ಕಾರ್ಕಳ: ದೇವಸ್ಥಾನದ ಅರ್ಚಕ ನಾಪತ್ತೆ
ಕಾರ್ಕಳ: ನಂದಳಿಕೆ ಶ್ರೀ ಆದಿಲಕ್ಷ್ಮೀ ದೇವಸ್ಥಾನದ ಅರ್ಚಕ ವಾಗೀಶ್ (31) ಅವರು ಫೆ 20ರಿಂದ ನಾಪತ್ತೆಯಾಗಿದ್ದಾರೆ. ಫೆ.20ರಂದು ನಂದಳಿಕೆ ಶ್ರೀ ಆದಿಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಮುಗಿದ ಬಳಿಕ ಉಡುಪಿಗೆ ಹೋಗಿ ಬರುತ್ತೇನೆಂದು ತೆರಳಿದ್ದರು. ಆ ಬಳಿಕ ಮನೆಗೆ ವಾಪಾಸ್ ಬಂದಿಲ್ಲ, ಪೊನ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಫೆ.23ರಿಂದ ‘ಬಿಲ್ಡ್ ಟೆಕ್-2024’ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ
ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್, ಉಡುಪಿ ಹಾಗೂ ಯು.ಎಸ್. ಕಮ್ಯೂನಿಕೇಶನ್ಸ್, ಬೆಂಗಳೂರು ಇದರ ಸಹಯೋಗದಲ್ಲಿ ‘ಬಿಲ್ಡ್ ಟೆಕ್-2024’ ಎಂಬ ಶೀರ್ಷಿಕೆಯೊಂದಿಗೆ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನವನ್ನು ಇದೇ ಫೆ. 23ರಿಂದ ಮತ್ತು 25ರ ವರೆಗೆ ಮೂರು ದಿನಗಳ ಕಾಲ ಉಡುಪಿ ಕುಂಜಿಬೆಟ್ಟುವಿನ ಎಂ.ಜಿ.ಎಂ. ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಧ್ಯಕ್ಷ ಪಾಡುರಂಗ ಆಚಾರ್ಯ ಹೇಳಿದರು. ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮತ್ತು […]
ರಾಷ್ಟ್ರೀಯ ಕಾಂಗ್ರೆಸ್‌ನಿಂದ 65 ಕೋಟಿ ರೂ. ತೆರಿಗೆ ಬಾಕಿ ವಸೂಲಾತಿ ನಡೆಸಿದ ಆದಾಯ ತೆರಿಗೆ ಇಲಾಖೆ
ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ(INC) 115 ಕೋಟಿ ರೂ.ಗಳ ಒಟ್ಟು ತೆರಿಗೆಯಲ್ಲಿ 65 ಕೋಟಿ ರೂ.ಗಳನ್ನು ಯಶಸ್ವಿಯಾಗಿ ವಸೂಲಿ ಮಾಡಿದೆ ಎಂದು ವರದಿಯಾಗಿದೆ. ಮಂಗಳವಾರ ಕಾಂಗ್ರೆಸ್ ಪಕ್ಷದ ಖಾತೆಗಳಿಗೆ ಇಲಾಖೆ ಸ್ವಾಧೀನತೆ ಹೇರಿದ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯಿಂದ ವಸೂಲಾತಿ ನಡೆದಿದೆ. ಸ್ವಾಧೀನತೆಯು ಕಾನೂನು ಹಕ್ಕು ಅಥವಾ ಸ್ವತ್ತುಗಳ ವಿರುದ್ಧದ ಹಕ್ಕಾಗಿದ್ದು ಸಾಮಾನ್ಯವಾಗಿ ಖಾತೆಯಲ್ಲಿನ ಶುಲ್ಕಗಳು ಅಥವಾ ಸಾಲಗಳ ಮರುಪಡೆಯುವಿಕೆಗೆ ಅನ್ವಯಿಸುತ್ತದೆ. ಕಾಂಗ್ರೆಸ್ ಪಕ್ಷದ ಖಾತೆಯಲ್ಲಿ 115 ಕೋಟಿ ರೂಗಳ ಸ್ವಾದೀನತೆಗಾಗಿ ಆದಾಯ ತೆರಿಗೆ […]
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ರಾಜ್ಯ ಸರಕಾರ ಮತ್ತು ಸಿಬಿಐಗೆ ಹೈಕೋರ್ಟ್ ನೋಟಿಸ್
ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮತ್ತು ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈ ಕುರಿತಂತೆ ಮೃತಳ ಸೌಜನ್ಯಳ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ತಕರಾರು ಅರ್ಜಿ, ನ್ಯಾಯಮೂರ್ತಿ ಕೆ.ನಟರಾಜನ್ ಅವರ ನ್ಯಾಯಪೀಠದ ಮುಂದೆ ಇತ್ತೀಚೆಗೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನಂತರ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ರಾಜ್ಯ ಗೃಹ ಇಲಾಖೆ […]
ಕೊಲ್ಲೂರು ದೇಗುಲದ ಹೆಸರಿನಲ್ಲಿ ಭಕ್ತರಿಗೆ ವಂಚಿಸುತ್ತಿರುವ ನಕಲಿ ಟ್ರಸ್ಟ್: ಕೋಟ್ಯಂತರ ರೂ. ಹಣ ಸಂಗ್ರಹಣೆ ಆರೋಪ
ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಹೆಸರಿನಲ್ಲಿ ನಡೆಸಲಾಗುತ್ತಿರುವ ವಂಚನೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಟ್ರಸ್ಟ್ ನ ಲಿಂಕ್ ಹರಿದಾಡುತ್ತಿದ್ದು, ದೇಗುಲಕ್ಕೆ ದೇಣಿಗೆ ಹರಕೆ ಸಲ್ಲಿಸುವ ಭಕ್ತರು ಇದಕ್ಕೆ ಹಣ ಕಳಿಸುತ್ತಿದ್ದಾರೆ. ಈ ಬಗ್ಗೆ ಭಕ್ತರೊಬ್ಬರು ದೇಗುಲದ ಆಡಳಿತ ಮಂಡಳಿಗೆ ಇ-ಮೇಲ್ ಮಾಡಿದಾಗ ಈ ಖಾತೆಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಅಂತ ಸ್ಪಷ್ಟನೆ ಬಂದಿದೆ. ಆ ಬಳಿಕ ಮೂಕಾಂಬಿಕೆಯ ಭಕ್ತರಾಗಿರುವ ರಾಘವೇಂದ್ರ ಹಾಗೂ ಧನಂಜಯ್ ಎಂಬ ವ್ಯಕ್ತಿಗಳು ಈ ಟ್ರಸ್ಟ್ […]