ರಾಜ್ಯರಾಜಧಾನಿಯಲ್ಲಿ ಕರಾವಳಿಯ ಕಲರವ: ‘ನಮ್ಮ ಕರಾವಳಿ ಉತ್ಸವ’ಕ್ಕೆ ಅಭೂತಪೂರ್ವ ಜನ ಬೆಂಬಲ
ಬೆಂಗಳೂರು: ಜೆ.ಪಿ.ನಗರದ ಬಿಬಿಎಂಪಿ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ‘ನಮ್ಮ ಕರಾವಳಿ ಉತ್ಸವ’ವನ್ನು ಕರಾವಳಿ ಒಕ್ಕೂಟದವರೆಲ್ಲಾ ಸೇರಿ ಅದ್ಧೂರಿಯಾಗಿ ಆಯೋಜಿಸಿದರು. ಕರಾವಳಿಗರ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಅವರು, ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣದಲ್ಲಿ ಕರಾವಳಿ ಭಾಗದವರು ಮುಂದೆ, ಇದರ ಹಿಂದೆ ಹಿರಿಯರ ಮಾರ್ಗದರ್ಶನ, ಪರಂಪರೆ, ಸಂಸತಿ ಪ್ರಮುಖ ಕಾರಣ ಎಂದು ಹೇಳಿದರು. ಕರಾವಳಿ ಭಾಗದಲ್ಲಿ ಮಹಿಳೆಯರು ತಮ್ಮ ದಿನನಿತ್ಯದ ಕೆಲಸದೊಂದಿಗೆ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ […]
ಜ್ಞಾನವಾಪಿ ದೇಗುಲದ ನೆಲಮಾಳಿಗೆಯಲ್ಲಿ ಪ್ರಾರ್ಥನೆಗೆ ಅಲಹಬಾದ್ ಹೈಕೋರ್ಟ್ ಮೊಹರು: ಮಸೀದಿ ಸಮಿತಿಯ ಅರ್ಜಿ ವಜಾ
ನವದೆಹಲಿ: ಜ್ಞಾನವಾಪಿ ದೇವಾಲಯ ಪ್ರಕರಣ ಸಂಬಂಧ ಹಿಂದೂ ಪಕ್ಷಕ್ಕೆ ಮತ್ತೊಮ್ಮೆ ಗೆಲುವಾಗಿದೆ. ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ (Vyas Tehkhana)ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ಜ್ಞಾನವಾಪಿ ದೇಗುಲ ಸಂಕೀರ್ಣದಲ್ಲಿರುವ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಜ್ಞಾನವಾಪಿ ಮಸೀದಿ ಸಮಿತಿಯ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ತೀರ್ಪು […]
CCL: ಕರ್ನಾಟಕ ಬುಲ್ಡೋಜರ್ಸ್ ಶುಭಾರಂಭ; ಮುಂಬೈ ಹೀರೋಸ್ ಗೆ ಸೋಲು
ಶಾರ್ಜಾ: ಎರಡು ದಿನಗಳ ಹಿಂದೆ ಅದ್ಧೂರಿಯಾಗಿ ಶುರುವಾಗಿರುವ ಸಿಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನಿನ್ನೆ ತನ್ನ ಮೊದಲ ಪಂದ್ಯವನ್ನು ಆಡಿದ್ದು, ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ (Karnataka Bulldozers)ಭಾನುವಾರ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಹೀರೋಸ್ ತಂಡವನ್ನು ಸೋಲಿಸಿದೆ. ಹತ್ತು ಓವರ್ ಗಳ ಈ ಪಂದ್ಯದಲ್ಲಿ ಬಾಲಿವುಡ್ ತಂಡವನ್ನು ರಿತೇಶ್ ದೇಶಮುಖ್ ಮುನ್ನಡೆಸುತ್ತಿದ್ದರೆ, ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ನಟ ಪ್ರದೀಪ್ ನಾಯಕರಾಗಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಮುಂಬೈ ಹೀರೋಸ್ ನೀರಸ ಪ್ರದರ್ಶನ ತೋರಿದ್ದರಿಂದ ಕರ್ನಾಟಕ ಬುಲ್ಡೋಜರ್ಸ್ 38 […]
ಭಾರತದಲ್ಲಿ ಬಡತನ ಮಟ್ಟ 5% ಅಥವಾ ಅದಕ್ಕಿಂತ ಕಡಿಮೆ: ಬಿವಿಆರ್ ಸುಬ್ರಹ್ಮಣ್ಯಂ
ನವದೆಹಲಿ: ಭಾರತದಲ್ಲಿ ಬಡತನವು ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಇತ್ತೀಚಿನ ಗೃಹಬಳಕೆಯ ವೆಚ್ಚ ಸಮೀಕ್ಷೆಯನ್ನು (HCES) ಉಲ್ಲೇಖಿಸಿ ಹೇಳಿದ್ದಾರೆ. ಆಗಸ್ಟ್ 2022 ಮತ್ತು ಜುಲೈ 2023 ರ ನಡುವೆ ನಡೆಸಲಾದ ಸಮೀಕ್ಷೆಯು ಮನೆಯ ಬಳಕೆಯ ಒಳನೋಟಗಳನ್ನು ಒದಗಿಸಿ, ಬಡತನ ಮಟ್ಟಗಳು ಮತ್ತು ಸರ್ಕಾರವು ಜಾರಿಗೆ ತಂದಿರುವ ಬಡತನ ನಿರ್ಮೂಲನೆ ಕ್ರಮಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸುತ್ತದೆ. ಬಡತನ ಕಡಿಮೆಗೊಳಿಸುವ ಉಪಕ್ರಮಗಳ ಯಶಸ್ಸಿನ ಮೌಲ್ಯಮಾಪನಕ್ಕೆ ಮನೆಯ ಬಳಕೆಯ ಮೇಲಿನ ಸಮೀಕ್ಷೆಯ […]
ಇತಿಹಾಸ ಪ್ರಸಿಧ್ಧ ಕಟಪಾಡಿ ಬೀಡು “ಮೂಡು – ಪಡು” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಕಟಪಾಡಿ: ಫೆ.24 ರಂದು ನಡೆದ ಇತಿಹಾಸ ಪ್ರಸಿಧ್ಧ ಕಟಪಾಡಿ ಬೀಡು “ಮೂಡು – ಪಡು” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 09 ಜೊತೆ ಅಡ್ಡಹಲಗೆ: 04 ಜೊತೆ ಹಗ್ಗ ಹಿರಿಯ: 16 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 23 ಜೊತೆ ನೇಗಿಲು ಕಿರಿಯ: 93 ಜೊತೆ ಒಟ್ಟು ಕೋಣಗಳ ಸಂಖ್ಯೆ: 177 ಜೊತೆ ಕನೆಹಲಗೆ: ( ಸಮಾನ ಬಹುಮಾನ ) • ಬೋಳಾರ […]