ಸ್ವ-ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳು ಗುಣಮಟ್ಟದೊಂದಿಗೆ ಇದ್ದಾಗ ಮಾತ್ರ ಲಾಭ ಗಳಿಸಲು ಸಾದ್ಯ: ಜಿಲ್ಲಾಧಿಕಾರಿ
ಉಡುಪಿ, ಮಾರ್ಚ್ 07: ಸ್ವ-ಸಹಾಯ ಸಂಘಗಳು ತಾವು ಉತ್ಪಾದಿಸುವ ಉತ್ಪನ್ನಗಳು ಗುಣಮಟ್ಟದೊಂದಿಗೆ ಇದ್ದಾಗ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುವುದರೊAದಿಗೆ ಹೆಚ್ಚಿನ ಆರ್ಥಿಕ ಲಾಭ ಗಳಿಸಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಇಂದು ನಗರದ ಮಲ್ಪೆ ಬೀಚ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಉಡುಪಿ ಜಿಲ್ಲೆ ಇವರ ವತಿಯಿಂದ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ […]
ಕಾರ್ಕಳ: ತ್ಯಾಗ, ತಪಸ್ಸು, ಸೇವೆಯಿಂದ ದೈವತ್ವದಡೆಗೆ: ಬಿ.ಕೆ. ನಿರ್ಮಲಾಜೀ
ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಎಸ್.ವಿ.ಟಿ.ರಸ್ತೆಯ ಸೇವಾ ಕೇಂದ್ರದಲ್ಲಿ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಸಂತಿ ಇವರಿಗೆ ನುಡಿ-ನಮನ ಕಾರ್ಯಕ್ರಮ ಮಾರ್ಚ್ 6ರಂದು ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ವಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾಜೀ ಇವರು ವಹಿಸಿದ್ದು, ಬ್ರಹ್ಮಕುಮಾರಿ ವಸಂತಿಯವರ ತ್ಯಾಗ, ತಪಸ್ಸು, ಸೇವೆ ದೈವತ್ವಕ್ಕೆ ಸಮಾನ. ಈಶ್ವರೀಯ ಸೇವೆಯಲ್ಲಿ 40ವರ್ಷಗಳಿಂದ ಜೀವನವನ್ನು ಸಮರ್ಪಣೆ ಮಾಡಿ ಪ್ರತೀಯೋರ್ವರ ಮನಸ್ಸನ್ನು ಗೆದ್ದಿದ್ದು ಅವರ ನಿಧನವು ತುಂಬಲಾರದ ನಷ್ಟ ಎಂದು […]
ಭಾರತೀಯ ದಂತ ವೈದ್ಯರ ಸಂಘ: ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರ.
ಉಡುಪಿ: ಭಾರತೀಯ ದಂತ ವೈದ್ಯರ ಸಂಘ, ಉಡುಪಿ. ಇವರ ವತಿಯಿಂದ ರಾಜ್ಯಮಟ್ಟದ ಪದಾಧಿಕಾರಿಗಳ ಕಾರ್ಯಗಾರವನ್ನು ಭಾನುವಾರದಂದು ವ್ಯಾಲಿ ವ್ಯೂ ಕಂಟ್ರಿ ಕ್ಲಬ್ ಮಣಿಪಾಲದ ಆಯೋಜಿಸಲಾಗಿತ್ತು. ಭಾರತೀಯ ದಂತ ವೈದ್ಯ ಸಂಘದ ರಾಜ್ಯಾಧ್ಯಕ್ಷ ಡಾ. ಭರತ್ ಎಸ್.ವಿ. ಸಮಾರಂಭ ಉದ್ಘಾಟಿಸಿದರು. ಡಾ. ರಂಗನಾಥ್ ವಿ. ಹಾಗೂ ಡಾ.ಶ್ರೀನಿಧಿ ಡಿ. ಅವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಹೊಸ ಹೊಸ ತಂತ್ರಜಾನವನ್ನು ಅಳವಡಿಸಕೊಳ್ಳುವ ಬಗ್ಗೆ ವಿಸೃತ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ದಂತ ವೈದ್ಯ ಸಂಘ ಉಡುಪಿ ಇದರ ಅಧ್ಯಕ್ಷ […]
ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ದರಾದ ರಕ್ಷಿತ್ ಶೆಟ್ಟಿ; ಅರುಣ್ ಯೋಗಿರಾಜ್ ಅವರನ್ನು ಭೇಟಿಯಾಗುವ ಬಯಕೆ ತೋಡಿಕೊಂಡ ಸಿಂಪಲ್ ಹುಡುಗ
ಅಯೋಧ್ಯಾ: ಕನ್ನಡ ಚಿತ್ರನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅಯೋಧ್ಯಾ ರಾಮಜನ್ಮಸ್ಥಾನದಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರಕ್ಕೆ ಭೇಟಿ ನೀಡಿದ್ದು, ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ಧರಾಗಿದ್ದಾರೆ. ಪ್ರಾಣಪ್ರತಿಷ್ಠೆ ನಡೆದಾಗಿನಿಂದಲೂ ರಾಮನನ್ನು ನೇರವಾಗಿ ನೋಡಬೇಕುನ್ನುವ ಹಂಬಲವನ್ನು ನಿಜವಾಗಿಸಿಕೊಂಡಿರುವ ರಕ್ಷಿತ್, ಸುಮಾರು ಅರ್ಧ ಗಂಟೆಗಳ ಕಾಲ ರಾಮನ ಮೂರ್ತಿಯನ್ನು ಆತನ ಸೂಜಿಗಲ್ಲಿನಂತೆ ಆಕರ್ಷಿಸುವ ಕಣ್ಣುಗಳನ್ನು ತದೇಕಚಿತ್ತದಿಂದ ನೋಡಿ ಶಿಲ್ಪಕಾರನ ಕಲಾ ನೈಪುಣ್ಯಕ್ಕೆ ತಲೆದೂಗಿದ್ದಾರೆ. ರಾಮ ಕೇವಲ ದೇವರಾಗಿರದೆ, ಜೀವ ತುಂಬಿರುವ ಒಂದು ಕಲಾಪ್ರಕಾರದಂತೆ ಕಂಡಿದ್ದು, ಮೂರ್ತಿಯನ್ನು ಕೆತ್ತಿದ ಅರುಣ್ ಯೋಗಿರಾಜ್ ಒಂದು ದಂತ ಕತೆಯಾಗಿ […]
ಮಾರ್ಚ್ 10: ಪವರ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಚಾರ್ಟರ್ ಡೇ ಹಾಗೂ ಮಹಿಳಾ ದಿನಾಚರಣೆ
ಉಡುಪಿ: ಪವರ್ ಸಂಸ್ಥೆ (ಮಹಿಳಾ ಉದ್ಯಮಿಗಳ ಸಂಘಟನೆ)ಯ ವತಿಯಿಂದ ಚಾರ್ಟರ್ ಡೇ, ಪದಗ್ರಹಣ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾರ್ಚ್ 10ರಂದು ಸಂಜೆ 5.30ಕ್ಕೆ ಮಣಿಪಾಲ ವಿದ್ಯಾರತ್ನ ನಗರದ ಟೀ ಟ್ರೀ ಸ್ಯೂಟ್ಸ್ ನಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷೆ ಹರಿನಾ ಜೆ. ರಾವ್ ಮುಖ್ಯ ಅತಿಥಿಯಾಗಿ […]