ಪೆರ್ಡೂರು: ನಾಳೆ ಮಧ್ಯಮಾರಾಟ ನಿಷೇಧ
ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯು ಮಾರ್ಚ್ 12 ರಿಂದ ಮಾರ್ಚ್ 19 ರವರೆಗೆ ನಡೆಯಲಿದ್ದು, ಮಾರ್ಚ್ 16ರಂದು ರಥರೋಹಣ, ಅನ್ನಸಂತರ್ಪಣೆ ಮತ್ತು ಸಂಜೆ 6.30 ಕ್ಕೆ ಶ್ರೀ ಮನ್ಮಹಾರಥೋತ್ಸವ ನಡೆಯಲಿದ್ದು ಈ ಸಮಯ ಕೆಲವರು ಮದ್ಯಪಾನ ಸೇವಿಸಿ ಬಂದು ಕಾನೂನು ಸುವ್ಯಸ್ಥೆಗೆ ಧಕ್ಕೆವುಂಟಾಗುವ ಹಿನ್ನಲೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಿರಿಯಡಕ ಪೊಲೀಸ್ ಠಾಣಾ ಸರಹದ್ದಿನ ಪೆರ್ಡೂರು ಗ್ರಾಮದಲ್ಲಿ ಮಾರ್ಚ್ 16 ರ ಬೆಳಗ್ಗೆ 6 ಗಂಟೆಯಿ೦ದ ರಾತ್ರಿ 12 ಗಂಟೆಯವರೆಗೆ ಕರ್ನಾಟಕ […]
ನಾಳೆ ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ: ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ
ಉಡುಪಿ, ಮಾರ್ಚ್ 15: ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ರಾ.ಹೆ.169(ಎ) ರ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಮಾರ್ಚ್ 16 ರಂದು ಸಂಜೆ 4 ಗಂಟೆಯಿ೦ದ ರಾತ್ರಿ 10 ಗಂಟೆಯವರೆಗೆ ವಾಹನಗಳಿಗೆ ಈ ಕೆಳಗಿನಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿದೆ. ರಾ.ಹೆ.169(ಎ)ರಲ್ಲಿ ಉಡುಪಿಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳಿಗೆ ಹಿರಿಯಡ್ಕ ಜಂಕ್ಷನ್ ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾಕಟ್ಟೆ-ಹರಿಖಂಡಿಗೆ-ಬೈರ೦ಪಳ್ಳಿ-ಪೆರ್ಡೂರು-ಮೇಟೆ ಮಾರ್ಗವಾಗಿ ಅಥವಾ ಹಿರಿಯಡ್ಕ ಬಜೆ, ಕುಕ್ಕೆಹಳ್ಳಿ, ಪೇತ್ರಿ ಮಾರ್ಗವಾಗಿ ಹೆಬ್ರಿ […]
ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ
ಮಲ್ಪೆ: ಜೀರ್ಣೋದ್ಧಾರಗೊಂಡ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವು ದೇಗುಲದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಬುಧವಾರ ಬೆಳಗ್ಗೆ ಜರಗಿತು. ಶಾಸಕ ಯಶ್ಪಾಲ್ ಸುವರ್ಣ ಅವರು ಚಪ್ಪರ ಮುಹೂರ್ತವನ್ನು ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು, ಆನುವಂಶಿಕ ಆಡಳಿತ ಮೊಕೇಸರ ಶ್ರೀನಿವಾಸ ಭಟ್, ಕಾರ್ಯಾಧ್ಯಕ್ಷ ನಾಗರಾಜ್ ಮೂಲಿಗಾರ್, ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಉಪಾಧ್ಯಕ್ಷ ಆನಂದ ಪಿ. ಸುವರ್ಣ, ರಮೇಶ್ ಕೋಟ್ಯಾನ್, ಶರತ್ […]
ವಡಭಾಂಡೇಶ್ವರ ಬಲರಾಮ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಯಶ್ ಪಾಲ್ ಸುವರ್ಣ ಅವರಿಗೆ ಸನ್ಮಾನ
ಮಲ್ಪೆ: ಇಲ್ಲಿನ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ದೇಗುಲದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ, ಆಡಳಿತ ಮೊಕ್ತೇಸರ ಟಿ. ಶ್ರೀನಿವಾಸ್ ಭಟ್, ಶ್ರೀಶ ಭಟ್ ಕಡೆಕಾರು, ಸಮಿತಿಯ ಪ್ರಮುಖರಾದ ಆನಂದ ಪಿ. ಸುವರ್ಣ, ರಮೇಶ್ ಕೋಟ್ಯಾನ್, ಶರತ್ ಬೈಲಕರೆ, ವಿನೋದ್ ಸುವರ್ಣ ಉಪಸ್ಥಿತರಿದ್ದರು.
ಕಾಪು: ಆಕಸ್ಮಿಕವಾಗಿ ಬೋಟ್ನಿಂದ ನೀರಿಗೆ ಬಿದ್ದು ಮೀನುಗಾರ ಮೃತ್ಯು.
ಕಾಪು: ಕಾಪು ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಆಕಸ್ಮಿಕವಾಗಿ ಬೋಟ್ನಿಂದ ನೀರಿಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಉಳಿಯಾರಗೋಳಿ ಗ್ರಾಮದ ಪೊಲಿಪು ಬಳಿ ರಾತ್ರಿ ಸಂಭವಿಸಿದೆ. ಮೃತಪಟ್ಟ ಮೀನುಗಾರ ಉದ್ಯಾವರ ಪಿತ್ರೋಡಿ ನಿವಾಸಿ ರಾಮಾಜು ಕೋಟ್ಯಾನ್ (54) ಎಂದು ತಿಳಿಯಲಾಗಿದೆ. ರಾಮಾಜು ಇತರ ನಾಲ್ವರೊಂದಿಗೆ ಬುಧವಾರ ರಾತ್ರಿ ಮೀನು ಹಿಡಿಯುತ್ತಿರುವಾಗ ಬಲೆಯನ್ನು ಮೇಲಕ್ಕೆ ಎಳೆಯುತ್ತಿದ್ದ ವೇಳೆ ನೀರಿಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತತ್ಕ್ಷಣ ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು. ಕಾಪು ಠಾಣೆಯಲ್ಲಿ […]