ಬ್ರಾಹ್ಮಣ ಮಹಾ ಸಭಾ ಕೊಡವೂರು: ವಿಪ್ರ ಮಹಿಳಾ ದಿನಾಚರಣೆ

ಕೊಡವೂರು: ಅಂತರಾಷ್ಟ್ರೀಯ ‌ಮಹಿಳಾ ದಿನದ ಅಂಗವಾಗಿ ಕೊಡವೂರು ಬ್ರಾಹ್ಮಣ ಮಹಾ ಸಭಾದಿಂದ ಅಪರೂಪದ ಚುಕ್ಕಿ ಮಂಡಲ ಆರ್ಟ್ ಕಲಾವಿಭಾಗದಲ್ಲಿ ರಾಷ್ಟ್ರೀಯ ‌ಮಟ್ಟದಲ್ಲಿ ಸಾಧನೆಗೈದ ಕಲಾವಿದೆ, ರಂಗವಲ್ಲಿ, ಸಂಗೀತ, ವಾರ್ಲಿ ಕಲೆ, ಫ್ಯಾಬ್ರಿಕ್ ಪೇಂಟಿಂಗ್, ಕಸೂತಿ ಹೀಗೆ ಲಲಿತ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಶ್ರೀಮತಿ ಅಶ್ವಿನಿ ಶ್ರೀನಿವಾಸ್ ಇವರನ್ನು ಅವರ ಸ್ವಗೃಹ ಶ್ರೀವಾಸದಲ್ಲಿ ಅಭಿನಂದಿಸಲಾಯಿತು‌. ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಕೋಶಾಧಿಕಾರಿ ಶ್ರೀಧರ ಶರ್ಮ, ಸದಸ್ಯರಾದ ರೋಹಿಣಿ ಬಾಯರಿ, ಸೌಮ್ಯಾ ಗಣೇಶ್, […]

ಬಂಗಾಡಿ ಕೊಲ್ಲಿ “ಸೂರ್ಯ- ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಬಂಗಾಡಿ: ಮಾ.9 ರಂದು ನಡೆದ ಬಂಗಾಡಿ ಕೊಲ್ಲಿ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 05 ಜೊತೆ ಅಡ್ಡಹಲಗೆ: 02 ಜೊತೆ ಹಗ್ಗ ಹಿರಿಯ: 11 ಜೊತೆ ನೇಗಿಲು ಹಿರಿಯ: 26 ಜೊತೆ ಹಗ್ಗ ಕಿರಿಯ: 20 ಜೊತೆ ನೇಗಿಲು ಕಿರಿಯ: 56 ಜೊತೆ ಒಟ್ಟು ಕೋಣಗಳ ಸಂಖ್ಯೆ: 120 ಜೊತೆ ಕನೆಹಲಗೆ: ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ ) ಬೋಳಾರ […]

71 ನೇ ವಿಶ್ವಸುಂದರಿ ಸ್ಪರ್ಧೆ: ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ

ಮುಂಬೈ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ ಅವರು 28 ವರ್ಷಗಳ ಅಂತರದ ನಂತರ ಭಾರತಕ್ಕೆ ಮರಳಿದ ವಿಶ್ವ ಸುಂದರಿ (Miss World) 2024 ಸ್ಪರ್ಧೆಯ 71 ನೇ ಆವೃತ್ತಿಯನ್ನು ಗೆದ್ದಿದ್ದಾರೆ. ಮುಂಬೈನಲ್ಲಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರಾಂಡ್ ಫಿನಾಲೆ ನಡೆಯಿತು. ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತೆ ಸಿನಿ ಶೆಟ್ಟಿ ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಪ್ರಪಂಚದಾದ್ಯಂತದ 112 ಸ್ಪರ್ಧಿಗಳನ್ನು ಒಳಗೊಂಡಿದ್ದ ಸ್ಪರ್ಧೆಯಲ್ಲಿ ಟಾಪ್ ಎಂಟರಲ್ಲಿ ಸಿನಿಶೆಟ್ಟಿ ಇದ್ದರೂ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಳ್ಳಲಾಗಲಿಲ್ಲ. […]

ಬಾಂಬೆ ಮಿಠಾಯಿ ಬಳಿಕ ಕೃತಕ ರಾಸಾಯನಿಕ ಬಳಸಿದ ಗೋಬಿ ಮಂಚೂರಿ ಮಾರಾಟಕ್ಕೂ ನಿಷೇಧ? ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು: ನೆರೆಯ ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿಷೇಧಿಸಲಾಗಿರುವ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನು ರಾಜ್ಯದಲ್ಲೂ ನಿಷೇಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದ್ದು ವರದಿ ಆರೋಗ್ಯ ಇಲಾಖೆ ಕೈ ಸೇರಿದೆ. ಕಾಟನ್‌ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್‌-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್‌ಸೆಟ್‌ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರಾಜಿನ್‌’ ರಾಸಾಯನಿಕ ಅಂಶ […]