಹು ಬೇಡಿಕೆಯ ಕೋರ್ಸ್ ಗಳಾಗಿದೆ ಮತ್ತು ಇದಕ್ಕೆ ಪ್ರಪಂಚದಾದ್ಯಂತ ಮಾನ್ಯತೆ ದೊರಕಿದೆ. ಭಾರತದಲ್ಲಿ ಸಿ.ಎ ಮತ್ತು ಸಿ.ಎಸ್ ಕೋರ್ಸ್ ನೊಂದಿಗೆ ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ) ಪದವಿಯ ಸಂಯೋಜನೆಯು ಪ್ರಬಲವಾದ ಆಯ್ಕೆಯಾಗಿ ಹೊರಹೊಮ್ಮಿದೆ. ಸಿ.ಎ ಮತ್ತು ಸಿ.ಎಸ್ ಎಂದರೇನು ?ಚಾರ್ಟರ್ಡ್ ಅಕೌಂಟೆನ್ಸಿ […]
5, 8, 9,11 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅಸ್ತು: ಸೋಮವಾರದಿಂದ ಪರೀಕ್ಷೆ ಸಾಧ್ಯತೆ
ಬೆಂಗಳೂರು: ರಾಜ್ಯದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ (Board Exams) ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್(Karnataka High Court) ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ. 5, 8, 9,11 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಸ್ಥಗಿತಗೊಂಡಿದ್ದ ಪರೀಕ್ಷೆ ಮುಂದುವರೆಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಮುಂದಿನ ಪರೀಕ್ಷೆಯ ವೇಳೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ನ್ಯಾ. ಕೆ. ಸೋಮಶೇಖರ್, ನ್ಯಾ. ಕೆ. ರಾಜೇಶ್ ರೈ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಗ್ನಿ ಮತ್ತು ಸುರಕ್ಷತೆ ಕುರಿತು ಜಾಗೃತಿ ಕಾರ್ಯಾಗಾರ
ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕರ್ನಾಟಕ ರಾಜ್ಯದ ಅಗ್ನಿ ಸುರಕ್ಷತೆ ಸಂಸ್ಥೆ ಜಂಟಿಯಾಗಿ “ಅಗ್ನಿ ಮತ್ತು ಸುರಕ್ಷತೆ” ಕುರಿತು ಜಾಗೃತಿ ಕಾರ್ಯಾಗಾರವನ್ನು ಮಾ.18 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ್ ಕಲ್ಗುಟಿಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ದಹಿಸುವ ವಸ್ತುಗಳ ಸರಿಯಾದ ಶೇಖರಣೆ, ವಿದ್ಯುತ್ ವ್ಯವಸ್ಥೆಗಳ ಸಮರ್ಪಕನಿರ್ವಹಣೆ ಮತ್ತು ತೆರೆದ ಜ್ವಾಲೆಯ ಸುರಕ್ಷಿತ ಬಳಕೆಯಿಂದ ಅಗ್ನಿದುರಂತವನ್ನು ತಡೆಗಟ್ಟಬಹುದು ಎಂದು ತಿಳಿಸಿದರು. […]
ಏಪ್ರಿಲ್ 1 ರಿಂದ 30 ರ ವರೆಗೆ ಐದನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ: ಕಡ್ಡಾಯ ಲಸಿಕೆ ಹಾಕಿಸಲು ಜಿಲ್ಲಾಧಿಕಾರಿ ಮನವಿ
ಉಡುಪಿ: ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗ ನಿಯಂತ್ರಣಕ್ಕೆ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಐದನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏಪ್ರಿಲ್ 1 ರಿಂದ 30 ರ ವರೆಗೆ ಹಮ್ಮಿಕೊಳ್ಳಲಾಗುತ್ತಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಾನುವಾರು ಕಾಲುಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಲಸಿಕೆ […]
ಉಡುಪಿಯ ಡಾ ಟಿಎಂಎ ಪೈ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಪುನಶ್ಚೇತನ ಶಿಬಿರ
ಉಡುಪಿ: ಡಾ ಟಿಎಂಎ ಪೈ ಆಸ್ಪತ್ರೆ, ಉಡುಪಿ ಸಮಗ್ರ ಪಾರ್ಶ್ವವಾಯು ಪುನಶ್ಚೇತನ ಮತ್ತು ಚೇತರಿಕೆ ಕೇಂದ್ರ (ಸಿಸಿಎಸ್ಆರ್ಆರ್), ಮಾಹೆ, ಮಣಿಪಾಲದ ಸಹಯೋಗದೊಂದಿಗೆ ಉಚಿತ ಪಾರ್ಶ್ವವಾಯು ಪುನಶ್ಚೇತನ ಶಿಬಿರವನ್ನು ಮಾರ್ಚ್ 23 ರಂದು ಶನಿವಾರ ಬೆಳಿಗ್ಗೆ 9:00 ರಿಂದ 12:30 ವರೆಗೆ ಆಯೋಜಿಸಲಾಗಿದೆ. ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ಮತ್ತು ವಾಕ್ ಮತ್ತು ಶ್ರವಣ ವಿಭಾಗಗಳು ಈ ಶಿಬಿರದಲ್ಲಿ ಪಾರ್ಶ್ವವಾಯುವಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಪ್ರಶ್ನೋತ್ತರ, ಸ್ಟ್ರೋಕ್‌ಗೆ ಸಂಬಂಧಿಸಿದ ಸಮಸ್ಯೆಗಳ ತಪಾಸಣೆ ಮತ್ತು ಪುನಶ್ಚೇತನದ ಕುರಿತು ಮೌಲ್ಯಯುತವಾದ ವೈಯಕ್ತಿಕ […]