ಉಡುಪಿ: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ

ಉಡುಪಿ: ಇಲ್ಲಿನ ಬ್ರಹ್ಮಗಿರಿ ಬಳಿ ಕಾರು ಡಿಕ್ಕಿ ಹೊಡೆದು ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ನಡೆದಿದೆ. ಉಡುಪಿ: ಆರೂರಿನ ರಾಕೇಶ್‌ ಸ್ಕೂಟರ್‌ನಲ್ಲಿ ಜೋಡುಕಟ್ಟೆಯಿಂದ ಬ್ರಹ್ಮಗಿರಿ ಕಡೆಗೆ ತೆರಳುತ್ತಿದ್ದಾಗ ಕಾರನ್ನು ಚಲಾಯಿಸುತ್ತಿದ್ದ ರಮಿತಾ ಎನ್ನುವಾಕೆ ತನ್ನ ಕಾರನ್ನು ಬ್ರಹ್ಮಗಿರಿ ಕಡೆಯಿಂದ ಚಲಾಯಿಸಿಕೊಂಡು ಬಂದು ಹುತಾತ್ಮರ ಸ್ಮಾರಕದ ಬಳಿ ಹಠಾತ್‌ ಯು ಟರ್ನ್ ಮಾಡಿದ ಪರಿಣಾಮ ಸ್ಕೂಟರ್‌ ಸವಾರನಿಗೆ ಡಿಕ್ಕಿ ಹೊಡೆದು ಸ್ಕೂಟರ್ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಜಂಬೂ ಸವಾರಿ, ಜೀಪ್ ಸಫಾರಿ

ಗುವಾಹಾಟಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಮಾರ್ಚ್ 9 ರಂದು ಪ್ರಧಾನಿ ನರೇಂದ್ರ ಮೋದಿ ಆನೆ ಸವಾರಿ ಮಾಡಿದರು. ಪಾರ್ಕ್‌ನ ಸೆಂಟ್ರಲ್ ಕೊಹೊರಾ ರೇಂಜ್‌ನ ಮಿಹಿಮುಖ್ ವಿಭಾಗದಲ್ಲಿ, ಮೊದಲು ಆನೆ ಸಫಾರಿ, ನಂತರ ಅದೇ ವ್ಯಾಪ್ತಿಯಲ್ಲಿ ಅವರು ಜೀಪ್ ಸಫಾರಿ ನಡೆಸಿದರು. ಅವರ ಭೇಟಿಯ ಸಂದರ್ಭದಲ್ಲಿ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಅರಣ್ಯ ರಕ್ಷಕರ ತಂಡ ‘ವನ ದುರ್ಗ’ ದೊಂದಿಗೆ ಸಂವಾದ ನಡೆಸಿದರು. ಲಖಿಮಾಯಿ, ಪ್ರದ್ಯುಮ್ನ ಮತ್ತು […]

ಬೆಳ್ತಂಗಡಿ: ಐದು ದಶಕಗಳಿಂದ ಸೇವೆ ಸಲ್ಲಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ ಲತಾ ಶಿವೈಕ್ಯ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ ಲತಾ ಶಿವರಾತ್ರಿಯಂದು ಶಿವ ಪಾದ ಸೇರಿದೆ. 60ವರ್ಷ ಪ್ರಾಯದ ಲತಾ ಕಳೆದ 50 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು. ಶುಕ್ರವಾರ ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ. ಧರ್ಮಸ್ಥಳದಲ್ಲಿ ಪ್ರಸ್ತುತ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎಂಬ ಹೆಸರಿನ ಆನೆಗಳಿದ್ದು, ಲತಾ ಸಾವಿನಿಂದ ಲಕ್ಷ್ಮೀ ಹಾಗೂ ಶಿವಾನಿ ಆನೆಗಳು ಮಂಕಾಗಿವೆ.

ಕಾಪು: ಮಾ.12-15 ವರೆಗೆ ಉಡುಪಿ ಧ್ಯಾನ ಯೋಗ ಮಹೋತ್ಸವ

ಕಾಪು: ಇಲ್ಲಿನ ಭವಾನಿ ಕಟ್ಟಡದಲ್ಲಿ ಮಾ.12-15 ರ ವರೆಗೆ ಉಡುಪಿ ಧ್ಯಾನ ಯೋಗ ಮಹೋತ್ಸವ ನಡೆಯಲಿದ್ದು, ಶಾಂಭವಿ ಸಾಧನ, ಓಂಕಾರ ಧ್ಯಾನ, ಪ್ರಕೃತಿ ಧ್ಯಾನ, ಜೀವಾತ್ಮ ಧ್ಯಾನ ಈಶ್ವರ ಧ್ಯಾನ, ಆತ್ಮ ನಿರೀಕ್ಷಣ ಧ್ಯಾನ, ಯೋಗ, ಯಮ ನಿಯಮ ಸಾಧನ ಪ್ರತ್ಯಾಹಾರ ಸಾಧನ ಮುಂತಾದವುಗಳನ್ನು ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಕೃಷ್ಣ ಹೆಬ್ಸೂರ್ 9449534792, ಲತಾ ಹೆಬ್ಸೂರ್ 9449034792 ಅನ್ನು ಸಂಪರ್ಕಿಸಬಹುದು.

ವೈದಿಕ ಸರಸ್ವತಿ ನದಿ ಪಥವನ್ನು ಪತ್ತೆ ಹಚ್ಚುವ ಕುರಿತು ಉಪನ್ಯಾಸ ಕಾರ್ಯಕ್ರಮ

ಮಣಿಪಾಲ: ಗಾಂಧಿಯನ್ ಸೆಂಟರ್ ಫಾರ್ ಫಿಲಾಸೊಫಿಕಲ್ ಆರ್ಟ್ ಎಂಡ್ ಸೈನ್ಸ್ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್ ವತಿಯಿಂದ “ಸರಸ್ವತಿ ನದಿಯ ಪಥವನ್ನು ಪತ್ತೆ ಹಚ್ಚುವುದು, ನೀರು ಮತ್ತು ಪರಿಸರ” ಕುರಿತು ಹಿರಿಯ ಸಾಮಾಜಿಕ ಕಾರ್ಯಕರ್ತ ಜಗದೀಶ್ ಗಾಂಧಿ ಅವರಿಂದ ಉಪನ್ಯಾಸ ಕಾರ್ಯಕ್ರಮವು ಮಾ.9 ರಂದು ಮಧ್ಯಾಹ್ನ 2.45 ಗಂಟೆಗೆ ಮಾಹೆಯ ಪ್ಲಾನೆಟೋರಿಯಂ ಆಡಿಟೋರಿಯಂನಲ್ಲಿ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ನಾಮನಿರ್ದೇಶಿತ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೊ.ದೇವಾನಂದ್ ಸಿಎ ಹಾಗೂ ಮಾಹೆ ಆನ್ ಲೈನ್ ಎಡ್ಜುಕೇಶನ್ ಡೈರೆಕ್ಟರ್ ಡಾ. […]