ಅಕ್ರಮ ರೊಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ: ಸುಪ್ರೀಂ ಕೋರ್ಟಿಗೆ ನಿಲುವು ತಿಳಿಸಿದ ಕೇಂದ್ರ ಸರ್ಕಾರ
ನವದೆಹಲಿ: ದೇಶದಲ್ಲಿ ಅಕ್ರಮ ರೊಹಿಂಗ್ಯಾ (Illegal Rohingyas) ಮುಸ್ಲಿಂ ವಲಸಿಗರ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಅಕ್ರಮ ರೋಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ವಾಸಿಸಲು ಮತ್ತು ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ(Union Government) ಸುಪ್ರೀಂ ಕೋರ್ಟ್ಗೆ (Supreme Court) ತಿಳಿಸಿದೆ. ಕಾನೂನುಬಾಹಿರವಾಗಿ ದೇಶವನ್ನು ಪ್ರವೇಶಿಸುವವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲು ನ್ಯಾಯಾಂಗವು ಪ್ರತ್ಯೇಕ ವರ್ಗವನ್ನು ರಚಿಸಲು ಸಾಧ್ಯವಿಲ್ಲ, ಸಂಸತ್ತು ಮತ್ತು ಕಾರ್ಯಾಂಗದ ನೀತಿ ನಿರ್ಧಾರಗಳನ್ನು ಅತಿಕ್ರಮಿಸಬಾರದು ಎಂದು ಅದು ಹೇಳಿದೆ. […]
ಕಾಪು: ಮಾ. 26-27 ರಂದು ಮೂರು ಮಾರಿಗುಡಿಯಲ್ಲಿ ಕಾಲಾವಧಿ ಸುಗ್ಗಿ ಮಾರಿಪೂಜೆ
ಕಾಪು: ಹಳೆ ಮಾರಿಗುಡಿ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ(Kaup Marigudi) ಏಕಕಾಲದಲ್ಲಿ ಜರಗುವ ಕಾಲಾವಧಿ ಸುಗ್ಗಿ ಮಾರಿಪೂಜೆಯು ಮಾ. 26 ಮತ್ತು 27ರಂದು ನಡೆಯಲಿದೆ. ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಎರಡು ದಿನಗಳ ಕಾಲ ಏಕಕಾಲದಲ್ಲಿ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಉಡುಪಿ ಜಿಲ್ಲೆ ಮಾತ್ರವಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡು, ಬೆಂಗಳೂರು, ಮುಂಬಯಿ ಹಾಗೂ ದೇಶ-ವಿದೇಶಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿವಿಧ […]
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ ವಾಪಾಸು ಕಳುಹಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಾಪಾಸು ಕಳುಹಿಸಿದ್ದಾರೆ ಎನ್ನಲಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿರುವ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ವರದಿ ಹೇಳಿದೆ. ಹೈಕೋರ್ಟ್ನ ಧಾರವಾಡ ಪೀಠವು ರಿಟ್ ಅರ್ಜಿ 3440/2005ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ […]
ಹೆಬ್ರಿ: ಯುವಕ ನೇಣು ಬಿಗಿದು ಆತ್ಮಹತ್ಯೆ..
ಹೆಬ್ರಿ: ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯಗೆ ಶರಣಾದ ಘಟನೆ ಮಾ. 16ರಂದು ಹೆಬ್ರಿಯಲ್ಲಿ ಸಂಭವಿಸಿದೆ. ಬಿಹಾರ ಮೂಲದ ಆಶಾದ್ ದಿಲ್ಶಾದ್ (22) ನೇಣಿಗೆ ಶರಣಾದ ಯುವಕ. ಆಶಾದ್ ದಿಲ್ಶಾದ್ ಹೆಬ್ರಿಯಲ್ಲಿ ಬಾಡಿಗೆ ರೂಮ್ನಲ್ಲಿ ವಾಸವಿದ್ದು ರೂಮಿನ ಒಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೋ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
IPL 2024: CSK v/s RCB ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ: ಪೂಮಾ ವೈಬ್ ಸೈಟ್ ನಲ್ಲಿ RCB ಹೊಸ ಜರ್ಸಿ ಲಭ್ಯ
ಮಂಗಳವಾರದಂದು RCB ಅನ್ ಬಾಕ್ಸಿಂಗ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಕೇವಲ ಒಂದೇ ದಿನದಲ್ಲಿ ಪಂದ್ಯ ಆರಂಭವಾಗಲಿದ್ದು, ಆರ್ಸಿಬಿ ಅಭಿಮಾನಿಗಳಿಗೆ ತಂಡದ ಹೊಸ ಜೆರ್ಸಿ ಖರೀದಿಸುವ ಅವಕಾಶವಿದೆ. ಆರ್ಸಿಬಿ ಜೆರ್ಸಿಯನ್ನು ಪೂಮಾ ವೆಬ್ಸೈಟ್ನಲ್ಲಿ ಖರೀದಿಸಬಹುದು. ಹೊಸ ಜೆರ್ಸಿಯ ಬೆಲೆ 4999 ರೂಪಾಯಿ. ಜೊತೆಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲು ತನ್ನ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಾಯಿಸಿದೆ. CSK ಮತ್ತು RCB ಮಾ. 22 ರಂದು ಮೊದಲ ಪಂದ್ಯದೊಂದಿಗೆ ತಮ್ಮ IPL […]