ಬ್ರಾಹ್ಮಣ ಮಹಾ ಸಭಾ ಕೊಡವೂರು: ವಿಪ್ರ ಮಹಿಳಾ ದಿನಾಚರಣೆ

ಕೊಡವೂರು: ಅಂತರಾಷ್ಟ್ರೀಯ ‌ಮಹಿಳಾ ದಿನದ ಅಂಗವಾಗಿ ಕೊಡವೂರು ಬ್ರಾಹ್ಮಣ ಮಹಾ ಸಭಾದಿಂದ ಅಪರೂಪದ ಚುಕ್ಕಿ ಮಂಡಲ ಆರ್ಟ್ ಕಲಾವಿಭಾಗದಲ್ಲಿ ರಾಷ್ಟ್ರೀಯ ‌ಮಟ್ಟದಲ್ಲಿ ಸಾಧನೆಗೈದ ಕಲಾವಿದೆ, ರಂಗವಲ್ಲಿ,ಸಂಗೀತ, ವಾರ್ಲಿ ಕಲೆ, ಫ್ಯಾಬ್ರಿಕ್ ಪೇಂಟಿಂಗ್, ಕಸೂತಿ ಹೀಗೆ ಲಲಿತ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಶ್ರೀಮತಿ ಅಶ್ವಿನಿ ಶ್ರೀನಿವಾಸ್ ಇವರನ್ನು ಅವರ ಸ್ವಗೃಹ ಶ್ರೀವಾಸದಲ್ಲಿ ಅಭಿನಂದಿಸಲಾಯಿತು‌. ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಕೋಶಾಧಿಕಾರಿ ಶ್ರೀಧರ ಶರ್ಮ, ಸದಸ್ಯರಾದ ರೋಹಿಣಿ ಬಾಯರಿ, ಸೌಮ್ಯಾ ಗಣೇಶ್, ಕೌಸ್ತುಭ […]

ರಾಜ್ಯಸಭೆ ಸದಸ್ಯೆಯಾಗಿ ಸುಧಾ ಮೂರ್ತಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಲೇಖಕಿ, ಸಮಾಜ ಸೇವಕಿ, ಇನ್ಫೋಸಿಸ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇಂದು ಗುರುವಾರ ದೆಹಲಿಯಲ್ಲಿ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು ತಮ್ಮ ಮಾತೃಭಾಷಾ ಒಲವನ್ನು ವ್ಯಕ್ತಪಡಿಸಿದರು. ಮೂಲತಃ ಇಂಜಿನಿಯರ್ ಆಗಿರುವ ಸುಧಾ ಮೂರ್ತಿ ಅವರು ತಮ್ಮ ಪತಿ ಎನ್ ಆರ್ ನಾರಾಯಣ ಮೂರ್ತಿ ಅವರ ಸಮ್ಮುಖದಲ್ಲಿ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಸಂಸತ್ ಭವನದ ತಮ್ಮ ಕಚೇರಿಯಲ್ಲಿ ಪ್ರಮಾಣ […]

ಕಿನ್ನಿಮೂಲ್ಕಿ: ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಮಹಿಳಾ ದಿನಾಚರಣೆ

ಕಿನ್ನಿಮೂಲ್ಕಿ: ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಬುಧವಾರ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಯಿತು. ಆ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ಹಾಗೂ ಊರಿನ ಸುಮಾರು 55 ಮಹಿಳೆಯರು ಭಾಗವಹಿಸಿದ್ದರು. ಡಾ. ಉಷಾ ಚಡಗ, ಸಂಧ್ಯಾ ರಮೇಶ್, ಸುರೇಖಾ ಭಟ್, ವಿಜಯಲಕ್ಷ್ಮಿ ಕಿರಣ್, ಲಲಿತಾ ಹೆಬ್ಬಾರ್ , ಶಕುಂತಲಾ ಕೆ.ಎಲ್.ರಾವ್ , ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಎನ್. ರಾಜೇಂದ್ರ, ಕಾರ್ಯದರ್ಶಿ ಮಂಚಿ ಸುರೇಶ್ ರಾವ್ , ಕೋಶಾಧಿಕಾರಿಶ್ರೀಕಾಂತ್ […]

ಒಂದು ರಾಷ್ಟ್ರ, ಒಂದು ಚುನಾವಣೆ: ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದ ಉನ್ನತ ಮಟ್ಟದ ಸಮಿತಿ

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು 18,626 ಪುಟಗಳನ್ನು ಒಳಗೊಂಡ ವರದಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಗುರುವಾರ ದೇಶಾದ್ಯಂತ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತು ತನ್ನ ವರದಿಯನ್ನು ಸಲ್ಲಿಸಿದೆ. ವರದಿಯು ಸೆಪ್ಟೆಂಬರ್ 2, 2023 ರಂದು ಸಮಿತಿ ರಚನೆಯಾದಾಗಿನಿಂದ 191 ದಿನಗಳವರೆಗೆ ಮಧ್ಯಸ್ಥಗಾರರು, ತಜ್ಞರು ಮತ್ತು […]

ತ್ರಾಸಿ: ಮಾ.18 ರಂದು ಬಿಎಂಟಿಸಿ ವಿದ್ಯುತ್ ಚಾಲಿತ ಬಸ್ ಗಳ ಚಾಲಕರ ನೇಮಕಾತಿ ಉದ್ಯೋಗ ಮೇಳ

ತ್ರಾಸಿ: ಸಮೃದ್ದ ಬೈಂದೂರು ಹಾಗೂ ಪ್ರೊವಿಸ್ ಮ್ಯಾನ್ ಸಿಸ್ಟಮ್, ಬೆಂಗಳೂರು ಸಹಯೋಗದಲ್ಲಿ ಬಿಎಂಟಿಸಿ ವಿದ್ಯುತ್ ಚಾಲಿತ ಬಸ್ ಗಳ ಚಾಲಕರ ನೇಮಕಾತಿ ಉದ್ಯೋಗ ಮೇಳವು ಮಾ.18 ರಂದು ಬೆಳಿಗ್ಗೆ 9 ತ್ರಾಸಿ ಅಂಬೇಡ್ಕರ್ ಭವನ ಗ್ರಾಮ ಪಂಚಾಯತ್ ನಲ್ಲಿ ಆಯೋಜಿಸಲಾಗಿದೆ. ನೇಮಕಾತಿ ಸೌಲಭ್ಯಗಳು 20,000 ಮಾಸಿಕ ಭತ್ಯೆ, ಇ.ಎಸ್.ಐ,ಪಿ.ಎಫ್ ಸೌಲಭ್ಯ, ವಾರ್ಷಿಕ ಬೋನಸ್, ಉಚಿತ ವಸತಿ ಅಗತ್ಯ ದಾಖಲಾತಿಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್, ಹೆವಿ ಡಿಎಲ್, ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್, ಪಾಸ್ ಬುಕ್, ಪಾಸ್ ಪೋರ್ಟ್ […]