ರಾಜ್ಯಸಭೆ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವಿನ ಬಳಿಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ: ಪೊಲೀಸರಿಂದ ಪರಿಶೀಲನೆ
ಬೆಂಗಳೂರು: ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಗೆಲುವು ಸಾಧಿಸಿದ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ವಿಧಾನಸೌಧ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿಗರು ಈ ವಿಚಾರವಾಗಿ ದೇಶದ್ರೋಹ ಬಗೆದ ಪುಂಡರನ್ನು ಬಂಧಿಸಿ, ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಕಾನೂನು ಕ್ರಮ […]
ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸಹಕಾರಿ: ಡಾ. ಕೆ ವಿದ್ಯಾಕುಮಾರಿ
ಉಡುಪಿ: ಮಕ್ಕಳು ಚಟುವಟಿಕೆಗಳ ಆಗರ. ಮಕ್ಕಳ ಬೆಳವಣಿಗೆ ಹಾಗೂ ಅವರುಗಳ ಸರ್ವತೋಮುಖಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವ ಸಲುವಾಗಿ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು. ಅವರು ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು […]
ಫೆ. 29 ರಿಂದ ಮಾರ್ಚ್ 2 ರವರೆಗೆ ರಸ್ತೆ ಸಂಚಾರ ಸಮೀಕ್ಷೆ
ಉಡುಪಿ: ಪ್ರಸಕ್ತ ಸಾಲಿನಲ್ಲಿ ರಸ್ತೆ ಸಂಚಾರ ಸಮೀಕ್ಷೆಯು ಫೆಬ್ರವರಿ 29 ರ ಬೆಳಗ್ಗೆ 6 ಗಂಟೆಯಿಂದ ಮಾರ್ಚ್ 2 ರ ಬೆಳಗ್ಗೆ 6 ಗಂಟೆಯವರೆಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳಲ್ಲಿನ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ ಸ್ಥಳಗಳಲ್ಲಿ ನಡೆಯಲಿದೆ. ಸಮೀಕ್ಷಾ ಕಾರ್ಯ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಸಮೀಕ್ಷಾ ಕೇಂದ್ರಗಳಲ್ಲಿ ಒಂದು ನಿಮಿಷ ವಾಹನ ನಿಲ್ಲಿಸುವ ಮೂಲಕ ರಸ್ತೆ ಸಂಚಾರ ಸಮೀಕ್ಷೆಗೆ ವಾಹನ ಚಾಲಕರು ಹಾಗೂ ಸಾರ್ವನಿಕರು ಸಹಕರಿಸುವಂತೆ ಲೋಕೋಪಯೋಗಿ […]
ಹಿರಿಯಡ್ಕ: ಫೆ.29 ರಿಂದ ಮಾ.3 ರವರೆಗೆ ಬ್ರಹ್ಮಬೈದರ್ಕಳ ಗರಡಿ ಅಂಜಾರು ಕಾಲಾವಧಿ ನೇಮೋತ್ಸವ
ಹಿರಿಯಡ್ಕ: ಬ್ರಹ್ಮಬೈದರ್ಕಳ ಗರಡಿ ಅಂಜಾರು ಇದರ ಕಾಲಾವಧಿ ನೇಮೋತ್ಸವವು ಫೆ.29 ರಿಂದ ಮಾ.3 ರವರೆಗೆ ನಡೆಯಲಿದ್ದು, ಫೆ.29 ರಂದು ಮಧ್ಯಾಹ್ನ 3 ಗಂಟೆಗೆ ಬ್ರಹ್ಮದೇವರ ರಜತ ಬಿಂಬವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ಮಾ.1 ರಂದು ಬೆಳಿಗ್ಗೆ ಬಿಂಬ ಪುನಃಪ್ರತಿಷ್ಠೆ, ರಜತ ಕವಚ ಸಮರ್ಪಣೆ, ಬೆಳಿಗ್ಗೆ 10.15 ಕ್ಕೆ 108 ಕಲಶ ಸಹಿತ ಬ್ರಹ್ಮಕಲಶಾಭಿಷೇಕ, 11.30 ಕ್ಕೆ ಬ್ರಹ್ಮಬೈದರ್ಕಳ ದರ್ಶನ, 12.30ಕ್ಕೆ ಮಹಾ ಅನ್ನಸಂತರ್ಪಣೆ. ರಾತ್ರಿ 9.30 ರಿಂದ ಅಗೇಲು ಸೇವೆ. ಮಾ.2 ರಂದು ರಾತ್ರಿ 7 ಕ್ಕೆ ತಡ್ಸಲೆ […]
ಮಣಿಪಾಲ: ‘ನಮ್ಮ ಸಂತೆ’ಯಲ್ಲಿ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಉತ್ಪನ್ನಗಳ ಮಾರಾಟ
ಮಣಿಪಾಲ: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮತ್ತು ಉದಯವಾಣಿ ಇದರ ಜಂಟಿ ಆಶ್ರಯದಲ್ಲಿ ಎಂ.ಐ.ಸಿ. ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿರುವ “ನಮ್ಮ ಸಂತೆ -2024” ಕಾರ್ಯಕ್ರಮದಲ್ಲಿ ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯು ತನ್ನ ಮಳಿಗೆಯನ್ನು ತೆರೆದು ವಿವಿಧ ಮೀನಿನ ಉತ್ಪನ್ನಗಳಾದ ಮೀನಿನ ಉಪ್ಪಿನಕಾಯಿ, ಒಣಮೀನು, ಒಣಮೀನಿನ ಚಟ್ನಿ ಮುಂತಾದವುಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ನಡೆಸಿತು. ಸಾಗರೋತ್ಪನ್ನ ಆಹಾರ ಪ್ರಿಯರು ಮೀನಿನ ಮೌಲ್ಯವರ್ಧನೆಯ ಉತ್ಪನ್ನಗಳನ್ನು ಖರಿದಿಸಿದರಲ್ಲದೆ, ಮೀನಿನ ಮೌಲ್ಯವರ್ಧಿತ […]