ಸಾರ್ವತ್ರಿಕ ಚುನಾವಣೆ: ಜಿಲ್ಲಾಧಿಕಾರಿಗಳಿಂದ ಚೆಕ್ ಪೋಸ್ಟ್ ಪರಿಶೀಲನೆ
ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಘೋಷಣೆಯಾದ ಹಿನ್ನಲೆಯಲ್ಲಿ ಕಾರ್ಕಳ ತಾಲೂಕಿನ ಸಾಣೂರು, ರೆಂಜಾಳ, ಈದು, ನಲ್ಲೂರು, ಮಾಳ ಮತ್ತು ಹೆಬ್ರಿ ತಾಲೂಕಿನ ಸೋಮೇಶ್ವರ ಹಾಗೂ ಕುಂದಾಪುರ ತಾಲೂಕಿನ ಹಾಲಾಡಿ, ಹೊಸಂಗಡಿ, ಸಾಯಿಬ್ರಕಟ್ಟೆಯಲ್ಲಿ ತೆರೆಯಲಾದ ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಅರಿವು ಕಾರ್ಯಕ್ರಮ
ಉಡುಪಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ಮಾರ್ಚ್ 14 ರಂದು ಪ್ರಸಾದ್ ನೇತ್ರಾಲಯ ಆಸ್ಪತ್ರೆ ಉಡುಪಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ನೇತ್ರದಾನ ಅರಿವು ಮತ್ತು ಉಚಿತ ನೇತ್ರ ತಪಾಸಣಾ ಪರೀಕ್ಷೆಯನ್ನು ಆಯೋಜಿಸಿತ್ತು. ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಉಡುಪಿ ಜಿಲ್ಲೆ ಇದರ ಅಧ್ಯಕ್ಷ, ಲಯನ್ ಪಿ.ಎಂ.ಜೆ.ಎಫ್. ಬಸ್ರೂರು ರಾಜೀವ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಸಾದ್ ನೇತ್ರಾಲಯ ಉಡುಪಿಯ ಸಲಹೆಗಾರ್ತಿ ಡಾ.ಅನುಷಾ ಭಾಗವಹಿಸಿದ್ದರು. ಅತಿಥಿಗಳಾಗಿ […]
ಮಾರ್ಚ್ 24 ರಿಂದ ಆಚಾರ್ಯಾಸ್ ಏಸ್ ನಲ್ಲಿ CET, JEE, NEET ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳ ತರಬೇತಿ ಪ್ರಾರಂಭ
ಉಡುಪಿ: 9 ,10, PUC, CET,JEE, NEET ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್(Acharyas AACE )ವತಿಯಿಂದ CET ಹಾಗೂ NEET ಪರೀಕ್ಷೆಗಳಿಗೆ 25 ದಿನಗಳ ನಿರಂತರ ಕ್ರಾಶ್ ಕೋರ್ಸ್ ತರಬೇತಿಯು ಮಾ.24 ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 18,19 ಮತ್ತು 20 ರಂದು ಕರ್ನಾಟಕ ಸಿಇಟಿ ಪರೀಕ್ಷೆಯು ಜರಗಲಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ. 23 ರಂದು ಮುಗಿಯಲಿದೆ. […]
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ: ಕಲ್ಲು ತೂರಾಟ ನಡೆಯುತ್ತಿದ್ದ ನಾಡಿನಲ್ಲಿ ರೇಸಿಂಗ್ ಕಾರುಗಳ ಓಡಾಟ
ಶ್ರೀನಗರ: ವಿಶ್ವಪ್ರಸಿದ್ಧ ದಾಲ್ ಸರೋವರದ ದಡದಲ್ಲಿ ಭಾನುವಾರದಂದು ಮೊದಲ ಬಾರಿಗೆ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ ಕಾರ್ಯಕ್ರಮವನ್ನು ಶ್ರೀನಗರದಲ್ಲಿ (Jammu and Kashmir) ಆಯೋಜಿಸಲಾಗಿತ್ತು. ವೃತ್ತಿಪರ ಫಾರ್ಮುಲಾ 4 (Formula 4 Racing) ಚಾಲಕರು ಪ್ರದರ್ಶಿಸಿದ ಸಾಹಸಗಳು ಸ್ಥಳೀಯರು ಮತ್ತು ಮೋಟಾರ್‌ಸ್ಪೋರ್ಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ನಗರದ ದಾಲ್ ಸರೋವರದ ದಡದಲ್ಲಿರುವ ಲಲಿತ್ ಘಾಟ್‌ನಿಂದ ನೆಹರೂ ಪಾರ್ಕ್‌ವರೆಗಿನ 1.7 ಕಿಮೀ ಟ್ರ್ಯಾಕ್‌ನಲ್ಲಿ ರೇಸಿಂಗ್ ಕಾರುಗಳು “ರೊಂಯ್ಯ್” ಎನ್ನುತ್ತಾ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದವು. ಸ್ಥಳೀಯ ಅಧಿಕಾರಿಗಳ ಪ್ರಕಾರ, ಈ […]
ಹೆಣ್ಮಕ್ಕಳೇ ಸ್ಟ್ರಾಂಗು ಗುರೂ… ಚೊಚ್ಚಲ ಕಪ್ ಗೆದ್ದ RCB ಮಹಿಳಾ ತಂಡ!! ಪುರುಷರ ತಂಡದ ಮೇಲೆ ಹೆಚ್ಚಾದ ಒತ್ತಡ… Instagram ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ RCB
ಆರ್‌ಸಿಬಿ (RCB) ಮಹಿಳಾ ತಂಡ ಡೆಲ್ಲಿ ಕ್ಯಾಪಟಿಲ್ಸ್ ವಿರುದ್ಧ ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಮೊದಲ ಗೆಲುವು ಸಾಧಿಸಿ ಇತಿಹಾಸ ಬರೆದಿದೆ. 16 ವರ್ಷಗಳಿಂದ ಪುರುಷರ ತಂಡ ಗೆಲುವಿಗಾಗಿ ಹಪಹಪಿಸುತ್ತಿದೆ. ಆದರೆ ಈ ಬಾರಿ ಮಹಿಳಾ ತಂಡ ಫೈನಲ್ಸ್ ಗೆದ್ದಿದೆ. ರೋಚಕ ಪಂದ್ಯವನ್ನು ಕೋಟ್ಯಂತರ ಅಭಿಮಾನಿಗಳು ವೀಕ್ಷಿಸಿದ್ದು, ವಿರಾಟ್ ಕೊಹ್ಲಿ ಕೂಡ ಅಭಿಮಾನಿಯಂತೆ ಪಂದ್ಯ ವೀಕ್ಷಿಸಿದ್ದಾರೆ. ಗೆಲುವಿನ ಖುಷಿ ತಾಳಲಾರದೆ ಕೊಹ್ಲಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ವಿಡಿಯೋ ಕಾಲ್ ಮಾಡಿದ್ದಾರೆ. ಕಪ್ ಗೆದ್ದಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ […]