ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರೊಹಿತಾಕ್ಷ ಆಯ್ಕೆ.

ಉಡುಪಿ: ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಇದರ 17ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಕ್ರೀಡಾ ಸಮ್ಮಿಲನ ಭಾನುವಾರ ಶ್ರೀ ವಾಣಿ ಪ್ರೌಢಶಾಲೆ, ನಡುೂರು ಇಲ್ಲಿ ನೆರವೇರಿತು. ಸಮಾರಂಭವನ್ನು ಶ್ರೀಧರ್ ಶೆಟ್ಟಿ, ನಿವೃತ್ತ ದೈಹಿಕ ಉಪ ನಿರ್ದೇಶಕರು ಉದ್ಘಾಟಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ- ರೋಹಿತಾಕ್ಷ ಉದ್ಯಾವರ, ಪ್ರಧಾನ ಕಾರ್ಯದರ್ಶಿ ವಾಮನ ಪಾಲನ್, ಕೋಶಾಧಿಕಾರಿ ಜೀವನ್ ಪೂಜಾರಿ ಉಪಾಧ್ಯಕ್ಷರುಗಳಾಗಿ ಸಂದೀಪ್ ಕುಂದಾಪುರ, ಗಣೇಶ್ ಎರ್ಮಾಲ್, ಸುಂದರಂ, ಶ್ರೀಧರ್ ಬೈಂದೂರು, ವಿಜಯ್ ಬೈಂದೂರು, ಮೃಣಾಲಿನಿ […]

ಎಲಿಯಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವ ಸಂಭ್ರಮ.

ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲಿಯಾಳದ ಇದರ ಅಮೃತ ಮಹೋತ್ಸವ ಸಮಾರಂಭ ಹಾಗೂ ನೂತನ ರಂಗಮಂದಿರ ಉದ್ಘಾಟನಾ ಸಮಾರಂಭವು ಫೆ.17 ರಂದು ನಡೆಯಿತು. ಕಣಂಜಾರು ಲೂರ್ದ್ ಮಾತೆಯ ದೇವಾಲಯದಸ ಧರ್ಮಗುರುಗಳಾದ ರೆ| ಫಾ| ದರ್ ಹೆರಾಲ್ಡ್ ಪಿರೇರಾ ನೂತನ ರಂಗಮಂದಿರವನ್ನು ಉದ್ಘಾಟಿಸಿ ದಾನಿಗಳ ಸಹಕಾರದಿಂದ ಶಾಲೆಯು ಅಭಿವೃದ್ಧಿಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಶಾಲೆಯ ಇನ್ನಷ್ಟು ಬೇಡಿಕೆಗಳು ದಾನಿಗಳ ಸಹಕಾರದಿಂದ ಇಡೇರಲಿ ಅಮೃತಮಹೋತ್ಸವವು ಅರ್ಥಪೂರ್ಣವಾಗಿ ನಡೆಯುತ್ತಿದ್ದು ಶತಮನೋತ್ಸವನ್ನು ಅದ್ದೂರಿಯಲ್ಲಿ ಅಚರಿಸುವಂತಾಗಲಿ ಎಂದು ಶುಭ ಹಾರೈಸಿದರು. ಶಾಲಾ ಅಭಿವೃದ್ಧಿ ಮತ್ತು […]

ಕುಂದಾಪುರ: ಬೈಕ್ ಗೆ ಲಾರಿ ಡಿಕ್ಕಿ; ಬ್ಯಾಂಕ್ ಮ್ಯಾನೇಜರ್ ಮೃತ್ಯು

ಉಡುಪಿ: ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ರಾ.ಹೆ.66ರ ಆರಾಟೆ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.ಮೃತರನ್ನು ರಾಹುಲ್ ಬಾಲಕೃಷ್ಣ ರಣಕಂಬೆ ಎಂದು ಗುರುತಿಸಲಾಗಿದೆ. ಮೂಲತಃ ಮಹಾರಾಷ್ಟ್ರದವರಾದ ರಾಹುಲ್ ಅವರು, ಮರವಂತೆ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಬ್ಯಾಂಕಿನ ಕರ್ತವ್ಯ ಮುಗಿಸಿ ತನ್ನ ಬೈಕಿನಲ್ಲಿ ಕುಂದಾಪುರದ ಮನೆಗೆ ತೆರಳುತ್ತಿದ್ದ ವೇಳೆ ಆರಾಟೆ ಬಸ್ ನಿಲ್ದಾಣದ ಬಳಿ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಪರಿಣಾಮ ರಾಹುಲ್ […]

12ನೇ ವರ್ಷದ ವಾಮಂಜೂರು ತಿರುವೈಲುಗುತ್ತು “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು: ಫೆ.17 ರಂದು ನಡೆದ 12ನೇ ವರ್ಷದ ವಾಮಂಜೂರು ತಿರುವೈಲುಗುತ್ತು “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿದೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 06 ಜೊತೆ ಅಡ್ಡಹಲಗೆ: 05 ಜೊತೆ ಹಗ್ಗ ಹಿರಿಯ: 14 ಜೊತೆ ನೇಗಿಲು ಹಿರಿಯ: 35 ಜೊತೆ ಹಗ್ಗ ಕಿರಿಯ: 23 ಜೊತೆ ನೇಗಿಲು ಕಿರಿಯ: 83 ಜೊತೆ ಒಟ್ಟು ಕೋಣಗಳ ಸಂಖ್ಯೆ: 166 ಜೊತೆ ಕನೆಹಲಗೆ: ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: […]

ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ನಿವಾಸಿ ವೆಂಟೇಶ್ ನಾಗರಾಜ್(32) ಎಂಬ ವ್ಯಕ್ತಿಯು 2022 ರ ಜೂನ್ 19 ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತಮಿಳು ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರ ಪ್ರಕಟನೆ ತಿಳಿಸಿದೆ.