ಜೆಇಇ ಮೈನ್ಸ್ B.Arch ಪರೀಕ್ಷೆಯಲ್ಲಿ 99.744 ಪರ್ಸಂಟೈಲ್ ಫಲಿತಾಂಶದೊಂದಿಗೆ ಅಪ್ರತಿಮ ಸಾಧನೆ ಮೆರೆದ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ಅಲಕಾ ಹೆಬ್ಬಾರ್.

ಹೆಮ್ಮಾಡಿ: ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ B.Arch ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ 99.744 ಫಲಿತಾಂಶದೊಂದಿಗೆ ಅಗ್ರಗಣ್ಯ ಸಾಧನೆ ಮೆರೆದಿದ್ದಾಳೆ. ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದ ವಿದ್ಯಾರ್ಥಿನಿ ಇವಳಾಗಿದ್ದು, ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟ: ‘ನಿರ್ವಾಣ’ ಅತ್ಯುತ್ತಮ ಚಿತ್ರ, ಸ್ವಾತಿ ಮುತ್ತಿನ ಮಳೆ ಹನಿಗೆ ನೆಟ್‌ಪ್ಯಾಕ್ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಕನ್ನಡ ಚಲನಚಿತ್ರ ಸ್ಪರ್ಧೆಯಲ್ಲಿ ಮಂಜು ಅವಿನಾಶ್ ಶೆಟ್ಟಿ ನಿರ್ದೇಶನದ ನಿರ್ವಾಣ ಮೊದಲ ಅತ್ಯುತ್ತಮ ಚಿತ್ರ ಅನ್ನೋ ಪ್ರಶಸ್ತಿ ಗೆದ್ದುಕೊಂಡಿದೆ. ಇನ್ನು ನಟಿ ರಮ್ಯಾ ನಿರ್ಮಾಣ ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನೆಟ್‌ಪ್ಯಾಕ್ ತೀರ್ಪುಗಾರರ ಪ್ರಶಸ್ತಿ ಗೆದ್ದುಕೊಂಡಿದೆ. ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಚಿತ್ರ ನಿರ್ದೇಶಕ, ಕಲಾ ನಿರ್ದೇಶಕ ಎಂಎಸ್ ಸತ್ಯೂ ಭಾಜನರಾಗಿದ್ದಾರೆ. ಜೀವನ ಸಾಧನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ :ಎಂ ಎಸ್ […]
ಬೈಲೂರು: ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ ಯರ್ಲಪಾಡಿ: ಇಂದು ಮಹಾಶಿವರಾತ್ರಿ ಪ್ರಯುಕ್ತ ಭಜನಾ ಮಂಗಲೋತ್ಸವ.

ಬೈಲೂರು: ಮಹಾಶಿವರಾತ್ರಿ ಪ್ರಯುಕ್ತ ಕಾರ್ಕಳ ಬೈಲೂರು ಯರ್ಲಪಾಡಿ ಕೆಳಗಿನಮನೆ ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ, ಇಲ್ಲಿ 16ನೇ ವರ್ಷದ ಭಜನಾ ಮಂಗಲೋತ್ಸವವು ಮಾ.8 ಶುಕ್ರವಾರ ಸಂಜೆ ಗಂಟೆ 6 ರಿಂದ ಮಾ.9 ಶನಿವಾರ ಬೆಳಗ್ಗೆ ಗಂಟೆ 6ರ ವರೆಗೆ ನಡೆಯಲಿದೆ.
1 ಮಿಲಿಯನ್ ಸುರಕ್ಷಿತ ಮಾನವ ಗಂಟೆ ಕಾರ್ಯಾಚರಣೆ: ರೋಹನ್ ಸಿಟಿ ಕಾರ್ಪೋರೇಶನ್ ಮಹತ್ವದ ಮೈಲಿಗಲ್ಲು

ಮಂಗಳೂರು: ಸುರಕ್ಷತೆಗೆ ಸಾಕ್ಷಿಯಾಗಿ, ರೋಹನ್ ಕಾರ್ಪೊರೇಶನ್ ಮಾ. 06 ರಂದು ರೋಹನ್ ಸಿಟಿ ಬಿಜೈನಲ್ಲಿ 1 ಮಿಲಿಯನ್ ಸುರಕ್ಷಿತ ಮಾನವ ಗಂಟೆಗಳನ್ನು ತಲುಪಿದ ಗಮನಾರ್ಹ ಸಾಧನೆಯನ್ನು ಆಚರಿಸಿತು. 5ನೇ ರಾಷ್ಟ್ರೀಯ ಸುರಕ್ಷತಾ ದಿನದ ವಾರದ ಅಭಿಯಾನದಲ್ಲಿ ಸಾಧಿಸಿದ ಮೈಲಿಗಲ್ಲು, ಸುರಕ್ಷತೆ ಮತ್ತು ಯೋಗಕ್ಷೇಮದ ಸಂಸ್ಕೃತಿಯನ್ನು ಬೆಳೆಸುವಲ್ಲಿ ರೋಹನ್ ಕಾರ್ಪೊರೇಶನ್ ಬದ್ಧವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಾರ್ಮಿಕರು, ಉದ್ಯೋಗಿಗಳು ಮತ್ತು ಆಡಳಿತ ಮಂಡಳಿಯು ಸೇರಿ ಆಚರಿಸಿತು. ಈ ಸಾಧನೆಯು ತಮ್ಮ ದೈನಂದಿನ ಜೀವನದಲ್ಲಿ ಸುರಕ್ಷತೆಗೆ ಆದ್ಯತೆ ನೀಡಿದ ಪ್ರತಿಯೊಬ್ಬ […]
ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದಲ್ಲಿ ಸಂಪರ್ಕ ಕಡಿತ: ನಗರಸಭೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಸ್ವರ್ಣಾ ನದಿಯ ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹಣೆ ಅತೀ ಕಡಿಮೆಯಾಗುತ್ತಿದ್ದು, ಪ್ರಸ್ತುತ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ಉಡುಪಿ ನಗರಸಭೆಯ ಕುಡಿಯುವ ನೀರಿನ ಸಂಪರ್ಕ ಪಡೆದಿರುವ ಸಾರ್ವಜನಿಕರು ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಅಂದರೆ ವಾಹನವನ್ನು ತೊಳೆಯಲು, ಗಿಡಗಳಿಗೆ ನೀರನ್ನು ಬಿಡುವುದು ಕಂಡು ಬಂದಲ್ಲಿ, ಸದರಿಯವರ ನೀರಿನ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೇ ಕಡಿತಗೊಳಿಸಿ ದಂಡ ವಿಧಿಸಲಾಗುವುದು. ಮಿತವಾದ ಬಳಕೆಗೆ ಆದ್ಯತೆ ನೀಡಿ. […]