ಗಗನವಿನ್ನು ಹತ್ತಿರ!! ಗಗನಯಾನದ CE20 ಕ್ರಯೋಜೆನಿಕ್ ಎಂಜಿನ್‌ನ ಮಾನವ ರೇಟಿಂಗ್ ಯಶಸ್ವಿಯಾಗಿ ಪೂರ್ಣಗೊಳಿಸಿದ ISRO
ಬೆಂಗಳೂರು: ISRO ತನ್ನ CE20 ಕ್ರಯೋಜೆನಿಕ್ ಎಂಜಿನ್‌ನ ಮಾನವ ರೇಟಿಂಗ್‌ನಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಇದು ‘ಗಗನಯಾನ’ ಕಾರ್ಯಾಚರಣೆಗಳಿಗಾಗಿ ಮಾನವ-ಶ್ರೇಣಿಯ LVM3 ಉಡಾವಣಾ ವಾಹನದ ಕ್ರಯೋಜೆನಿಕ್ ಹಂತವನ್ನು ಶಕ್ತಗೊಳಿಸುತ್ತದೆ. ಫೆಬ್ರವರಿ 13 ರಂದು ಅಂತಿಮ ಸುತ್ತಿನ ನೆಲದ ಅರ್ಹತಾ ಪರೀಕ್ಷೆಗಳನ್ನು ಇದು ಪೂರ್ಣಗೊಳಿಸಿದೆ. ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿರುವ ಹೈ ಆಲ್ಟಿಟ್ಯೂಡ್ ಟೆಸ್ಟ್ ಫೆಸಿಲಿಟಿಯಲ್ಲಿ ಹಾರಾಟದ ಪರಿಸ್ಥಿತಿಗಳನ್ನು ಅನುಕರಿಸಲು ನಡೆಸಿದ ವ್ಯಾಕ್ಯೂಮ್ ಇಗ್ನಿಷನ್ ಪರೀಕ್ಷೆಗಳ ಸರಣಿಯ ಏಳನೇ ಪರೀಕ್ಷೆಯು ಅಂತಿಮ ಪರೀಕ್ಷೆಯಾಗಿದೆ. ತನ್ಮೂಲಕ ಗಗನಯಾನ ಕಾರ್ಯಕ್ರಮಕ್ಕಾಗಿ CE20 […]
ಜನಪ್ರಿಯ ರೇಡಿಯೋ ಉದ್ಘೋಷಕ ಅಮೀನ್ ಸಯಾನಿ ಇನ್ನಿಲ್ಲ
ಮುಂಬೈ: ಜನಪ್ರಿಯ ರೇಡಿಯೋ ಉದ್ಘೋಷಕ ಅಮೀನ್ ಸಯಾನಿ, ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಿನಾಕಾ ಗೀತ್ ಮಾಲಾ ಕಾರ್ಯಕ್ರಮದಿಂದ ದೇಶಾದ್ಯಂತ ಮನೆಮಾತಾಗಿದ್ದ ಅಮೀನ್ ಸಯಾನಿ ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಮಗ ರಾಜಿಲ್ ಸಯಾನಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕೆಲವು ಸಂಬಂಧಿಕರು ಬುಧವಾರ ಮುಂಬೈ ತಲುಪುತ್ತಾರೆ ಎಂದು ಕುಟುಂಬವು ಕಾಯುತ್ತಿರುವ ಕಾರಣ ಸಯಾನಿ ಅವರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ ಎಂದು ವರದಿಯಾಗಿದೆ.
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಅಗ್ನಿ ದುರಂತ: ರಾಜ್ಯ ಸರ್ಕಾರದಿಂದ 1.75 ಕೋಟಿ ರೂ. ಪರಿಹಾರ ಮಂಜೂರು
ಕುಂದಾಪುರ: ಕಳೆದ ನವೆಂಬರ್ ತಿಂಗಳಿನಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ ಬೋಟ್ ಮಾಲಕರಿಗೆ ರಾಜ್ಯ ಸರ್ಕಾರ 1.75 ಕೋಟಿ ಮಜೂರು ಮಾಡಿದೆ. ಶಿರೂರಿನಲ್ಲಿ ಪ್ರವಾಹದಿಂದ ಹಾನಿಗೀಡಾದ ನಾಡದೋಣಿಗಳಿಗೆ ರೂ. 28 ಲಕ್ಷ ಪರಿಹಾರವನ್ನು ಮೀನುಗಾರರ ಸಂಕಷ್ಟ ಪರಿಹಾರನಿಧಿಯ ಮೂಲಕ ಮಂಜೂರು ಮಾಡಲಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮೀನುಗಾರಿಕೆ ಸಚಿವ ಮಾಂಕಾಳ ಎಸ್. ವೈದ್ಯ ಅಧ್ಯಕ್ಷತೆಯಲ್ಲಿ ನಡೆದ ಮೀನುಗಾರರ ಸಂಕಷ್ಟ ಪರಿಹಾರನಿಧಿ […]
10 ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಟ್ಟಡ ನಿರ್ಮಾಣ ಮಾಲೀಕರಿಗೆ ಪ್ರಮಾಣ ಪತ್ರ ಕಡ್ಡಾಯ
ಉಡುಪಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 ಮತ್ತು ಕರ್ನಾಟಕ ನಿಯಮಗಳು 2006 ರಡಿ 10 ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಕಡ್ಡಾಯವಾಗಿ ಕಟ್ಟಡ ಮಾಲೀಕರು, ನಿಯೋಜಕರು ಹಾಗೂ ಗುತ್ತಿಗೆದಾರರು ಕಟ್ಟಡ ನಿರ್ಮಾಣ ಕಾಮಗಾರಿ ಸಂಸ್ಥೆಯನ್ನಾಗಿ ನೋಂದಾಯಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಭರಿಸಿ, ನೋಂದಣಿ ಪ್ರಮಾಣ ಪತ್ರವನ್ನು ಕಾರ್ಮಿಕ ಇಲಾಖೆಯಿಂದ ಪಡೆಯುವುದು ಕಡ್ಡಾಯವಾಗಿರುತ್ತದೆ. ವ್ಯಾಸ್ತವ್ಯದ ಕಟ್ಟಡ ನಿರ್ಮಾಣ […]
ಕಾಪು ಮಾರಿಯಮ್ಮ ದೇಗುಲದ ಕಾಮಗಾರಿ ವೀಕ್ಷಿಸಿದ ರವಿಶಂಕರ್ ಗುರೂಜಿ
ಕಾಪು: ದಕ್ಷಿಣ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಿರ್ಮಾಣಗೊಳ್ಳುತ್ತಿರುವ ಇಳಕಲ್ ಕೆಂಪು ಶಿಲೆಯ ದೇಗುಲದ ಕಾಮಗಾರಿ ವೀಕ್ಷಿಸಿ, ಇದು ಭಕ್ತಿ–ಭಾವದ ಸಂಕೇತ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮುಖ್ಯಸ್ಥ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು. ಮಂಗಳವಾರ ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದು ಮಾತನಾಡಿದ ಅವರು, ಎಲ್ಲರೂ ಸೇರಿ ಹೃದಯದಿಂದ ಕೆಲಸ ಮಾಡಿದರೆ ದೇವಿಯ ಅನುಗ್ರಹ ಪ್ರಾಪ್ತವಾಗುತ್ತದೆ. ದಿನನಿತ್ಯ ಇಲ್ಲಿ ಚಮತ್ಕಾರಗಳು ನಡೆಯುತ್ತಿದ್ದು, ಭಕ್ತರ ಇಷ್ಟಾರ್ಥಗಳು ನೆರವೇರುತ್ತಿವೆ. ಆದ್ದರಿಂದ ಕ್ಷೇತ್ರ […]