ಸಶಸ್ತ್ರ ಮೀಸಲು ಪೊಲೀಸ್ ತಂಡ ರಜತ ಸಂಭ್ರಮ ನಿಮಿತ್ತ ರಕ್ತದಾನ ಶಿಬಿರ

ಉಡುಪಿ: ಸಶಸ್ತ್ರ ಮೀಸಲು ಪೊಲೀಸ್ ಉಡುಪಿ 1999ರ ತಂಡ ಇವರ ರಜತ ಸಂಭ್ರಮದ ಪ್ರಯುಕ್ತ, ಕೆ.ಎಂ.ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಡಿಎಆರ್ ಕೇಂದ್ರ ಕಛೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ರಕ್ತದಾನದ ಬಗ್ಗೆ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಐಪಿಎಸ್ ಮಾತನಾಡಿ, ರಕ್ತ ಸಂಗ್ರಹ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಇಲಾಖಾ ವತಿಯಿಂದ ರಕ್ತದಾನ ಶಿಬಿರ ನಡೆಸುವಂತೆ ಸಲಹೆ ನೀಡಿದರು. ರಕ್ತದಾನ ಮಾಡುವದರಿಂದ ಯಾವುದೇ […]
ಸ್ಟೀಲ್ ಬ್ರಿಡ್ಜ್ ಗರ್ಡರ್ ಗೆ ಡಿ.ಆರ್.ಡಿ.ಓ ಅಂಗೀಕಾರ: ಇಂದ್ರಾಳಿ ರೈಲ್ವೆ ಮೇಲ್ಸೆತುವ ಕಾಮಗಾರಿಗೆ ವೇಗ

ಉಡುಪಿ: ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗಾಗಿ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿರುವ ಸ್ಟೀಲ್ ಬ್ರಿಡ್ಜ್ ಗರ್ಡರ್ ರೈಲ್ವೇ ಇಲಾಖೆಯ ಡಿಆರ್ ಡಿಒ ಪರಿಶೀಲನೆಯಿಂದ ಅಂಗೀಕೃತವಾಗಿ ಉಡುಪಿಗೆ ಆಗಮಿಸಲಿದೆ. ಉಡುಪಿ ಜನತೆಯ ಬಹು ದಿನದ ಬೇಡಿಕೆಯಾಗಿರುವ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಸಹಕರಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸ್ಥಳೀಯ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಉಡುಪಿ ಜನತೆಯ ಪರವಾಗಿ ಶಾಸಕ ಯಶ್ ಪಾಲ್ ಸುವರ್ಣ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.