ನಿಸರ್ಗದ ಮಡಿಲಲ್ಲಿ ಸ್ವಂತ ಮನೆಯ ಕನಸು ನನಸಾಗಿಸುವ ರೋಹನ್ ಎಸ್ಟೇಟ್ ನೀರುಮಾರ್ಗ ಹಿಲ್ಸ್!!
ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ನೀರುಮಾರ್ಗದ ಶಾಂತ, ಸುಂದರ ಪರಿಸರದಲ್ಲಿ, ಆಧುನಿಕ ಜೀವನ ಶೈಲಿಗೆ ಅಗತ್ಯವಾದ ಅತ್ಯಾಧುನಿಕ ಸಕಲ ಸೌಕರ್ಯಗಳೊಂದಿಗೆ ರೋಹನ್ ಎಸ್ಟೇಟ್ ನೀರುಮಾರ್ಗ ಹಿಲ್ಸ್ ರೂಪುಗೊಳ್ಳುತ್ತಿದೆ. ವಿಶೇಷತೆಗಳು ನೀರುಮಾರ್ಗ ನಗರಕ್ಕೆ ಅತ್ಯಂತ ಹತ್ತಿರದಲ್ಲಿರುವ 9.48 ಎಕರೆ ವಿಸ್ತಾರವಾದ ಪ್ರದೇಶದಲ್ಲಿ, ರೋಹನ್ ಎಸ್ಟೇಟ್ ವಸತಿ ಬಡಾವಣೆ ನಿರ್ಮಾಣಗೊಳ್ಳುತ್ತಿದೆ. ಸುಂದರವಾಗಿ ಅಭಿವೃದ್ಧಿ ಪಡಿಸಿದ 96 ನಿವೇಶನಗಳು ಗೇಟೆಡ್ ಕಮ್ಯೂನಿಟಿಯ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಅಗಲವಾದ ಕಾಂಕ್ರಿಟ್ ರಸ್ತೆಗಳು, ಸರಾಗವಾಗಿ ಮಳೆ ನೀರಿನ ಹರಿವು ಹಾಗೂ ಮಳೆನೀರಿನ ಕೊಯ್ಲಿನ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ […]
75 ಲಕ್ಷ ರೂಪಾಯಿ ಅನುದಾನದ ಕೋಟೆ ಕಮಾನು ರಸ್ತೆ; ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆ ಕಮಾನು ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಮಾ.14 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತ್ತನ್ನ, ಉಪಾಧ್ಯಕ್ಷರಾದ ಯೋಗೀಶ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ […]
ಮಾ.16: ತ್ರಿಶಾ ಸಂಸ್ಥೆಯಲ್ಲಿ ಕರ್ನಾಟಕದ ಪ್ರತಿಷ್ಠಿತ ಟಿವಿ ಕಾರ್ಯಕ್ರಮ ಕಾಮಿಡಿ ಕಿಲಾಡಿ ಆಡಿಷನ್
ಕಟಪಾಡಿ: ಇಲ್ಲಿನ ಮಟ್ಟು ರೋಡ್, ಎಸ್.ವಿ.ಎಸ್ ಕ್ಯಾಂಪಸ್ ನ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಕರ್ನಾಟಕದ ಪ್ರತಿಷ್ಠಿತ ಟಿವಿ ಕಾರ್ಯಕ್ರಮ ಕಾಮಿಡಿ ಕಿಲಾಡಿ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳ ಆಡಿಷನ್ ಮಾ.16 ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪಿಟ್ ಬುಲ್ , ಬುಲ್ ಡಾಗ್, ರಾಟ್ ವೀಲರ್ ಸೇರಿದಂತೆ 23 ತಳಿಯ ನಾಯಿಗಳ ಮಾರಾಟ ಹಾಗೂ ಸಾಕಾಣೆಗೆ ನಿಷೇಧ
ಹೊಸದಿಲ್ಲಿ: ಪಿಟ್ ಬುಲ್ ಟೆರಿಯರ್, ಅಮೆರಿಕನ್ ಬುಲ್ ಡಾಗ್, ರಾಟ್‌ವೀಲರ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಯ ನಾಯಿಗಳ ಮಾರಾಟ ಮತ್ತು ಸಾಕಣೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ನಿರ್ದೇಶನದಲ್ಲಿ ಜನರು 23 ತಳಿಗಳ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿರ್ಬಂಧಿಸುತ್ತದೆ. ಈಗಾಗಲೇ ಸಾಕು ಪ್ರಾಣಿಗಳಾಗಿ ಸಾಕಿರುವ ಈ ತಳಿಯ ನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ ಮುಂದೆ ಸಂತಾನಾಭಿವೃದ್ಧಿ ಆಗದಂತೆ ನೋಡಿಕೊಳ್ಳಬೇಕು ಎಂದೂ ಕೇಂದ್ರ ಹೇಳಿದೆ. ಕೆಲವು ತಳಿಯ ನಾಯಿಗಳನ್ನು […]
ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರಾಗಿ ವಿ ಸುನಿಲ್ ಕುಮಾರ್ ನಿಯುಕ್ತಿ
ಕಾರ್ಕಳ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರನ್ನಾಗಿ ನಿಯುಕ್ತಿ ಮಾಡಲಾಗಿದೆ. ಈ ಕುರಿತು ಮಾ. 14ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.