ಕಲಾವಿದರ ಮೇಲೆ ದಬ್ಬಾಳಿಕೆ ಖಂಡಿಸಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದ ತುಳುನಾಡ ಕಲಾವಿದರು

ಮಂಗಳೂರು: ದೈವ–ದೇವರ ನಿಂದೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರಂಗಭೂಮಿ, ಯಕ್ಷಗಾನ ಮತ್ತು ಸಿನಿಮಾ ಕಲಾವಿದರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿ ಕಲಾವಿದರು ಸೋಮವಾರ ನಡೆಸಿದ ಸಭೆಯಲ್ಲಿ ತೀವ್ರ ಹೋರಾಟಕ್ಕೆ ಇಳಿಯಲು ನಿರ್ಧರಿಸಲಾಯಿತು. ತುಳು ನಾಟಕ ಕಲಾವಿದರ ಒಕ್ಕೂಟ, ಜಿಲ್ಲಾ ರಂಗ ಸಮ್ಮಿಲನ ವೇದಿಕೆ, ಕೋಸ್ಟಲ್ ವುಡ್ ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟ ಮತ್ತು ಯಕ್ಷಗಾನ ಕಲಾವಿದರು ಸೋಮವಾರದಂದು ಡಾನ್ ಬಾಸ್ಕೋ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದು, ವಿಜಯಕುಮಾರ್ ಕೊಡಿಯಾಲ್ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉತ್ಕರ್ಷ”: ಐದು ದಿನಗಳ ಬೋಧಕರ ಅಭಿವೃದ್ದಿ ಕಾರ್ಯಕ್ರಮ

ಉಡುಪಿ: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕವು ಕಾಲೇಜಿನ ಐ ಎಸ್ ಟಿ ಇ ಘಟಕದ ಸಹಯೋಗದೊಂದಿಗೆ ಆಯೋಜಿಸಲಾದ ಐದು ದಿನದಬೋಧಕರ ಅಭಿವೃದ್ದಿ ಕಾರ್ಯಾಗಾರ “ಉತ್ಕರ್ಷ” ಇದರ ಉದ್ಘಾಟನೆ ಸೋಮವಾರ ನಡೆಯಿತು. ಸಂಪನ್ಮೂಲ ವ್ಯಕ್ತಿ, ಬಿ ಎನ್ ಎಮ್ ತಾಂತ್ರಿಕ ವಿದ್ಯಾಲಯದ ಭಗವಾನ್ ಎಸ್ ಕೆ ಮಾತನಾಡಿ 21ನೇ ಶತಮಾನದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಮತ್ತು ಸಂಸ್ಥೆಯ ಯಶಸ್ಸಿಗೆ ಅಧ್ಯಾಪಕರು ಎಲ್ಲಾ ಕೌಶಲ್ಯವನ್ನು ಹೊಂದಿರಬೇಕು ಮತ್ತು ಬೋಧನಾ ಕಲಿಕೆಯು ಜೀವನದುದ್ದಕ್ಕೂ ಮುಂದುವರೆಯುವಂತ […]
ಉಡುಪಿ: The Ad Masters ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್ ಬೇಕಾಗಿದ್ದಾರೆ

ಉಡುಪಿ: The Ad Masters ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್ ಬೇಕಾಗಿದ್ದಾರೆ. ಅರ್ಹತೆ: 2 ವರ್ಷದ ಅನುಭವ, ಡಿಸೈನ್ ಸಾಫ್ಟವೇರ್ ಗಳಲ್ಲಿ ಪರಿಣತಿ, ತಂಡದೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ, ಉತ್ತಮ ಸಂವಹನ ಕೌಶಲ್ಯ ಆಸಕ್ತರು ಸಿವಿ ಕಳುಹಿಸಿ: [email protected] Contact:+91 9448379989
ಮಲ್ಪೆ: ಶ್ರೀ ರಾಮಧಾಮ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀ ದೇವರಿಗೆ ಸ್ವರ್ಣ ಕವಚ ಸಮರ್ಪಣೆ

ಮಲ್ಪೆ: ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಇದರ ನೂತನವಾಗಿ ನಿರ್ಮಿಸಿದ ಶ್ರೀ ರಾಮಧಾಮ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀ ದೇವರಿಗೆ ಸ್ವರ್ಣ ಕವಚ ಸಮರ್ಪಣೆ ಕಾರ್ಯಕ್ರಮವು ಸೋಮವಾರ ನಡೆಯಿತು. ಮಂದಿರಕ್ಕೆ ಪ್ರಥಮ ಭೇಟಿ ನೀಡಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದ ಒಡೆಯರ್ ಸ್ವಾಮೀಜಿಯವರನ್ನು ಕಲ್ಮಾಡಿ ಸೇತುವೆ ಬಳಿಯಿಂದ ಭವ್ಯವಾದ ಮೆರವಣಿಗೆಯಲ್ಲಿ ಚಂಡೆ , ಮಂಗಳವಾದ್ಯ , ಭಜನೆ ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಪಾದ ಪೂಜೆಗೈದು ಫಲ […]
ಷೇರು ಮಾರುಕಟ್ಟೆ ಪ್ರವೇಶಿಸಿದ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿ: 5೦ ಕೋಟಿ ರೂ. ಮೌಲ್ಯದ ಐದು ಲಕ್ಷ ಷೇರು ಬಿಡುಗಡೆ

ಮಂಗಳೂರು: ತೆಂಗು ಬೆಳೆಗಾರರೇ ಸ್ಥಾಪಿಸಿ, ಮುನ್ನಡೆಸುತ್ತಿರುವ ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯು ತನ್ನ ಕಾರ್ಯ ವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಷೇರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ದೇಶದ ಅತೀ ದೊಡ್ಡ ತೆಂಗು ಬೆಳೆಗಾರರ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಥೆಯು 3೦೦ ಕೋಟಿ ರೂ. ಮೌಲ್ಯದ ವಿಸ್ತೃತ ಯೋಜನೆ ಕೈಗೆತ್ತಿಕೊಂಡಿದೆ. ಇದರ ಭಾಗವಾಗಿ ಮೊದಲ ಹಂತದಲ್ಲಿ 5೦ ಕೋಟಿ ರೂ. ಮೌಲ್ಯದ […]