ಊರಿನ ಗ್ರಾಮಸ್ಥರು ಒಗ್ಗಟ್ಟಾಗಿ ದುಡಿದು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಎನ್. ಟಿ.ಅಮೀನ್
ಮಲ್ಪೆ: ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಎನ್. ಟಿ.ಅಮೀನ್ ಮಾತನಾಡಿ, ಊರಿನ ಗ್ರಾಮಸ್ಥರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಸಂಸ್ಕಾರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸಿ ಸಮಾಜ ಉಳಿಸಬೇಕಾಗಿದೆ. ದೇವಸ್ಥಾನ ಇನ್ನೂ ಹೆಚ್ಚು ಬೇಳಗುವಂತಾಗಬೇಕು ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಧು ಸಾಲ್ಯಾನ್, ಉಡುಪಿ ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್, ನಗರ ಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸ್ಮರಣಿಕ ಉಡುಪಿ […]
ಉಡುಪಿಯ ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್ ಮತ್ತು ಡಿಜಿಟಲ್ ಮಾರ್ಕೆಟರ್ ತಕ್ಷಣ ಬೇಕಾಗಿದ್ದಾರೆ
ಉಡುಪಿ: ಇಲ್ಲಿನ ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್(2) ಮತ್ತು ಡಿಜಿಟಲ್ ಮಾರ್ಕೆಟರ್(1) ಹುದ್ದೆಗೆ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. ಕನಿಷ್ಠ 1 ವರ್ಷದ ಕೆಲಸದ ಅನುಭವ ಇರುವ ಉಡುಪಿ ಆಸುಪಾಸಿನ ಅಭ್ಯರ್ಥಿಗಳಿಗೆ ಆದ್ಯತೆ. ಸಂಪರ್ಕ: 9448379989
ಉಡುಪಿ ಜಿಲ್ಲಾ ಆಸ್ಪತ್ರೆಯ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಮನವಿ
ಉಡುಪಿ: ಕಳೆದ ಹಲವು ತಿಂಗಳಿನಿಂದ ಉಡುಪಿ ಜಿಲ್ಲಾಸ್ಪತ್ರೆ ಯಲ್ಲಿ ಪೂರ್ಣ ಕಾಲಿಕ ಸರ್ಜನ್ ನಿಯುಕ್ತಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತೆ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ಗೆ ನೂತನವಾಗಿ ನಿಯುಕ್ತಿಗೊಂಡ ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್. ಅವರಿಗೆ ಮನವಿ ಸಲ್ಲಿಸಲಾಯಿತು. ಆಯುಷ್ಮಾನ್ […]
ವೇದಗಳಲ್ಲಿ ಉಲ್ಲೇಖಿತ ಸರಸ್ವತಿ ನದಿಯ ಪುನಶ್ಚೇತನ ಅಗತ್ಯ: ಜಗದೀಶ ಗಾಂಧಿ
ಮಣಿಪಾಲ: ವೇದಗಳಲ್ಲಿ ಉಲ್ಲೇಖಿಸಲ್ಪಟ್ಟ ‘ಸರಸ್ವತಿ’ ನದಿಯ ಪಾತ್ರವು ಸೆಟಲೈಟ್ ಚಿತ್ರಗಳ ಮೂಲಕ ಲಭ್ಯವಿದ್ದು, ಅದರ ಪುನಃಶ್ಚೇತನದ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಜಗದೀಶ ಗಾಂಧಿ ಅಭಿಪ್ರಾಯಪಟ್ಟರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಎಂಡ್ ಸೈನ್ಸಸ್ ಮತ್ತು ರೋಟರಿ, ಮಣಿಪಾಲ ಜಂಟಿಯಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ‘ಸರಸ್ವತಿ ರಿವರ್ ವಾಟರ್ ಆಂಡ್ ಎನ್ವಿರಾನ್ಮೆಂಟ್’ ವಿಷಯದ ಕುರಿತು ಮಾತನಾಡಿದರು. ನಾಲ್ಕು ಸಾವಿರ ವರ್ಷಗಳ ಹಿಂದೆ, ಬೌಗೋಳಿಕ ಕಾರಣಗಳಿಗಾಗಿ ತನ್ನ ಪಾತ್ರವನ್ನು ಬದಲಾಯಿಸಿದ ಸರಸ್ವತಿ ನದಿಯು ಇಂದು ಗುಪ್ತಗಾಮಿನಿಯಾಗಿ […]
ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ಪ್ರಕರಣ: ಮೂವರು ವಿದ್ಯಾರ್ಥಿಗಳ ವಿರುದ್ದ ಆರೋಪಪಟ್ಟಿ ಸಲ್ಲಿಕೆ
ಉಡುಪಿ: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಮೂಲಕ ವಿಡಿಯೊ ಚಿತ್ರೀಕರಣ ಮಾಡಿರುವ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು ಶಬನಾಜ್, ಅಲ್ಫಿಯಾ ಹಾಗೂ ಅಲಿಮತ್ ಉಲ್ ಶಫಾ ಎಂಬ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಸಹಪಾಠಿಯ ವಿಡಿಯೊ ಚಿತ್ರೀಕರಣ ಮಾಡಿರುವುದು ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಕಾಲೇಜಿನ ಮೂವರು ವಿದ್ಯಾರ್ಥಿನಿಯರನ್ನು ಒಳಗೊಂಡ ಶೌಚಾಲಯ ವಿಡಿಯೋ ಪ್ರಕರಣದಲ್ಲಿ ಕರ್ನಾಟಕ ಸಿಐಡಿ ಸುಮಾರು 1,000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಸಿಐಡಿಯು ಘಟನೆಯಲ್ಲಿ ಬಳಸಿದ […]