ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 8ರ ಶುಕ್ರವಾರ ಮಹಾಶಿವರಾತ್ರಿ ಮಹೋತ್ಸವವನ್ನು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಗುವುದು. ಬೆಳಗ್ಗೆ 6.30 ರಿಂದ ರಾತ್ರಿ 10 ರ ವರೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಮತ್ತು ಬಿಲ್ವಾರ್ಚನೆ ಸಹಿತ ಸರ್ವಸೇವೆಗಳು ನಡೆಯಲಿವೆ. ಬೆಳಿಗ್ಗೆ 5 ರಿಂದ 7ರವರೆಗೆ ಯೋಗ – ಶಿವ ನಮಸ್ಕಾರ, 7 ರಿಂದ 8 ರವರೆಗೆ ಏಕಾದಶ ರುದ್ರಾಭಿಷೇಕ, ಸಂಜೆ 5 ರಿಂದ 9 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ […]

ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆ ತುಳು; ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಆಗ್ರಹಿಸಿ ಹೋರಾಟಕ್ಕೆ ತುಳು ಸಂಘನೆಗಳ ನಿರ್ಧಾರ

ಮಂಗಳೂರು: ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು, ತುಳುವನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿ ಹೋರಾಟ ರೂಪಿಸಲು ವಿವಿಧ ತುಳು ಸಂಘಟನೆಗಳು ನಿರ್ಧರಿಸಿವೆ. ತುಳುವಿನ ವಿವಿಧ ಸಂಘಟನೆಗಳ ಪ್ರಮುಖರು ಹೋರಾಟದ ರೂಪರೇಷೆಗಳ ಕುರಿತು ಮಂಗಳೂರಿನ ತುಳುಭವನದಲ್ಲಿ ಬುಧವಾರ ಸಮಾಲೋಚನೆ ನಡೆಸಲಾಯಿತು. ಸಮಾಲೋಚನೆ ಸಭೆಯನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಹಾಗೂ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು. ಸಭೆಯನ್ನು ಆಯೋಜಿಸಿದ್ದ ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ, ್ತುಳುವಿಗೆ ರಾಜ್ಯದಲ್ಲಿ ಅಧಿಕೃತ […]

ರಾಮೇಶ್ವರಂ ಕೆಫೆ ಸ್ಪೋಟದ ಶಂಕಿತ ಉಗ್ರನ ಊಹಾತ್ಮಕ ರೇಖಾಚಿತ್ರ ಬಿಡುಗಡೆ: ಮಾಹಿತಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟದ( Rameshwaram Cafe Blast) ಶಂಕಿತ ಉಗ್ರನ ಹುಡುಕಾಟಕ್ಕೆ ಬಲೆ ಬೀಸಲಾಗಿದೆ. ಆತನ ಮುಖ ಚಹರೆ ಸ್ಪಷ್ಟವಾಗಿ ಗೋಚರಿಸದ ಕಾರಣ ಪತ್ತೆ ಕಷ್ಟವಾಗಿದೆ. ಶಂಕಿತ ಉಗ್ರ ಎಲ್ಲಿಯೂ ತನ್ನ ಮುಖ ಕಾಣದಂತೆ ಟೋಪಿ ಹಾಗೂ ಮಾಸ್ಕ್ ಬಳಸಿದ್ದಾನೆ. ಸ್ಪೋಟದ ಮುಂಚೆ ಹಾಗೂ ಸ್ಪೋಟದ ನಂತರ ಎಲ್ಲೆಲ್ಲಿ ಓಡಾಡಿದ್ದರೂ ಯಾವ ಸಿಸಿಟಿವಿಯಲ್ಲಿಯೂ ಆತನ ಮುಖ ಸ್ಪಷ್ಟವಾಗಿ ಕಂಡು ಬಂದಿಲ್ಲ. ಶಂಕಿತನ ಅರ್ಧ ಮುಖ ಕಾಣುವ ಸಿಸಿಟಿವಿಯ ಫೋಟೊವನ್ನು NIA ಬಿಡುಗಡೆ ಮಾಡಿದ್ದು, ಹುಡುಕಿಕೊಟ್ಟವರಿಗೆ 10 […]

ಮೊಡವೆಗಾಗಿ ಮುಖಕ್ಕೆ ಹಚ್ಚುವ ಉತ್ಪನ್ನಗಳಲ್ಲಿದೆ ಕ್ಯಾನ್ಸರ್ ಕಾರಕ ಅಂಶಗಳು!! ಅಮೇರಿಕಾದ ಸ್ವತಂತ್ರ ಪರೀಕ್ಷಾ ಪ್ರಯೋಗಾಲಯದ ವರದಿಯಲ್ಲಿ ಬಹಿರಂಗ

ಪ್ರೊಆಕ್ಟಿವ್, ಟಾರ್ಗೆಟ್ ಕಾರ್ಪೊರೇಷನ್‌ನ ಅಪ್ & ಅಪ್ ಮತ್ತು ಕ್ಲಿನಿಕ್ ಸೇರಿದಂತೆ ಹಲವು ಬ್ರಾಂಡ್‌ಗಳ ಮೊಡವೆ ಉತ್ಪನ್ನಗಳು ಕ್ಯಾನ್ಸರ್ ಕಾರಕ ಅಂಶಗಳ ಮಟ್ಟವನ್ನು ಹೆಚ್ಚಿಸಿವೆ ಎಂದು ಸ್ವತಂತ್ರ ಪರೀಕ್ಷಾ ಪ್ರಯೋಗಾಲಯವು US ಆಹಾರ ಮತ್ತು ಔಷಧ ಮಂಡಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಮಂಗಳವಾರ ತಡರಾತ್ರಿ ತಿಳಿಸಿದೆ ಎಂದು ವರದಿಯಾಗಿದೆ. ನಿಯಂತ್ರಕರು ತನಿಖೆ ನಡೆಸಿ ಸಕ್ರಿಯ ಘಟಕಾಂಶವಾದ ಬೆಂಜಾಯ್ಲ್ ಪೆರಾಕ್ಸೈಡ್ ಅನ್ನು ಒಳಗೊಂಡಿರುವ ಎಲ್ಲಾ ಸಂಬಂಧಿತ ಚಿಕಿತ್ಸೆಗಳನ್ನು ಹಿಂಪಡೆಯಲು ಲ್ಯಾಬ್ FDA ಯನ್ನು ಕೇಳಿದೆ. ಹ್ಯಾಂಡ್ ಸ್ಯಾನಿಟೈಸರ್‌ಗಳು, ಸನ್‌ಸ್ಕ್ರೀನ್‌ಗಳು ಮತ್ತು […]

ಭಾಷಣ ಮಾಡುವಾಗ ಜಾಗರೂಕರಾಗಿರಿ: ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಸಲಹೆ

ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು (EC) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭವಿಷ್ಯದಲ್ಲಿ ಸಾರ್ವಜನಿಕವಾಗಿ ಪ್ರತಿಕ್ರಿಯೆಗಳನ್ನು ನೀಡುವಾಗ “ಹೆಚ್ಚು ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರುವಂತೆ” ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಸ್ಟಾರ್ ಪ್ರಚಾರಕರು ಮತ್ತು ಅಭ್ಯರ್ಥಿಗಳಿಗೆ ಆಯೋಗವು ಇತ್ತೀಚೆಗೆ ನೀಡಿದ ಸಲಹೆಯನ್ನು ಅನುಸರಿಸುವಂತೆ ತಿಳಿಸಿದೆ. 2023ರ ನವೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಾಗ ರಾಹುಲ್ ಗಾಂಧಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಟಿಪ್ಪಣಿಗೆ […]