ಮಹಿಳೆಯರು ದೈಹಿಕ ಸ್ವಾಸ್ಥ್ಯ ಮತ್ತು ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು: ಡಾ.ಅಂಜಲಿ ಸುನಿಲ್ ಮುಂಡ್ಕೂರು
ಉಡುಪಿ: ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಅದಕ್ಕೆ ಮುಖ್ಯ ಕಾರಣ ತೊಂದರೆ ಕಾಣಿಸಿಕೊಂಡಾಗ ಮಾತ್ರ ಅವರು ವೈದ್ಯರ ಬಳಿಗೆ ಹೋಗುವುದು. ಸಮಸ್ಯೆಗಳು ಇಲ್ಲದಾಗಲೇ ಸಮಸ್ಯೆಗಳು ಬರದಂತೆ ಮುಂಜಾಗರೂಕತೆ ವಹಿಸಲು ಪ್ರತಿವರ್ಷ ಅಥವಾ ಕನಿಷ್ಠ ಮೂರು ವರ್ಷಕ್ಕೊಮ್ಮೆಯಾದರೂ ಮಹಿಳೆಯರು ವೈದ್ಯರನ್ನು ಭೇಟಿ ಮಾಡಲೇಬೇಕು ಎಂದು ಭಾನುವಾರ ಸಂಜೆ ಮಾ10 ರಂದು ಬ್ರಾಹ್ಮಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಹಮ್ಮಿಕೊಂಡ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ […]