ಮಂಗಳೂರು: ಸಮುದ್ರದ ಅಲೆಗೆ ಮೂವರು ಯುವಕರು ನೀರುಪಾಲು
ಮಂಗಳೂರು: ಮಂಗಳೂರು ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ನೀರಲ್ಲಿ ಮುಳುಗಿ ನಾಪತ್ತೆಯಾಗಿರುವವರನ್ನು ಮಿಲನ್ (20), ಲಿಖಿತ್ (18) ಮತ್ತು ನಾಗರಾಜ್ (24) ಎಂದು ಗುರುತಿಸಲಾಗಿದೆ. ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಲಿಖಿತ್ ಕೈಕಂಬದ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ, ನಾಗರಾಜ್ ಬೈಕಂಪಾಡಿಯಲ್ಲಿರುವ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಇವರು ಸ್ನೇಹಿತರಾಗಿದ್ದು, ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಬೃಹತ್ ಅಲೆ ಅಪ್ಪಳಿಸಿ […]
ಕಡಬ: ಕಾಲೇಜು ವಿದ್ಯಾರ್ಥಿನಿಯರ ಮೇಲೆ ಅಪರಿಚಿತನಿಂದ ಆ್ಯಸಿಡ್ ದಾಳಿ; ಮೂವರಿಗೆ ಗಂಭೀರ ಗಾಯ
ಕಡಬ: ಕಾಲೇಜು ಆವರಣದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಅಪರಿಚಿತ ವ್ಯಕ್ತಿಯಿಂದ ಆ್ಯಸಿಡ್ ದಾಳಿಯಾಗಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರದಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಮುಸುಕು ಧರಿಸಿದ್ದು, ಓರ್ವ ಆರೋಪಿಯನ್ನು ವಿದ್ಯಾರ್ಥಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಮಂಗಳೂರು: ಸಮುದ್ರದ ಅಲೆಗೆ ಮೂವರು ಯುವಕರು ನೀರುಪಾಲು
ಮಂಗಳೂರು: ಮಂಗಳೂರು ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ನಾಪತ್ತೆಯಾಗಿರುವವರನ್ನು ಮಿಲನ್ (20), ಲಿಖಿತ್ (18) ಮತ್ತು ನಾಗರಾಜ್ (24) ಎಂದು ಗುರುತಿಸಲಾಗಿದೆ. ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಲಿಖಿತ್ ಕೈಕಂಬದ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ, ನಾಗರಾಜ್ ಬೈಕಂಪಾಡಿಯಲ್ಲಿರುವ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಇವರು ಸ್ನೇಹಿತರಾಗಿದ್ದು, ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಬೃಹತ್ ಅಲೆ ಅಪ್ಪಳಿಸಿ ಕೊಚ್ಚಿಕೊಂಡು ಹೋಗಿದ್ದಾರೆ. […]
ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಎನ್‌ಐಎ ಗೆ ಹಸ್ತಾಂತರ
ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಬ್ಲಾಸ್ಟ್ ಪ್ರಕರಣ (Bomb Blast Case) ತನಿಖೆ ರಾಷ್ಟ್ರೀಯ ತನಿಖಾ ದಳಕ್ಕೆ (NIA) ವರ್ಗಾವಣೆಯಾಗಿದೆ. ಸೋಮವಾರ ಮಧ್ಯಾಹ್ನ ಎನ್‌ಐಎ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್ಐಆರ್ ದಾಖಲಿಸಿದ ಎನ್‌ಐಎ ಇಂದಿನಿಂದ ಸ್ಫೋಟದ ಸಂಪೂರ್ಣ ತನಿಖೆ ಆರಂಭಿಸಲಿದೆ ಎಂದು ವರದಿಯಾಗಿದೆ. ರಾಮೇಶ್ವರಂ ಕೆಫೆಯ ಬ್ರೂಕ್‌ಫೀಲ್ಡ್ ಔಟ್‌ಲೆಟ್‌ನಲ್ಲಿ ಶುಕ್ರವಾರ (ಮಾರ್ಚ್ 1) ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು […]
ಬ್ರಹ್ಮಾವರ ಎಂ.ಸಿ.ಸಿ ಬ್ಯಾಂಕ್ ನ 17 ನೇ ಶಾಖೆ ಉದ್ಘಾಟನೆ: ಸಾರವಜನಿಕರ ಸಹಕಾರದಿಂದ ಸಹಕಾರಿ ರಂಗ ಮುನ್ನಡೆ: ಯಶ್ ಪಾಲ್ ಸುವರ್ಣ
ಬ್ರಹ್ಮಾವರ: ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿಬ್ಯಾಂಕಿನ 17 ನೇ ಶಾಖೆಯು ಬ್ರಹ್ಮಾವರದ ಶೇಷಗೋಪಿ ಪ್ಯಾರಡೈಸ್‌ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಮಿನಿ ವಿಧಾನಸೌಧದ ಹತ್ತಿರ, ವಾರಂಬಳ್ಳಿಯಲ್ಲಿ ಮಾ. 3 ರಂದು ಉದ್ಘಾಟನೆಗೊಂಡಿತು. ಹೊಸ ಶಾಖೆಯ ಉದ್ಘಾಟನೆಯನ್ನು ಶಾಸಕ ಯಶ್ಪಾಲ್ ಸುವರ್ಣ ನೆರವೇರಿಸಿ ಮಾತನಾಡಿ, ಬ್ರಹ್ಮಾವರದಲ್ಲಿ ಶಾಖೆಯನ್ನು ತೆರೆದು ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿರುವ ಎಂ.ಸಿ.ಸಿ ಬ್ಯಾಂಕಿಗೆ ಶುಭ ಹಾರೈಸಿದರು. ಆರ್.ಬಿ.ಐ ಮಾನದಂಡದೊಂದಿಗೆ ಸಹಕಾರಿ ರಂಗವನ್ನು ಮುನ್ನಡೆಸುವುದು ಹೂವಿನ ಹಾಸಿಗೆಯಲ್ಲ. ಆದರೂ, ಸಾರ್ವಜನಿಕರ ಸಹಕಾರ […]