ಮಲ್ಪೆ: ಯುವಕ ನಾಪತ್ತೆ

ಉಡುಪಿ: ಮಲ್ಪೆಯ ಬೋಟ್‌ವೊಂದರಲ್ಲಿ ಕೆಲಸಮಾಡಿಕೊಂಡಿದ್ದ ಒರಿಸ್ಸಾ ಮೂಲದ ಅಲೋಕ್ ತಂತಿ (24) ಎಂಬಾತನು ಯುಬಿಎಂಸಿ ಚರ್ಚ್ ಎದುರು ಇರುವ ರಾಜ್ ಎಲೆಕ್ಟ್ರಿಕಲ್ಸ್ ರವರ ಬಾಡಿಗೆ ರೂಮಿನಲ್ಲಿ ವಾಸವಿದ್ದು, ಮಾರ್ಚ್ 3 ರಂದು ರೂಮಿನಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಹಿಂದಿ ಹಾಗೂ ಒರಿಸ್ಸಾ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2537999, ಪಿ.ಎಸ್.ಐ ನಂ: 9480805447, ಉಡುಪಿ […]

ಕಳೆದುಹೋದ ಮೊಬೈಲ್ ವಾಪಸಾತಿ: ದೇಶದಲ್ಲೇ ಕರ್ನಾಟಕಕ್ಕೆ ಅಗ್ರಸ್ಥಾನ

ಬೆಂಗಳೂರು: ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಕಂಡುಹಿಡಿಯುವಲ್ಲಿ ಮತ್ತು ಮರುಪಡೆಯುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. CEIR ಪೋರ್ಟಲ್‌ನಲ್ಲಿ ಮೊಬೈಲ್ ಸಾಧನಗಳ ನವೀಕರಣದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. CEIR (ಸೆಂಟ್ರಲ್ ಈಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟ್ರಿ) ಪೋರ್ಟಲ್‌ನಲ್ಲಿ 2,06,905 ಲಕ್ಷ ಮೊಬೈಲ್ ಫೋನ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 89,794 ಸೆಲ್ ಫೋನ್‌ಗಳ ಉಲ್ಲೇಖಗಳು ಕಂಡುಬಂದಿವೆ. ಪೊಲೀಸರು 29,550 ಮೊಬೈಲ್ ಗಳನ್ನು ಪತ್ತೆ ಮಾಡಿದ್ದಾರೆ. ಇದರಿಂದ ಕದ್ದ ಮೊಬೈಲ್ ಫೋನ್ ಗಳನ್ನು ವಾಪಸ್ ಪಡೆಯುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎನ್ನಲಾಗಿದೆ.

ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜಧಾನಿಯು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವಾಗಲೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ ಎಂಬ ವಿರೋಧ ಪಕ್ಷದ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. ಪ್ರತಿಪಕ್ಷಗಳ ಆರೋಪ ಸುಳ್ಳು ಎಂದ ಸಿದ್ದರಾಮಯ್ಯ, ತಮಿಳುನಾಡಿಗೆ ಒಂದು ಹನಿ ನೀರು ಬಿಟ್ಟಿಲ್ಲ ಎಂದಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ಹೇಳಿಕೆಗಳೆಲ್ಲವೂ ಸುಳ್ಳು. ಈ ಪರಿಸ್ಥಿತಿಯಲ್ಲಿ ನೀರನ್ನು ಯಾರು ಬಿಡುತ್ತಾರೆ? ತಮಿಳುನಾಡಿಗೆ ಒಂದು ಹನಿ ನೀರು ಕೊಡಲು ಸಾಧ್ಯವಿಲ್ಲ. ತಮಿಳುನಾಡು ನೀರು ಬಿಡುವಂತೆ ಕೇಳಿಲ್ಲ, ಕರ್ನಾಟಕಕ್ಕೆ ಯಾರೂ ಸೂಚನೆ ನೀಡಿಲ್ಲ […]

ಚೀನಾದ ರೆಸ್ಟೋರೆಂಟ್‌ನಲ್ಲಿ ಸ್ಫೋಟ: ಓರ್ವ ಮೃತ್ಯು, 20ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಚೀನಾದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿ, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಚೀನಾದ ನಗರವೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಹೆಬೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಾಜಧಾನಿ ಬೀಜಿಂಗ್‌ನಿಂದ ಪೂರ್ವಕ್ಕೆ 50 ಕಿಮೀಗಿಂತ ಕಡಿಮೆ ದೂರದಲ್ಲಿರುವ ಸಾನ್ಹೆ ನಗರದ ವಸತಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಚಿಕನ್ ಅಂಗಡಿಯಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದೆ. 36 ಆಂಬ್ಯುಲೆನ್ಸ್‌ಗಳು ಮತ್ತು 154 ತುರ್ತು ಸೇವೆಗಳು ಘಟನಾ […]

ಏ. 11 ರಿಂದ 15 ರವರೆಗೆ ಸುನಾಗ್ ನವ್ಯಹಿತ ಬೇಸಿಗೆ ಶಿಬಿರ-2024

ಮಣಿಪಾಲ: ಸುನಾಗ್ ಆಸ್ಪತ್ರೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಜಂತಿ ಸಹಯೋಗದಲ್ಲಿ ಸುನಾಗ್ ನವ್ಯಹಿತ ಬೇಸಿಗೆ ಶಿಬಿರ-2024 ಅನ್ನು ಏಪ್ರಿಲ್ 11 ರಂದು ಬೆಳಿಗ್ಗೆ 8.30 ರಿಂದ 9 ರವರೆಗೆ ಸುನಾಗ್ ಆಸ್ಪತ್ರೆಯ ಹತ್ತಿರ ಇರುವ ಐಡನ್ ಇನ್ ಹೋಮ್ ಸ್ಟೇ ಇಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಲಿದ್ದು, ಅಂತಾರಾಷ್ಟ್ರೀಯ ಜಾದೂಗಾರ ಪ್ರೊ.ಶಂಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಾದೂಗಾರ ಜೂನಿಯರ್ […]