ಶ್ರೀಕೃಷ್ಣ ಮಠದಲ್ಲಿ ಕೊಟಿ ತುಳಸಿ ಅರ್ಚನೆ ಹಾಗೂ ಶ್ರೀಲಕ್ಷ್ಮೀ ಶೋಭಾನೆ ಪಠಣ

ಉಡುಪಿ: ರಜತಪೀಠಪುರವೆಂದೇ ಪ್ರಖ್ಯಾತಿ ಪಡೆದಿರುವ ಉಡುಪಿ, ಜಗದ್ಗುರುಗಳಾದ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ರುಕ್ಮಿಣಿ ಕರಾರ್ಚಿತ ಶ್ರೀ ಕೃಷ್ಣ ಹಾಗೂ ಅವನ ಸನ್ನಿಧಾನದ ಶ್ರೀ ಕೃಷ್ಣ ಮಠದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ಮನ್ನಣೆಯನ್ನು ಪಡೆದಿದೆ.  ಸದಾ ತಪೋನಿರತರಾದ ಅಷ್ಟಮಠದ ಯತಿಗಳಿಂದ ನಿರಂತರ ಪೂಜೆಯನ್ನು ಕೈಗೊಳ್ಳುತ್ತಿರುವ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಸುಗುಣೇಂದ್ರತೀರ್ಥ ಶ್ರೀಪಾದರ ಹಾಗೂ ಪರಮ ಪೂಜ್ಯ ಸುಶ್ರೀ೦ದ್ರತೀರ್ಥ ಶ್ರೀಪಾದರ ಆಶಯದಂತೆ  24 ನೇ ಶನಿವಾರ ಬೆಳಿಗ್ಗೆ 7-30 ರಿಂದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ) ಉಡುಪಿ, ಇದರ ರಜತ ಮಹೋತ್ಸವದ […]

ಉಡುಪಿ: ನಾಲ್ಕೂವರೆ ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಮಾಲಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಸಿಬ್ಬಂದಿಗಳು!!

ಉಡುಪಿ: ಸ್ವಾರ್ಥ ಹಾಗೂ ಕಪಟ ಹೆಚ್ಚುತ್ತಿರುವ ಈ ಕಾಲದಲ್ಲಿಯೂ ಜಿಲ್ಲೆಯ ಜನರು ಪ್ರಾಮಾಣಿಕತೆ ಮೆರೆಯುತ್ತಿರುವುದು ಎಲ್ಲರೂ ಹೆಮ್ಮೆ ಪಡಬೇಕಾದ ವಿಚಾರ. ತುಳುನಾಡಿನವರು ಸತ್ಯಸಂಧರು ಹಾಗೂ ಪ್ರಾಮಾಣಿಕರು ಎನ್ನುವ ಹೆಗ್ಗಳಿಕೆ ಹೊಂದಿದ್ದು, ಇದೀಗ ಮತ್ತೊಮ್ಮೆ ಅದು ಸಾಬೀತಾಗಿದೆ.ಖಾಸಾಗಿ ಬಸ್ಸೊಂದರ ಚಾಲಕ ಮತ್ತು ನಿರ್ವಾಹಕರು ಬರೋಬ್ಬರಿ ನಾಲ್ಕೂವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿಯನ್ನು ಮಾಲಕರಿಗೆ ಹಿಂತಿರುಗಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಣಿಪಾಲದಿಂದ ಮಂಗಳೂರಿಗೆ ತೆರಳುವ ರೇಷ್ಮಾ ಹೆಸರಿನ ಖಾಸಗಿ ಬಸ್ಸು ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬವರು ಪ್ರಾಮಾಣಿಕತೆ ಮೆರೆದು […]

ಫೆ.24ರಂದು ‘ಆಜಾದ್ ಹಿಂದ್ – ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ: ಅಜಿತ್ ಹನುಮಕ್ಕನವರ್ ಭಾಗಿ

ಉಡುಪಿ: ಉಡುಪಿಯ ಕೂರ್ಮ ಫೌಂಡೇಶನ್ ಆಶ್ರಯದಲ್ಲಿ ಫೆ.24ರಂದು ‘ಆಜಾದ್ ಹಿಂದ್ – ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ ಎಂದು ಕೂರ್ಮ ಫೌಂಡೇಶನ್ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು. ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಜಾದ್ ಹಿಂದ್ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮಹಾರಾಷ್ಟ್ರದ ಪ್ರಖ್ಯಾತ ವಾಗ್ಮಿ ಸಂದೀಪ್ ಮಹಿಂದ್ ಹಾಗೂ ರಾಷ್ಟ್ರೀಯವಾದಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ಭಾಗವಹಿಸಲಿದ್ದಾರೆ. ಗಾಯಕ ರಜತ್ ಮಯ್ಯ ಮತ್ತು ತಂಡದಿಂದ ರಾಷ್ಟ್ರಗೀತೆಗಳು […]

ಬೇಟಿ ಬಚಾವೊ ಬೇಟಿ ಪಡಾವೊ ರಾಯಭಾರಿಯಾಗಿ ಸವಿತಾ ಎರ್ಮಾಳ್ ಆಯ್ಕೆ

ಉಡುಪಿ: ‘ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ’ (ಬೇಟಿ ಬಚಾವೊ ಬೇಟಿ ಪಡಾವೊ) ಮತ್ತು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ರಾಯಭಾರಿಯಾಗಿ ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ಎರ್ಮಾಳ್ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಇವರು ಸವಿತಾ ಎರ್ಮಾಳ್ ಇವರನ್ನು ಆಯ್ಕೆ ಮಾಡಿದ್ದಾರೆ. ಸವಿತಾ ಎರ್ಮಾಳ್ ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬ್ರಹ್ಮಾವರ ಇದರ […]