ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಾರಿಗೆ ನೌಕರರಿಂದ ಉಪವಾಸ ಸತ್ಯಾಗ್ರಹ
ಬೆಂಗಳೂರು: ಇಲ್ಲಿನ ಫ್ರೀಡಂಪಾರ್ಕ್‌ನಲ್ಲಿ ಸಾರಿಗೆ ನೌಕರರು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಬೆಳಗ್ಗೆ 10:30 ರಿಂದ 5 ಗಂಟೆಯವರೆಗೆ ನೌಕರರ ಉಪವಾಸ ಸತ್ಯಾಗ್ರಹ ನಡೆಯಲಿದ್ದು, ಸಾರಿಗೆ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಹೊಸ ಒಪ್ಪಂದದ ಪ್ರಕಾರ ಜನವರಿ 1 ರಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆ ಆಗಬೇಕು. ಆದರೆ, ವೇತನ ಸುಧಾರಣೆಯ ಪ್ರಶ್ನೆಯನ್ನು ಸಾರಿಗೆ ಸಂಸ್ಥೆಗಳು ಇನ್ನೂ ಚರ್ಚಿಸಿಲ್ಲ. ಹೀಗಾಗಿ ವೇತನ ಪರಿಷ್ಕರಣೆ ಸೇರಿದಂತೆ ನಾನಾ […]
ಬಾಹ್ಯಾಕಾಶ ಕ್ಷೇತ್ರದಲ್ಲಿ 100% FDI ಗೆ ಅನುಮತಿ: ಮೋದಿ ಕ್ಯಾಬಿನೆಟ್ ನಿರ್ಧಾರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇದರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಗೆ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ. “ತಿದ್ದುಪಡಿಗೊಂಡ ಎಫ್‌ಡಿಐ ನೀತಿಯ ಅಡಿಯಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ 100% ಎಫ್‌ಡಿಐ ಅನ್ನು ಅನುಮತಿಸಲಾಗಿದೆ. ತಿದ್ದುಪಡಿ ನೀತಿಯಡಿಯಲ್ಲಿ ಉದಾರೀಕರಣಗೊಂಡ ಪ್ರವೇಶ ಮಾರ್ಗಗಳು ಬಾಹ್ಯಾಕಾಶದಲ್ಲಿ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿವೆ” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. […]
ಮಣಿಪಾಲ: Reem ಇಂಡಸ್ಟ್ರೀಸ್ ನಲ್ಲಿ ಉದ್ಯೋಗಾವಕಾಶ
ಮಣಿಪಾಲ: ಇಲ್ಲಿನ Reem ಇಂಡಸ್ಟ್ರೀಸ್ ನಲ್ಲಿ ಬಿಸ್ ನೆಸ್ ಡೆವೆಲಪ್ಮೆಂಟ್ ಮ್ಯಾನೇಜರ್/ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದು, FMCG ಮಾರ್ಕೆಂಟಿಗ್ ಕ್ಷೇತ್ರದಲ್ಲಿ 2-3 ವರ್ಷ ಅನುಭವ ಹೊಂದಿರಬೇಕು. ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ, ಬಿಬಿಎ, ಎಂಬಿಎ ಇತ್ಯಾದಿ ಉತ್ತಮ ವೇತನ ನೀಡಲಾಗುವುದು. ಆಸಕ್ತರು ತಮ್ಮ ಸಿವಿ ಅನ್ನು [email protected] ಗೆ ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ: 7975285464 ಅನ್ನು ಸಂಪರ್ಕಿಸಬಹುದು.
ಕಬ್ಬಿನ FRP ಕ್ವಿಂಟಲ್‌ಗೆ 315 ರಿಂದ 340 ಹೆಚ್ಚಿಸಿದ ಕೇಂದ್ರ ಸರ್ಕಾರ: 5 ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರಿಗೆ ಪ್ರಯೋಜನ
ನವದೆಹಲಿ: ಫೆಬ್ರವರಿ 21 ರಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2024-25 (ಅಕ್ಟೋಬರ್-ಸೆಪ್ಟೆಂಬರ್) ಹಂಗಾಮಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಕ್ವಿಂಟಲ್‌ಗೆ 315 ರಿಂದ 340 ರೂ.ಗೆ ಹೆಚ್ಚಿಸಲು ಅನುಮೋದಿಸಿತು. ಕಬ್ಬಿನ ಎಫ್‌ಆರ್‌ಪಿಯಲ್ಲಿ ಪ್ರತಿ ಕ್ವಿಂಟಲ್‌ಗೆ ರೂ 25 ಹೆಚ್ಚಳವು ಕಳೆದ ವರ್ಷ ಘೋಷಿಸಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ವಿಶ್ವದಲ್ಲಿಯೇ ಕಬ್ಬಿಗೆ ಭಾರತ ಅತಿ ಹೆಚ್ಚು ಬೆಲೆ ನೀಡುತ್ತಿದೆ. ಈ ವರ್ಷವೂ ಮೋದಿ ಸರಕಾರ ಶೇ.8ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಇದು ರೈತರ ಹಿತಾಸಕ್ತಿಯಾಗಿದೆ ಎಂದು […]
ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಯೋಜನೆ: ನಾಲ್ವರ ಬಂಧನ
ಪುತ್ತೂರು: ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದ ನಾಲ್ವರನ್ನು ಪುತ್ತೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ನಿವಾಸಿ ಕಿಶೋರ್ ಕಲ್ಲಡ್ಕ (26), ಪುತ್ತೂರಿನ ಮನೋಜ್ (23), ಆಶಿಕ್ (28) ಹಾಗೂ ಸನತ್ ಕುಮಾರ್ (24) ಎಂಬುವವರೇ ಬಂಧಿತ ಆರೋಪಿಗಳು. ಆರೋಪಿ ಮನೀಶ್ ಸಹೋದರ ಮನೋಜ್ ಎಂಬುವವರಿಗೆ ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳುವ ಬೆದರಿಕೆ ಕರೆ ಮಾಡಿರುವ ಕಾರಣ ಮನೋಜ್, ಪುತ್ತೂರು ನಗರ […]