ರಾಜ್ಯ ಮಟ್ಟದ ಪುನರ್ ಮನನ ತರಬೇತಿಯಲ್ಲಿ ಗೃಹರಕ್ಷಕ ಹರ್ಷಿತ್ ಶೆಟ್ಟಿ ಪ್ರಥಮ
ಉಡುಪಿ: ಜಿಲ್ಲೆಯ ಮಣಿಪಾಲ ಘಟಕದ ಗೃಹರಕ್ಷಕ ಹರ್ಷಿತ್ ಶೆಟ್ಟಿ ಮೆಟಲ್ ಸಂಖ್ಯೆ 93 ಇವರು ಫೆಬ್ರವರಿ 12 ರಿಂದ 22 ರವರೆಗೆ ದಾವಣಗೆರೆ ಜಿಲ್ಲೆಯ ದೇವರಬೆಳೆಕೆರೆಯ ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಪಡೆದಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ಪ್ರಭಾರ ಸಮಾದೇಷ್ಟ ಎಸ್.ಟಿ.ಸಿದ್ದಲಿಂಗಪ್ಪ ಶುಭ ಹಾರೈಸಿದ್ದಾರೆ.
ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಮಹಿಳಾ ದಿನಾಚರಣೆ ಹಾಗೂ ಮೌಲ್ಯಧಾರಿತ ಶಿಕ್ಷಣ ಕುರಿತು ಉಪನ್ಯಾಸ
ಮಣಿಪಾಲ: ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಹಾಗೂ ರೋಟರಿ ಐಸಿರಿ, ಪರ್ಕಳ ಇವರ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯನ್ನು ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ನ ಆವರಣದಲ್ಲಿಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಐಸಿರಿ ಪರ್ಕಳ ಅಧ್ಯಕ್ಷೆ ರೋ.ಸ್ಮಿತಾ ಜಿ. ಕಾಮತ್, ಮೌಲ್ಯಧಾರಿತ ಶಿಕ್ಷಣದ ಪ್ರಾಮುಖ್ಯತೆಯನ್ನು ಹಾಗೂ ಎಳೆಯ ಮಕ್ಕಳಲ್ಲಿ ಹೇಗೆ ಅದನ್ನು ಅಳವಡಿಸಬೇಕೆಂದು ತಿಳಿಯಪಡಿಸಿದರು. ಜಪಾನ್‌ನಿನ ಹಿರೋಷಿಮಾ-ನಾಗಸಕಿ ಮೇಲೆ ನಡೆದ ಬಾಂಬ್ ದಾಳಿಯು ಅತ್ಯಂತ ಘೋರ ಘಟನೆ ಮತ್ತು ಈ ಸಂದರ್ಭದಲ್ಲಿ ಆ ಘಟನೆಯ ದ್ವೇಷವನ್ನು ಹೋಗಲಾಡಿಸುವ […]
ಪೌರತ್ವ (ತಿದ್ದುಪಡಿ) ಕಾಯ್ದೆ 2019: ಮಾರ್ಗಸೂಚಿ ಪ್ರಕಟ; ಕಾನೂನಿನಲ್ಲಿ ಏನೇನಿದೆ ತಿಳಿದುಕೊಳ್ಳಿ
ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ 2019- (CAA) ಈ ಮಸೂದೆಯು 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಧಾರ್ಮಿಕ ಉತ್ಪೀಡನೆಯ ಕಾರಣದಿಂದ ಪಲಾಯನಗೈದ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ದ ಹಾಗೂ ಕ್ರಿಶ್ಚಿಯನ್ ಮುಂತಾದ ಅಲ್ಪಸಂಖ್ಯಾತ ಸಮುದಾಯದ ಸಂತ್ರಸ್ತರಿಗೆ ಭಾರತೀಯ ಪೌರತ್ವವನ್ನು ನೀಡುವ ಮಸೂದೆ ಇದಾಗಿದೆ. ಹೊಸ ನಿಯಮಗಳನ್ನು ಜಾರಿಗೆ ತರುವ ಮೊದಲು, ಭಾರತದಲ್ಲಿ ಪೌರತ್ವವನ್ನು ಈ ಹಿಂದಿನ ಪೌರತ್ವ ಕಾಯಿದೆ, 1955 ರ ಮೂಲಕ ನಿಯಂತ್ರಿಸಲಾಗುತ್ತಿತ್ತು. ಈ […]
ಮಾರ್ಚ್ 12ರಿಂದ 19ರ ವರೆಗೆ ಶ್ರೀಕ್ಷೇತ್ರ ಪೆರ್ಡೂರು ಶ್ರೀ ಅನಂತಪದ್ಮನಾಭ ವಾರ್ಷಿಕ ಜಾತ್ರಾ ಮಹೋತ್ಸವ
ಪೆರ್ಡೂರು: ಶ್ರೀಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾರ್ಚ್ 12ರಿಂದ 19ರ ವರೆಗೆ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಶ್ರೀಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕೆ.ಜಿ. ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಇಂದಿನಿಂದ ಆರಂಭಗೊಂಡು ಮುಂದಿನ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಲಿವೆ. ಮಾ. 13: ಬೆಳಿಗ್ಗೆ ಧ್ವಜಾರೋಹಣ, ಅಗ್ನಿಜನನ, ಪ್ರಧಾನಹೋಮ, ಕಲಶಾಭಿಷೇಕ ಹಾಗೂ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ದೀವಟಿಗೆ ಸೇವೆ, ಉತ್ಸವ ಬಲಿ, ಪನ್ನಗೋತ್ಸವ, ಶೇಷವಾಹನ, ಓಲಗಮಂಟಪದಲ್ಲಿ ಪೂಜೆ, […]
ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಇಂದು ಕಾಂಗ್ರೆಸ್ ಸೇರ್ಪಡೆ
ಉಡುಪಿ: ಮಾಜಿ ಸಂಸದ ಹಾಗೂ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ (Congress) ಸೇರ್ಪಡೆಗೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಮಾರ್ಚ್ 12 ಮಂಗಳವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕೆ ಪಿ ಸಿ ಸಿ ಕಚೇರಿಯಲ್ಲಿ ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿ ಅವರು ತಿಳಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Loksabha Elections) ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.