ಮಂಗಳೂರು: ಮಾರ್ಚ್ 1 ರಿಂದ ಚಿತ್ರಕಲಾವಿದ ಎನ್ ಎಸ್ ಪತ್ತಾರ್ ಇವರ “ಸಬ್‌ಲೈಮ್ ಲಿರಿಕ್ಸ್” ಚಿತ್ರಕಲಾ ಪ್ರದರ್ಶನ
ಮಂಗಳೂರು: ಗ್ಯಾಲರಿ ಆರ್ಕಿಡ್ ಮಾರ್ಚ್ 1 ರಿಂದ 10 ರವರೆಗೆ ಚಿತ್ರಕಲಾವಿದ ಎನ್.ಎಸ್. ಪತ್ತಾರ್ ಇವರ “ಸಬ್‌ಲೈಮ್ ಲಿರಿಕ್ಸ್” ಪೇಂಟಿಂಗ್ಸ್ ಪ್ರದರ್ಶನ ಹಮ್ಮಿಕೊಂಡಿದೆ. ಈ ಪ್ರದರ್ಶನವು ಕಳೆದ ನಾಲ್ಕು ವರ್ಷಗಳಲ್ಲಿ ಅವರು ರಚಿಸಿದ 21 ಚಿತ್ರಕಲೆಗಳನ್ನು ಪ್ರದರ್ಶಿಸುತ್ತದೆ. ಮಂಗಳೂರಿನ ಮಹಾಲಸ ಕಲಾ ಮಹಾವಿದ್ಯಾಲಯದ ಚಿತ್ರಕಲಾ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರತಿಷ್ಠಿತ ಕಲಾವಿದ ಎನ್.ಎಸ್. ಪತ್ತಾರ್, ಇವರು “ಸಬ್‌ಲೈಮ್ ಲಿರಿಕ್ಸ್” ಮೂಲಕ ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭವು ಮಾರ್ಚ್ 1 ರಂದು ಸಂಜೆ 5 […]
ICAI-SIRC ಅಧ್ಯಕ್ಷರಾಗಿ ಸಿಎ ಕಿರಣ ಕುಮಾರ್ ಹೆಚ್ ಆಯ್ಕೆ
ಉಡುಪಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ (SIRC) 2024-25ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣವು ಫೆ. 26 ರಂದು ಉಡುಪಿಯಕುಂಜಿಬೆಟ್ಟುವಿನ ICAI ಭವನದಲ್ಲಿ ನಡೆಯಿತು. ಸಿಎ ಕಿರಣ ಕುಮಾರ್ ಹೆಚ್ ಇವರು 2024-25 ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಿಎ. ಅರ್ಚನಾ ಆರ್ ಮೈಯಾ ಉಪಾಧ್ಯಕ್ಷರಾಗಿ, ಸಿಎ. ರಾಘವೇಂದ್ರ ಮೊಗೇರಾಯ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಸಿಎ. ಅಶ್ವಥ್ ಜೆ ಶೆಟ್ಟಿ, ಸಿಕಾಸಾ ಅಧ್ಯಕ್ಷರಾಗಿ ಸಿಎ. ಕೆ ಲಕ್ಷ್ಮೀಶ ರಾವ್ ಆಯ್ಕೆಯಾಗಿದ್ದಾರೆ. ICAI ಉಡುಪಿ […]
ಸುರತ್ಕಲ್: ಪರೀಕ್ಷೆ ಬರೆದು ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವ ನದಿಯಲ್ಲಿ ಪತ್ತೆ
ಸುರತ್ಕಲ್: ಪರೀಕ್ಷೆ ಮುಗಿಸಿ ನಾಪತ್ತೆಯಾಗಿದ್ದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಶವ ಹಳೆಯಂಗಡಿ ಬಳಿಯ ನಂದಿನಿ ನದಿಯಲ್ಲಿ ಕರಿತೊಟದ ರೈಲ್ವೆ ಸೇತುವೆ ಕೆಳಗೆ ಪತ್ತೆಯಾಗಿವೆ. ಅಗರಮೇಲು ಗ್ರಾಮದ ಚಂದ್ರಕಾಂತ್ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ್ ಅವರ ಮಗ ರಾಘವೇಂದ್ರ(15), ಸುರತ್ಕಲ್ ಗುಡ್ಡ್ಡಕೊಪ್ಪಳ ನಿವಾಸಿ ವಿಶ್ವನಾಥ್ ಅವರ ಮಗ ನಿರೂಪ(15), ಚಿತ್ರಾಪುರ ನಿವಾಸಿ ದೇವದಾಸ್ ಅವರ ಮಗ ಅನ್ವಿತ್ (15) ಮೃತ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ. […]
ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮವು ಮಂಗಳ ವಾರದಂದು ಸಂತೆಕಟ್ಟೆಯ ಲಕ್ಷ್ಮೀನಗರದ ಗ್ರೀನ್ ಏಕರ್ಸ್ ನಲ್ಲಿ ಜರಗಿತು. ಕೇಮಾರು ಸಾಂದೀಪನೀ ಸಾಧನಾ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಉಡುಪಿ ಡಯೋಸಿಸ್‌ನ ವಿಕಾರ್ ಜನರಲ್ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು. ಈಶ ವಿಠಲದಾಸ ಶ್ರೀಗಳು ಮಾತನಾಡಿ, ಸಂಘಟನೆಗಳಿಂದ ಪರಿಹಾರ ಸಾಧ್ಯವಿದೆ. ಕಾರ್ಯ ಕ್ರಮಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಎಲ್ಲ ಕ್ಯಾಟರಿಂಗ್ ಸಂಸ್ಥೆಗಳು ಉತ್ತಮ ಹೆಸರುಗಳಿಸಿ ಅಭಿವೃದ್ಧಿ ಹೊಂದ ಬೇಕು […]
ಬ್ರಹ್ಮಾವರ: ಮಾ.2 ಮತ್ತು 3 ರಂದು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಲೋಕಾರ್ಪಣೆ ಹಾಗೂ ಗುರುಗಳ ಮೂರ್ತಿ ಪ್ರತಿಷ್ಠೆ
ಬ್ರಹ್ಮಾವರ: ಬಿಲ್ಲವ ಸಮಾಜ ಸೇವಾ ಸಂಘ(ರಿ.) ಬ್ರಹ್ಮಾವರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಲೋಕಾರ್ಪಣೆ ಹಾಗೂ ಗುರುಗಳ ಮೂರ್ತಿ ಪ್ರತಿಷ್ಠೆ ಕಾರ್ಯಕ್ರಮವು ಮಾ. 3 ರಂದು ಸಂಜೆ ೫ ಗಂಟೆಗೆ ವಾರಂಬಳ್ಳಿ ನಾರಾಯಣಗುರು ಸಭಾಭವನದಲ್ಲಿ ಜರುಗಲಿದೆ. ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಆರ್ಯ ಈಡಿಗ ಸಮಾಜ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಾವರ ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಬಿ.ಎನ್ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.