ದೇವಾಡಿಗ ಸೇವಾ ಸಂಘ ಕಾಪು ವತಿಯಿಂದ ಕ್ರಿಕೆಟ್ ಟೂರ್ನಮೆಂಟ್

ಇನ್ನಂಜೆ: ದೇವಾಡಿಗ ಸೇವಾ ಸಂಘ ಕಾಪು(ರಿ), ದೇವಾಡಿಗ ಯುವ ವೇದಿಕೆ ವತಿಯಿಂದ ದೇವಾಡಿಗ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ, ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು, ಕ್ರೀಡೆಯ ಮೂಲಕ ಸಂಘಟನೆ ಸಾಧ್ಯ. ಇದರ ಉದ್ದೇಶ ಕೇವಲ ಕ್ರಿಕೆಟ್ ಅಲ್ಲ, ಬದಲಾಗಿ ಕ್ರಿಕೆಟ್ ಆಡುತ್ತಾ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಸಂಘಟಿತರಾಗಬೇಕು. ಕೇವಲ ಆಟವನ್ನು ಮಾತ್ರವಲ್ಲ ನಮ್ಮ ಸಮಾಜದಲ್ಲಿ ಇರುವಂತಹ ಸಮಸ್ಯೆಗಳನ್ನು […]

ಮಂಗಳೂರು: ಮೇ 26 ರಂದು ಯಕ್ಷಧ್ರುವ ಪಟ್ಲ ಸಂಭ್ರಮ 2024

ಮಂಗಳೂರು: ಮೇ 26 ರಂದು ಯಕ್ಷಧ್ರುವ ಪಟ್ಲ ಸಂಭ್ರಮ 2024 ಕಾರ್ಯಕ್ರಮವನ್ನು ಅಡ್ಯಾರ್ ಗಾರ್ಡನ್ ನಲ್ಲಿ ನಡೆಸಲಾಗುವುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಬಲ್ಲಾಲ್ ಬಾಗ್ ನ ಪತ್ತ್ ಮುಡಿ ಸೌಧದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ 2024 ಪೂರ್ವಾಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್, ಯಕ್ಷ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ಮೂಡಬಿದ್ರೆಯ ಆಳ್ವಾಸ್ ಆವರಣದಲ್ಲಿ ನಡೆದ ಯಕ್ಷ […]

ಲೋಕಸಭಾ ಚುನಾವಣೆ: ಅಬಕಾರಿ ಅಕ್ರಮ ತಡೆಗಾಗಿ ಕಂಟ್ರೋಲ್ ರೂಂ ಸ್ಥಾಪನೆ

ಉಡುಪಿ: ಲೋಕಸಭಾ ಚುನಾವಣೆಯು ಮುಂದಿನ ದಿನಗಳಲ್ಲಿ ನಡೆಯಲಿದ್ದು, ಮತದಾರರನ್ನು ಸೆಳೆಯಲು ನಕಲಿ, ಕಳಪೆ ಮಟ್ಟದ ಮದ್ಯೆ, ಕಳ್ಳಭಟ್ಟಿ ತಯಾರಿಸಿ ಸಾಗಾಣಿಕೆ, ಶೇಖರಣೆ ಮಾಡಿ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆ ಇದ್ದು, ಇವುಗಳ ಸೇವನೆಯಿಂದ ಪಾನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆ ಹಾಗೂ ಸಮಾಜಘಾತುಕಶಕ್ತಿಗಳು ಅಕ್ರಮವಾಗಿ ಆದಾಯ ಗಳಿಸಲು ತೆರಿಗೆ ಪಾವತಿಸಿರುವ ಮದ್ಯವನ್ನು ಖರೀದಿಸಿ, ದಾಸ್ತಾನು ಇಟ್ಟು ಚುನಾವಣೆಯ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ ದಿನಗಳಲ್ಲಿ (ಒಣದಿವಸ) ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇದ್ದು, […]

ಸಾರ್ವಜನಿಕ ಸ್ಥಳಗಳಲ್ಲಿ ಸ್ಪೋಟದ ಬೆದರಿಕೆ ನೀಡಿ ಸಿಎಂ, ಡಿಸಿಎಂಗೆ ಇಮೇಲ್ : 2.5 ಮಿಲಿಯನ್ ಡಾಲರ್ ಗೆ ಬೇಡಿಕೆ

ಬೆಂಗಳೂರು: 2.5 ಮಿಲಿಯನ್ ಡಾಲರ್ ನೀಡಿ ಇಲ್ಲವಾದರೆ ಕರ್ನಾಟಕದಾದ್ಯಂತ ಹೋಟೆಲ್‌ಗಳು, ದೇವಸ್ಥಾನಗಳು, ರೈಲುಗಳು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸುತ್ತವೆ ಎನ್ನುವ ಬೆದರಿಕೆ ಇಮೇಲ್ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟಗೊಂಡ ಒಂದು ದಿನದ ನಂತರ, ಮಾರ್ಚ್ 2 ರಂದು ಈ ಇಮೇಲ್ ಕಳುಹಿಸಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ […]

2024-25ನೇ ಸಾಲಿನ 1 ರಿಂದ10ನೇ ತರಗತಿಯವರೆಗಿನ ಪರಿಷ್ಕೃತ ಪಠ್ಯಪುಸ್ತಕ ಬಿಡುಗಡೆ

ಬೆಂಗಳೂರು: ಕರ್ನಾಟಕ ಪಠ್ಯಪುಸ್ತಕ ಸಮಿತಿಯು 2024-25ನೇ ಸಾಲಿನ 1 ರಿಂದ10ನೇ ತರಗತಿಯವರೆಗೆ ಪಠ್ಯಪುಸ್ತಕಗಳಲ್ಲಿ ಮಾಡಿರುವ ಬದಲಾವಣೆಗಳ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಬಗ್ಗೆ ಅಧಿಕಾರಿಗಳು ದೊಡ್ಡ ಘೋಷಣೆ ಮಾಡದೆ ಸದ್ದಿಲ್ಲದೆ ಸಂಜೆ ತಡವಾಗಿ ಅಧಿಸೂಚನೆ ಹೊರಡಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಮಂಜುನಾಥ ಹೆಗಡೆ ನೇತೃತ್ವದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ಕ್ಕೆ ಪೂರಕವಾಗಿ ಪಠ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಪಠ್ಯ ಪುಸ್ತಕದಲ್ಲಿ ರಾಜ್ಯದ ಸಾಂಸ್ಕೃತಿಕ ನಾಯಕರನ್ನು ಕೇಂದ್ರೀಕರಿಸಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಒತ್ತು […]