ಮಣಿಪಾಲ ಎಂಐಟಿ’ಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ.
ಮಣಿಪಾಲದ ಎಂಐಟಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನೀಯರಿಂಗ್ ವಿಭಾಗವು ಆಯೋಜಿಸಿದ್ದ “ರೇರಾ ಆಕ್ಟ್-2016 (ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಆಕ್ಟ್) ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ವಕೀಲರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ಈ ಪ್ರಮುಖ ಕಾನೂನಿನ ಹಿನ್ನಲೆ, ಅದರಲ್ಲಿರುವ ಅನೇಕ ಮಹತ್ವದ ನಿಯಮಗಳು, ಗ್ರಾಹಕರ-ಡೆವಲಪರ್ ಗಳ ಹಕ್ಕುಗಳು ಮತ್ತು ಕರ್ತವ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಈ ಕಾರ್ಯಾಗಾರದಲ್ಲಿ ಸಂಸ್ಥೆಯ ಎಂ.ಟೆಕ್ ಮತ್ತು ಆರ್ಕಿಟೆಕ್ಟ್ ವಿದ್ಯಾರ್ಥಿಗಳು, ವಿವಿಧ ಬ್ಯಾಂಕ್ ಗಳ ಪ್ರತಿನಿಧಿಗಳು, ಅನೇಕ ಡೆವಲಪರ್ ಗಳು ಹಾಗೂ ಆಸ್ತಿ ಮೌಲ್ಯ […]
ಬದ್ರಿಯಾ ಜುಮ್ಮಾ ಮಸ್ಜಿದ್ ಕುಪ್ಪೇಪದವು: ಮಣಿಪುರ ದಫ್ ತಂಡಕ್ಕೆ ಪ್ರಥಮ ಸ್ಥಾನ
ಉಡುಪಿ: ಕುಪ್ಪೇಪದವಿನಲ್ಲಿ ತ್ರತೀಯ ವಾರ್ಷಿಕೋತ್ಸವದ ಪ್ರಯುಕ್ತ ಫೆ.20 ರಂದು ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ಉಡುಪಿ ಕಟಪಾಡಿಯ ಖಲಂದರ್ ಷಾ ದಫ್ ಸಮಿತಿ ಮಣಿಪುರ ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 10 ತಂಡಗಳು ಭಾಗವಹಿಸಿದವು.
ಪೆರ್ಡೂರು ರತ್ನಾಕರ ಕಲ್ಯಾಣಿಯವರಿಗೆ ಗೌರವಾಭಿನಂದನೆ.
ಉಡುಪಿ: ಕಿದಿಯೂರು ಹೋಟೆಲ್ ಉಡುಪಿ ಇದರ ತೃತೀಯ ಅಷ್ಟ ಪವಿತ್ರ ನಾಗಮಂಡಲ ಉತ್ಸವದ ಧಾರ್ಮಿಕ ಸಭೆಯಲ್ಲಿ ಸುಮಾರು 25ವರ್ಷಗಳ ಕಾಲ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪೆರ್ಡೂರ್ ರತ್ನಾಕರ ಕಲ್ಯಾಣಿ ಅವರನ್ನು ಅವರ ಸೇವಾ ಹಿರಿತನವನ್ನು ಪರಿಗಣಿಸಿ ಹೋಟೆಲ್ ನ ಎಮ್ ಡಿ ಶ್ರೀ ಭುವನೇಂದ್ರ ಕಿದಿಯೂರು, ಗಣ್ಯರ ಸಮ ಕ್ಷಮದಲ್ಲಿ ಗೌರವವಿಸಿ ಅಭಿನಂದಿಸಿದರು. ಇವರು ಇತ್ತೀಚೆಗಷ್ಟೇ ಕಸಾಪ ಪುರಸ್ಕಾರವನ್ನು ಪಡೆದಿದ್ದಾರೆ.
ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಮಾಹಿತಿ ಕಾರ್ಯಕ್ರಮ ‘ಪುಷ್ಟಿ’ 2024.
ನಾವುಂದ: ಶುಭದಾ ಆಂಗ್ಲ ಮಾಧ್ಯಮ ಶಾಲೆ ನಾವುಂದದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಮಾಹಿತಿ ಕಾರ್ಯಕ್ರಮ ‘ಪುಷ್ಟಿ’ 2024 ಆಯೋಜಿಸಲಾಯಿತು. ಸಮರ್ಪಣಾ ಎಜುಕೇಶನಲ್ ಟ್ರಸ್ಟ್ (ರಿ)ಹೆಮ್ಮಾಡಿ ಇದರ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ಹತ್ತನೇ ತರಗತಿ ಪ್ರಮುಖವಾದ ಕಾಲಘಟ್ಟವಾಗಿದ್ದು ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಕಲಿಕೆ ಅತ್ಯುತ್ತಮವಾಗಬೇಕು ಓದುವ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗಬೇಕು.ವಿದ್ಯಾರ್ಥಿಗಳೇ ಸಮಯ ವ್ಯರ್ಥ […]
ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ನಮ್ಮ ಸಂವಿಧಾನವೇ ಮೂಲ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ
ಉಡುಪಿ: ನಮ್ಮ ದೇಶದ ಪ್ರಜಾಪ್ರಭ್ವುತ ವ್ಯವಸ್ಥೆ ಗಟ್ಟಿಗೊಳಿಸಲು ಸಂವಿಧಾನವೇ ಮೂಲ ಕಾರಣ. ಅದರ ಆಶಯದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕರರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಸರಕಾರಿ ಪಾಲಿಟೆಕ್ನಿಕ್ ಹಾಗೂ ಡಯಟ್ ಉಡುಪಿ ಇವರ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. […]